ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 9ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಗುಜರಾತ್ ಜೈಂಟ್ಸ್ ವಿರುದ್ಧ 6 ರನ್‌ಗಳ ರೋಚಕ ಗೆಲುವು ಸಾಧಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ರಾಜಸ್ಥಾನ, ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 210 ರನ್‌ಗಳ ಭರ್ಜರಿ ಮೊತ್ತ ಪೇರಿಸಿತು.
ರಾಜಸ್ಥಾನ ಪರ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ ಧ್ರುವ್ ಜುರೆಲ್ 42 ಎಸೆತಗಳಲ್ಲಿ 5 ಬೌಂಡರಿ ಮತ್ತು 5 ಸಿಕ್ಸ್‌ಗಳೊಂದಿಗೆ 75 ರನ್‌ಗಳ ಮಿಂಚಿನ ಇನ್ನಿಂಗ್ಸ್ ಆಡಿದರು. ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ 55 ರನ್‌ಗಳ ನೆರವು ನೀಡಿದರು. ವೈಭವ್ ಸೂರ್ಯವಂಶಿ 31, ಶಿಮ್ರಾನ್ ಹೆಟ್ಮೆಯರ್ 18, ರವೀಂದ್ರ ಜಡೇಜಾ 7* ಮತ್ತು ಜೋಫ್ರಾ ಆರ್ಚರ್ 1* ರನ್ ಗಳಿಸಿದರು.

ಗುಜರಾತ್ ಪರ ಬೌಲಿಂಗ್‌ನಲ್ಲಿ ಕಗಿಸೊ ರಬಾಡ 2 ವಿಕೆಟ್ ಪಡೆದು ಗಮನ ಸೆಳೆದರು. ಉಳಿದಂತೆ ರಶೀದ್ ಖಾನ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ ಮತ್ತು ಅಶೋಕ್ ಶರ್ಮಾ ತಲಾ 1 ವಿಕೆಟ್ ಪಡೆದರು.
ಇದನ್ನೂ ಓದಿ: IPL: ರಿಜ್ವಿ ಅಬ್ಬರಕ್ಕೆ ಮಣಿದ ಮುಂಬೈ: ಡೆಲ್ಲಿ ಕ್ಯಾಪಿಟಲ್ಸ್‌ಗೆ ಭರ್ಜರಿ ಗೆಲುವು

211 ರನ್‌ಗಳ ಗುರಿ ಬೆನ್ನತ್ತಿದ ಗುಜರಾತ್ ಜೈಂಟ್ಸ್ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 204 ರನ್ ಗಳಿಸಲಷ್ಟೇ ಶಕ್ತವಾಯಿತು. ತಂಡದ ಪರ ಸಾಯಿ ಸುದರ್ಶನ್ 44 ಎಸೆತಗಳಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್‌ಗಳೊಂದಿಗೆ 73 ರನ್ ಬಾರಿಸಿ ಕೊನೆಯವರೆಗೂ ಹೋರಾಟ ನಡೆಸಿದರು. ರಶೀದ್ ಖಾನ್ 24 ರನ್ ಹಾಗೂ ಕಗಿಸೊ ರಬಾಡ 23* ರನ್, ಜೋಸ್ ಬಟ್ಲರ್ 26, ಕುಮಾರ್ ಕುಶಾಗ್ರ 18, ರಾಹುಲ್ ತೆವಾಟಿಯಾ 12, ಶಾರುಖ್ ಖಾನ್ 11 ರನ್ ಗಳಿಸಿದರು. ಅಶೋಕ್ ಶರ್ಮಾ (0*) ಕ್ರೀಸ್‌ನಲ್ಲಿ ಉಳಿದರು.
ರಾಜಸ್ಥಾನ ಪರ ಬೌಲಿಂಗ್‌ನಲ್ಲಿ ರವಿ ಬಿಷ್ಣೋಯಿ 4 ವಿಕೆಟ್ ಪಡೆದು ಗೆಲುವಿನ ಹೀರೋ ಆಗಿ ಹೊರಹೊಮ್ಮಿದರು. ರಿಯಾನ್ ಪರಾಗ್, ನಾಂದ್ರೆ ಬರ್ಗರ್ ಮತ್ತು ತುಷಾರ್ ದೇಶಪಾಂಡೆ ತಲಾ 1 ವಿಕೆಟ್ ಪಡೆದು ಉತ್ತಮ ಬೆಂಬಲ ನೀಡಿದರು.

ಒಟ್ಟಾರೆ, ಧ್ರುವ್ ಜುರೆಲ್ ಅವರ ಸ್ಪೋಟಕ ಬ್ಯಾಟಿಂಗ್ ಹಾಗೂ ರವಿ ಬಿಷ್ಣೋಯಿ ಅವರ ಘಾತಕ ಬೌಲಿಂಗ್ ನೆರವಿನಿಂದ ರಾಜಸ್ಥಾನ ರಾಯಲ್ಸ್ ತಂಡ ಗುಜರಾತ್ ಜೈಂಟ್ಸ್ ವಿರುದ್ಧ ರೋಚಕವಾಗಿ 6 ರನ್‌ಗಳ ಜಯ ದಾಖಲಿಸಿತು.
ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

