ಅಹಮದಾಬಾದ್: ಅಹಮದಾಬಾದ್ನಲ್ಲಿ ಟೀಂ ಇಂಡಿಯಾ ಮೂರನೇ ಬಾರಿಗೆ ಟಿ20 ವಿಶ್ವಕಪ್ ಎತ್ತಿ ಹಿಡಿದು ಇತಿಹಾಸ ನಿರ್ಮಿಸಿದೆ. ಆದರೆ, ಭಾರತದ ಈ ಅದ್ಭುತ ಯಶಸ್ಸು ಪಾಕಿಸ್ತಾನದ ಕ್ರಿಕೆಟ್ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಪಾಕ್ನ ಹಿರಿಯ ಕ್ರಿಕೆಟಿಗ ಅಹಮದ್ ಶೆಹಜಾದ್, ತಮ್ಮದೇ ದೇಶದ ಕ್ರಿಕೆಟ್ ಮಂಡಳಿ ಮತ್ತು ತಂಡದ ಪ್ರದರ್ಶನವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಅಹಮದ್ ಶೆಹಜಾದ್ ಹೇಳಿದ್ದೇನು?

ಭಾರತದ ಗೆಲುವಿನ ನಂತರ ಮಾಧ್ಯಮವೊಂದರ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಶೆಹಜಾದ್, ಪಾಕಿಸ್ತಾನ ತಂಡದ ಹೀನಾಯ ಸ್ಥಿತಿಯ ಬಗ್ಗೆ ಅಸಮಾಧಾನ ಹೊರಹಾಕಿದರು. “ನಾವು ಕೀನ್ಯಾ ಮತ್ತು ಉಗಾಂಡದಂತಹ ದುರ್ಬಲ ತಂಡಗಳನ್ನು ಸೋಲಿಸಿ ದೊಡ್ಡ ಸಾಧನೆ ಮಾಡಿದ್ದೇವೆ ಎಂದು ಬೀಗುತ್ತಿದ್ದೇವೆ. ಆದರೆ ಅಸಲಿ ಕ್ರಿಕೆಟ್ ಹೇಗಿರಬೇಕು ಎಂಬುದನ್ನು ಭಾರತ ತೋರಿಸಿಕೊಟ್ಟಿದೆ” ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಈ ಸಲನೂ ಕಪ್ ನಮ್ದೇ: ನ್ಯೂಜಿಲ್ಯಾಂಡ್ ಮಣಿಸಿ ಟಿ20 ವಿಶ್ವಕಪ್ ಗೆದ್ದ ಭಾರತ
ಭಾರತ ತಂಡವು ವಿಶ್ವದ ಬಲಿಷ್ಠ ತಂಡಗಳನ್ನು ಮಣಿಸಿ ಚಾಂಪಿಯನ್ ಆಗಿದ್ದರೆ, ಪಾಕಿಸ್ತಾನ ತಂಡವು ಕೇವಲ ಸಣ್ಣ ತಂಡಗಳ ವಿರುದ್ಧ ಗೆದ್ದು ಸಂಭ್ರಮಿಸುತ್ತಿದೆ ಎಂದು ಅವರು ಟೀಕಿಸಿದ್ದಾರೆ.ಪಾಕಿಸ್ತಾನ ಕ್ರಿಕೆಟ್ನಲ್ಲಿರುವ ರಾಜಕೀಯ ಮತ್ತು ಪ್ರತಿಭೆಗಳನ್ನು ಗುರುತಿಸುವಲ್ಲಿ ಆಗುತ್ತಿರುವ ವಿಫಲತೆಯೇ ಈ ದುಸ್ಥಿತಿಗೆ ಕಾರಣ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.ಈ ಹಿಂದೆ ಮೊಹಮ್ಮದ್ ಅಮೀರ್ ಕೂಡ “ಭಾರತ ಫೈನಲ್ ತಲುಪುವುದಿಲ್ಲ” ಎಂದು ಭವಿಷ್ಯ ನುಡಿದಿದ್ದರು, ಆದರೆ ಭಾರತದ ಗೆಲುವು ಅವರ ಭವಿಷ್ಯವನ್ನೂ ಸುಳ್ಳಾಗಿಸಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

