ಮಜ್ಜಿಗೆ ಹಂಚಲು 3000 ಎಕರೆ ಜಮೀನು ದಾನ ಮಾಡಿದ ಖ್ಯಾತ ನಟನ ಅಜ್ಜ?

ಹೈದರಾಬಾದ್: ದಾನ-ಧರ್ಮಕ್ಕೆ ಹೆಸರಾದ ಭಾರತೀಯ ಇತಿಹಾಸದಲ್ಲಿ ಇಂದಿಗೂ ನಂಬಲಾಗದ ಹಲವು ಘಟನೆಗಳು ದಾಖಲಾಗಿವೆ. ತೆಲುಗಿನ ಖ್ಯಾತ ನಟ, ರೆಬೆಲ್ ಸ್ಟಾರ್ ಕೃಷ್ಣಂ ರಾಜು ಅವರ ಪೂರ್ವಜರು ಇಂತಹದ್ದೇ ಒಂದು ಅಪರೂಪದ ದಾನ ಮಾಡಿ ಇಂದಿಗೂ ಮನೆಮಾತಾಗಿದ್ದಾರೆ.

ವರದಿಗಳ ಪ್ರಕಾರ, ಕೃಷ್ಣಂ ರಾಜು ಅವರ ಅಜ್ಜ ( ಪೂರ್ವಜರು) ಪಶ್ಚಿಮ ಗೋದಾವರಿ ಜಿಲ್ಲೆಯ ಮೊಗಲ್ತೂರು ಭಾಗದ ಜಮೀನ್ದಾರರಾಗಿದ್ದರು. ಅಂದಿನ ಕಾಲದಲ್ಲಿ ಪ್ರಯಾಣಿಕರಿಗೆ ಮತ್ತು ಹಸಿದವರಿಗೆ ನೆರವಾಗಲು ಅವರು ದಾರಿಯುದ್ದಕ್ಕೂ ‘ಚಲಿವೇಂದ್ರ’ (ಬೇಸಿಗೆಯಲ್ಲಿ ನೀರು ಮತ್ತು ಮಜ್ಜಿಗೆ ಹಂಚುವ ಕೇಂದ್ರ) ಸ್ಥಾಪಿಸಿದ್ದರು. ಕೇವಲ ಮಜ್ಜಿಗೆ ಹಂಚುವ ಈ ಕಾರ್ಯ ನಿರಂತರವಾಗಿ ನಡೆಯಲಿ ಎಂಬ ಕಾರಣಕ್ಕಾಗಿ ಅವರು ಬರೋಬ್ಬರಿ 3,000 ಎಕರೆ ಫಲವತ್ತಾದ ಭೂಮಿಯನ್ನು ದಾನವಾಗಿ ಬರೆದುಕೊಟ್ಟಿದ್ದರು ಎಂದು ಹೇಳಲಾಗುತ್ತದೆ.

Advertisement

ಇದನ್ನೂ ಓದಿ: ತಮಿಳುನಾಡಿಗರಿಗೆ ದಳಪತಿ ವಿಜಯ್ ಬಂಪರ್ ಘೋಷಣೆ: ಉಚಿತ ಬಸ್​​​ ಪ್ರಯಾಣ, ಮಗುವಿಗೆ ಚಿನ್ನದ ಉಂಗುರ

ಕೃಷ್ಣಂ ರಾಜು ಅವರ ಕುಟುಂಬ ಇಂದಿಗೂ ತಮ್ಮ ದಾನಗುಣಕ್ಕೆ ಹೆಸರಾಗಿದ್ದು, ಅವರ ಉತ್ತರಾಧಿಕಾರಿಯಾಗಿ ನಟ ಪ್ರಭಾಸ್ (Prabhas) ಕೂಡ ಅಷ್ಟೇ ಉದಾರ ಮನಸ್ಸಿನವರು ಎಂಬುದು ಅಭಿಮಾನಿಗಳ ನಂಬಿಕೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

 

Leave a Reply

Your email address will not be published. Required fields are marked *