ಕೋಲ್ಕತ್ತಾ (ಪಶ್ಚಿಮ ಬಂಗಾಳ): ರಸ್ತೆಯಲ್ಲಿ ವೇಗವಾಗಿ ಚಲಿಸುತ್ತಿರುವ ಬೈಕ್, ಆ ಬೈಕ್ ಚಲಾಯಿಸುತ್ತಿರುವ ವ್ಯಕ್ತಿಯ ಕೈಯಲ್ಲೊಂದು ಸರಪಳಿ (Leash), ಆ ಸರಪಳಿಗೆ ಸಿಲುಕಿ ಬೈಕ್‌ನ ವೇಗಕ್ಕೆ ಸರಿಯಾಗಿ ಓಡಲಾರದೆ ನರಳುತ್ತಿರುವ ನಾಯಿ! ಇದು ಕಲ್ಯಾಣಿ ಎಕ್ಸ್‌ಪ್ರೆಸ್‌ವೇನಲ್ಲಿ ಕಂಡುಬಂದ ದಾರುಣ ದೃಶ್ಯ.ಪಶ್ಚಿಮ ಬಂಗಾಳದ ಕಲ್ಯಾಣಿ ಎಕ್ಸ್‌ಪ್ರೆಸ್‌ವೇನಲ್ಲಿ ಬೈಕ್ ಸವಾರರಿಬ್ಬರು ತಮ್ಮ ಸಾಕು ನಾಯಿಯ ಕುತ್ತಿಗೆಗೆ ಸರಪಳಿ ಕಟ್ಟಿ, ಬೈಕ್ ಚಲಾಯಿಸುತ್ತಾ ಅದನ್ನು ರಸ್ತೆಯ ಮೇಲೆ ಓಡಿಸಿದ್ದಾರೆ. ಅತೀ ವೇಗವಾಗಿ ಚಲಿಸುತ್ತಿದ್ದ ಬೈಕ್‌ನೊಂದಿಗೆ ಓಡಲಾಗದೆ ಆ ಮೂಕ ಪ್ರಾಣಿ ಪರದಾಡಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಆ ನಾಯಿ ಗರ್ಭಿಣಿಯಾಗಿದ್ದು, ಅದರ ಸ್ಥಿತಿ ಅತ್ಯಂತ ಶೋಚನೀಯವಾಗಿತ್ತು.
#Police can do whatever they want. In a shocking incident on the Kalyani Expressway, the owners riding on a motorbike & dog running alongside while holding it by a leash tied around its neck. The dog is probably pregnant.
@WBPolice @KolkataPolice pic.twitter.com/cgaxcy2aDI
— Flyora/Florian Gaishun (@el__fuser) March 13, 2026
ಪೊಲೀಸರು ತಮಗೆ ಇಷ್ಟ ಬಂದಂತೆ ವರ್ತಿಸಬಹುದು, ಆದರೆ ಇಂತಹ ಕ್ರೌರ್ಯವನ್ನು ಸುಮ್ಮನೆ ಬಿಡಬಾರದು ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಪ್ರಾಣಿ ದಯಾ ಸಂಘಗಳು ಮತ್ತು ನಾಗರಿಕರು ಬೈಕ್ ಸವಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಅಪರೂಪದಲ್ಲಿ ಅಪರೂಪ! 25 ವರ್ಷದ ಗರ್ಭಿಣಿ ಜನ್ಮ ನೀಡಿದ ಮಗುವಿನ ಕೆಜಿ ಎಷ್ಟು ಗೊತ್ತಾ?
ಈ ಕಾಯ್ದೆಯ ಅಡಿಯಲ್ಲಿ ಯಾವುದೇ ಪ್ರಾಣಿಗೆ ಅನಗತ್ಯ ನೋವು ಅಥವಾ ಹಿಂಸೆ ನೀಡುವುದು ಶಿಕ್ಷಾರ್ಹ ಅಪರಾಧವಾಗಿದೆ.ಪ್ರಾಣಿಗಳನ್ನು ಹಿಂಸಿಸುವುದು ಅಥವಾ ಅವುಗಳ ಜೀವಕ್ಕೆ ಅಪಾಯ ತರುವಂತಹ ಕೃತ್ಯವೆಸಗುವವರ ವಿರುದ್ಧ ಎಫ್‌ಐಆರ್ ದಾಖಲಿಸಿ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


