ಬಂಟ್ಬಾಳ: ತಾಲೂಕಿನ ಮಂಚಿ ಗ್ರಾಮದ ಶ್ರೀ ಕ್ಷೇತ್ರ ಮೋಂತಿಮಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾಮಹೋತ್ಸವ ಮಾ.23 ಮತ್ತು ಮಾ.24 ರಂದು ನಡೆಯಲಿದೆ.
ಮಾ.23 ರಂದು ಪ್ರಾಃತಕಾಲದಲ್ಲಿ ದೇವತಾ ಪ್ರಾರ್ಥನೆ, ದುರ್ಗಾಹವನ ನಡೆಯಲಿದೆ. ಮಧ್ಯಾಹ್ನ 12 ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 8:30ಕ್ಕೆ ಮಹಾಪೂಜೆ ನಡೆದು 8:45ರಿಂದ ಶ್ರೀ ದೇವಿಯ ಪಲ್ಲಕ್ಕಿ ಉತ್ಸವ ನಡೆದು ಪ್ರಸಾದ ವಿತರಣೆ ನಡೆಯಲಿದೆ. ಅನ್ನಸಂತರ್ಪಣೆಯೂ ನಡೆಯಲಿದೆ.

ಕೊಕ್ಕಪುಣಿ ದಿ.ನಾರಾಯಣ ಪ್ರಭು ಅವರ ಸ್ಮರಣಾರ್ಥ ಅವರ ಕುಟುಂಬಸ್ಥರಿಂದ ಈ ಸೇವಾ ಉತ್ಸವ ಹಾಗೂ ಅನ್ನಸಂತರ್ಪಣೆ ನೆರವೇರಲಿದೆ.
ಜೈ ಹನುಮಾನ್ ಸಿನಿ ನಾಟಕ ಪ್ರದರ್ಶನ
ವಿಧಾತ್ರೀ ಕಲಾವಿದೆರ್ ಕುಡ್ಲ ತಂಡದಿಂದ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದಲ್ಲಿ ಚಿದಾನಂದ ಅದ್ಯಪಾಡಿ ಅವರ ಸಾರಥ್ಯದಲ್ಲಿ ಭರತ್ ಎಸ್ ಕರ್ಕೇರ ರಚಿಸಿದ ಜೈ ಹನುಮಾನ್ ಎಂಬ ಸಿನಿ ನಾಟಕ ಪ್ರದರ್ಶನ ನಡೆಯಲಿದೆ.
ಮಾ.24 ರಂದು ಬೆಳಗ್ಗೆ 10:30 ರಿಂದ ವಾರ್ಷಿಕ ಮಹಾಸಭೆ ನಡೆಯಲಿದೆ. ಮಧ್ಯಾಹ್ನ 12:30ಕ್ಕೆ ಮಹಾಪೂಜೆ ನಡೆಯಲಿದೆ. ದಿ.ರತ್ನಮ್ಮ ಮತ್ತು ದಿ.ಸದಾಶಿವ ಪ್ರಭು ಅವರ ಸ್ಮರಣಾರ್ಥ ಅವರ ಮಕ್ಕಳಿಂದ ಅನ್ನಸಂತರ್ಪಣೆ ನಡೆಯಲಿದೆ.
ರಾತ್ರಿ 7 ರಿಂದ ರೇಖಾಪ್ರಶಾಂತ್ ಅವರ ನಟರಾಜ ನೃತ್ಯಾಲಯ ಇರಾ ತಂಡದಿಂದ ನೃತ್ಯ ವೈಭವ ನಡೆಯಲಿದೆ.
ರಾತ್ರಿ 8:30ಕ್ಕೆ ಮಹಾಪೂಜೆ ನಡೆದು 8:45ಕ್ಕೆ ಶ್ರೀ ದೇವಿಯ ಪಲ್ಲಕ್ಕಿ ಉತ್ಸವ ನಡೆಯಲಿದೆ. ಬಳಿಕ ಪ್ರಸಾದ ವಿತರಣೆ ನಡೆಯಲಿದೆ. 9 ರಿಂದ ಪ್ರಸಾದ ಭೋಜನ ನಡೆಯಲಿದೆ.
10:30 ಕ್ಕೆ ಕಟ್ಟೆ ಪೂಜೆ ಸಂದರ್ಭದಲ್ಲಿ ಶ್ರೀ ದುರ್ಗಾ ಮಹಿಳಾ ಮಂಡಳಿಯಿಂದ ಕುಣಿತ ಭಜನೆ ಮತ್ತು ಮಕ್ಕಳಿಂದ ಭರತನಾಣ್ಯ ಪ್ರದರ್ಶನ ನಡೆಯಲಿದೆ.
ಸಾಮೂಹಿಕ ಕುಂಕುಮಾರ್ಚನೆ
ಮಾ.22 ರಂದು ರಾತ್ರ 8 ಗಂಟೆಯಿಂದ ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ ಸೇವೆ ನಡೆಯಲಿದೆ. ಇದಕ್ಕೂ ಮುನ್ನ ಸಂಜೆ 6:30 ರಿಂದ ನೂತನ ಭೋಜನಾ ಶಾಲೆಯಲ್ಲಿ ವಾಸ್ತು ಹೋಮ ನಡೆಯಲಿದೆ.
ಜಾತ್ರಾಮಹೋತ್ಸವವು ವಿವಿಧ ವೈದಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತನು-ಮನ-ಧನಗಳಿಂದ ಸಹಕರಿಸಬೇಕಾಗಿ ಕ್ಷೇತ್ರದ ಆಡಳಿತ ಮಂಡಳಿ ಮೊಕ್ತೇಸರ ಸಹಕಾರ ರತ್ನ ಎಸ್.ಆರ್.ಸತೀಶ್ಚಂದ್ರ, ಸಹ ಮೊಕ್ತೇಸರರು, ಸದಸ್ಯರು, ಶ್ರೀ ದುರ್ಗಾ ಭಜನಾ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

