ಹೋಬರ್ಟ್: ಎರಡನೇ ಏಕದಿನ ಪಂದ್ಯಾವಳಿಯಲ್ಲಿ ಜಾರ್ಜಿಯಾ ವೋಲ್ ಅವರ ಶತಕದ ನೆರವಿನಿಂದ ಆಸ್ಟ್ರೇಲಿಯಾ ಮಹಿಳಾ ತಂಡ ಭಾರತ ಮಹಿಳಾ ತಂಡವನ್ನು 5 ವಿಕೆಟ್‌ಗಳಿಂದ ಮಣಿಸಿ, ಮೂರು ಪಂದ್ಯಗಳ ಸರಣಿಯಲ್ಲಿ ಇನ್ನು ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ವಶಪಡಿಸಿಕೊಂಡಿದೆ.
ಇಲ್ಲಿನ ಬೆಲ್ಲೆರೈವ್ ಓವಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 251 ರನ್ ಗಳಿಸಿತು.

ಇದನ್ನೂ ಓದಿ: ಕೊಡಗು: ಹಿಂದು ಕಾರ್ಯಕರ್ತನ ಮೇಲೆ ಹಲ್ಲೆ, ಬಿಜೆಪಿಯಿಂದ ಖಂಡನೆ
ತಂಡದ ಪರ ನಾಯಕಿ ಹರ್ಮನ್‌ಪ್ರೀತ್ ಸಿಂಗ್ 54 , ಪ್ರತಿಕಾ ರಾವಲ್ 52, ಸ್ಮೃತಿ ಮಂದಾನ 31, ಕಶ್ವೀ ಗೌತಮ್ 25 ರನ್ ಗಳಿಸಿದರು. ಆಸ್ಟ್ರೇಲಿಯಾ ಪರ ಆಶ್ಲೆಗ್ ಗಾರ್ಡನರ್, ಅನ್ನ ಬೆಲ್ ಸುತರ್‌ಲ್ಯಾಂಡ್ ಮತ್ತು ಅಲನಾ ಕಿಂಗ್ ತಲಾ 2 ಮತ್ತು ಮೆಗನ್ ಚುತ್ ಮತ್ತು ನಿಕೊಲಾ ಕ್ಯಾರಿ ತಲಾ ಒಂದು ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 36.1 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಗುರಿ ತಲುಪಿ ಸರಣಿಯನ್ನು ಕೈವಶ ಮಾಡಿಕೊಂಡಿತು. ತಂಡದ ಪರ ಜಾರ್ಜಿಯಾ ವೋಲ್ ಆಕರ್ಷಕ ಶತಕ ಗಳಿಸಿದರು. 82 ಎಸೆತಗಳಲ್ಲಿ 101 ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಫೋಬಿ ಲಿಚ್‌ಫೀಲ್ಡ್ 80, ಬೆತ್ ಮೂನಿ 31 ರನ್ ಗಳಿಸಿದರು. ಭಾರತ ಪರ ಕಶ್ವೀ ಗೌತಮ್, ದೀಪ್ತಿ ಶರ್ಮಾ ತಲಾ 2, ಕ್ರಾಂತಿ ಗೌಡ್ ಒಂದು ವಿಕೆಟ್ ಪಡೆದರು.
ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ 2-0 ಅಂತರದಿಂದ ಮುನ್ನಡೆ ಕಾಯ್ದುಕೊಂಡು ಸರಣಿ ವಶಪಡಿಸಿಕೊಂಡಿದೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

