ಬಿಡದಿ: ಪ್ರೀತಿಸಿ ಮದುವೆಯಾಗಲು ನಿರಾಕರಿಸಿದ ಪ್ರಿಯಕರನಿಗೆ ಪ್ರೇಯಸಿಯೊಬ್ಬಳು ಚಾಕುವಿನಿಂದ ಇರಿದಿರುವ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಬಿಡದಿಯಲ್ಲಿ ನಡೆದಿದೆ. ಜಿಮ್ ಟ್ರೈನರ್ ಆಗಿರುವ ಯುವಕನ ಮೇಲೆ ಸುಧಾ ಎಂಬ ಯುವತಿ ಈ ದಾಳಿ ನಡೆಸಿದ್ದಾಳೆ.ಬಿಡದಿಯಲ್ಲಿ ಜಿಮ್ ಟ್ರೈನರ್ ಆಗಿರುವ ವೇಣುಗೋಪಾಲ್ (27) ಮತ್ತು ಖಾಸಗಿ ಕಂಪನಿಯ ಉದ್ಯೋಗಿ ಸುಧಾ (30) ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದರು. ಜಿಮ್‌ನಲ್ಲಿ ಪರಿಚಯವಾಗಿದ್ದ ಇವರ ನಡುವೆ ವಯಸ್ಸಿನ ಅಂತರವಿದ್ದರೂ ಪ್ರೇಮಾಂಕುರವಾಗಿತ್ತು.
ಳೆದ ನಾಲ್ಕು ತಿಂಗಳಿಂದ ವೇಣುಗೋಪಾಲ್ ಸುಧಾಳನ್ನು ನಿರ್ಲಕ್ಷಿಸಲು (Avoid) ಶುರು ಮಾಡಿದ್ದನಲ್ಲದೆ, ಮದುವೆಯಾಗಲು ನಿರಾಕರಿಸಿದ್ದನು. ಅಲ್ಲದೆ, ಅವನು ಬೇರೊಬ್ಬ ಯುವತಿಯ ಜೊತೆ ಸುತ್ತಾಡುತ್ತಿದ್ದನು ಎಂಬುದು ಸುಧಾಳ ಕೋಪಕ್ಕೆ ಕಾರಣವಾಗಿತ್ತು.ಸುಧಾ ಕಳೆದ ಒಂದು ವಾರದಿಂದ ತನ್ನ ಬ್ಯಾಗ್‌ನಲ್ಲಿ ಚಾಕು ಇಟ್ಟುಕೊಂಡು ತಿರುಗುತ್ತಿದ್ದಳು.

ನಿನ್ನೆ ಸಂಜೆ ಮಾತನಾಡಬೇಕು ಎಂದು ವೇಣುಗೋಪಾಲ್‌ನನ್ನು ಮನೆಯಿಂದ ಹೊರಕ್ಕೆ ಕರೆಸಿಕೊಂಡ ಸುಧಾ, ಮಾತಿನ ನಡುವೆ ಏಕಾಏಕಿ ಚಾಕುವಿನಿಂದ ಆತನ ಹೊಟ್ಟೆ, ಎದೆ ಮತ್ತು ಕೈ ಭಾಗಕ್ಕೆ ಇರಿದಿದ್ದಾಳೆ.ರಕ್ತದ ಮಡುವಿನಲ್ಲಿ ಬಿದ್ದಿದ್ದ ವೇಣುಗೋಪಾಲ್ ಹೇಗೋ ತನ್ನ ಸ್ನೇಹಿತರು ಮತ್ತು ಕುಟುಂಬಸ್ಥರಿಗೆ ಕರೆ ಮಾಡಿದ್ದು, ಸದ್ಯ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಅಸ್ಸಾಂನಲ್ಲಿ ಭಾವಿ ಪತಿ ಮುಂದೆಯೇ ಯುವತಿಯ ಗ್ಯಾಂಗ್ ರೇಪ್

ಘಟನೆ ನಡೆದ ಬಳಿಕ ಸುಧಾ ಸ್ಥಳದಿಂದ ಪರಾರಿಯಾಗಿದ್ದಳು. ಆದರೆ ಬಿಡದಿ ಪೊಲೀಸರು ತನಿಖೆ ನಡೆಸಿ ಆರೋಪಿ ಸುಧಾಳನ್ನು ವಶಕ್ಕೆ ಪಡೆದಿದ್ದಾರೆ. ಪ್ರೀತಿಯಲ್ಲಿ ಮೋಸ ಮತ್ತು ಮದುವೆಗೆ ನಿರಾಕರಣೆಯೇ ಈ ಕೃತ್ಯಕ್ಕೆ ಕಾರಣ ಎಂದು ತಿಳಿದುಬಂದಿದೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

