ಬಂಟ್ವಾಳ: ಬಂಟ್ವಾಳ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ ಬರುವ ಪುರಸಭೆ ಹಾಗೂ ವಿವಿಧ ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ಖಾಲಿ ಇರುವ ಅಂಗನವಾಡಿ ಹುದ್ದೆಗಳ ಭರ್ತಿಗೆ ಅಧಿಕೃತ ಚಾಲನೆ ಸಿಕ್ಕಿದೆ. ಒಟ್ಟು 8 ಅಂಗನವಾಡಿ ಕಾರ್ಯಕರ್ತೆ ಹಾಗೂ 12 ಅಂಗನವಾಡಿ ಸಹಾಯಕಿಯರ ಹುದ್ದೆಗಳ ಭರ್ತಿಗಾಗಿ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಆಫ್‌ಲೈನ್ (Offline) ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ಹುದ್ದೆಗಳು ಸಂಪೂರ್ಣವಾಗಿ ತಾತ್ಕಾಲಿಕ ಮತ್ತು ಗೌರವಧನ ಆಧಾರಿತವಾಗಿದ್ದು, ಆಯ್ಕೆಯಾಗುವ ಅಭ್ಯರ್ಥಿಗಳು ನಿಗದಿಪಡಿಸಿದ ಗೌರವಧನದ ಮೇಲೆಯೇ ಕಾರ್ಯನಿರ್ವಹಿಸಲು ಸಿದ್ಧರಿರಬೇಕಾಗುತ್ತದೆ ಎಂದು ಇಲಾಖೆ ತಿಳಿಸಿದೆ.

ಹುದ್ದೆಗಳ ವಿವರ ಮತ್ತು ಅಂಗನವಾಡಿ ಕೇಂದ್ರಗಳು:
ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗಳು (8 ಹುದ್ದೆಗಳು):
ಕೆಳಗಿನ ಅಂಗನವಾಡಿ ಕೇಂದ್ರಗಳಿಗೆ ಕಾರ್ಯಕರ್ತೆಯರು ಬೇಕಾಗಿದ್ದಾರೆ:
ಕುಕ್ಕಿಪಾಡಿಯ ಮಾಡಾಮೆ
ಪುರಸಭೆ ವ್ಯಾಪ್ತಿಯ ಬಿ. ಮೂಡ ವಾರ್ಡ್ ನಂಬರ್ 11 ರ ಗೂಡಿನ ಬಳಿ
ಅಮ್ಮುಂಜೆಯ ಧಾರೆಕಟ್ಟೆ
ಪಾಂಡೇಲು
ಕರಿಯಂಗಳದ ಗುಂಡಿಕುಮೇರು
ಸಜೀಪನಡುವಿನ ಸಜೀಪನಡುಪೇಟೆ
ಸರಪಾಡಿಯ ಕುಂಟಾಲಪಲ್ಕೆ
ಪುರಸಭೆ ಬಿ.ಮೂಡ ವಾರ್ಡ್ ನಂಬರ್ 10 -ಕಾಮಾಜೆ
ಇದನ್ನೂ ಓದಿ: ರಜತ ಮಹೋತ್ಸವ: ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದಿಂದ ಬೆಂಗಳೂರಿನಲ್ಲಿ ಬೆಳ್ಳಿ ಬೆಳಕು ಆಚರಣೆ
ಅಂಗನವಾಡಿ ಸಹಾಯಕಿಯರ ಹುದ್ದೆಗಳು (12 ಹುದ್ದೆಗಳು):
ಕೆಳಗಿನ ಅಂಗನವಾಡಿ ಕೇಂದ್ರಗಳಿಗೆ ಸಹಾಯಕಿಯರು ಬೇಕಾಗಿದ್ದಾರೆ:
ಬಡಗಕಜೆಕಾರು ನ ಹಾಡೋಣು
ಪುರಸಭೆ ಬಿ.ಕಸಬ ವಾರ್ಡ್ ನಂಬರ್ 1 ರ ಲೊರೆಟ್ಟೊಪದವು
ಬಾಳ್ತಿಲದ ಸಣ್ಣಕುಕ್ಕಲ್ಲಿಗೆಯ ಪಾಡೆ
ತೊಡಂಜಿಲ
ಪುರಸಭೆ ಬಿ.ಮೂಡ ವಾರ್ಡ್ ನಂಬರ್ 15 ಶಾಂತಿಯಂಗಡಿ
ನರಿಂಗಾನದ ಚೆನ್ನಕಟ್ಟೆ
ಮೇರಮಜಲು ಬಡೂರು
ಪುರಸಭೆ ಬಿ.ಕಸಬಾ ವಾರ್ಡ್ ನಂಬರ್ 05 ರ ಹೊಸಾರು
ಮಣಿನಾಲೂರು ನ ನಡುವಮೊಗರು
ಪುರಸಭೆ ಬಿ ಮೂಡ ವಾರ್ಡ್ ನಂಬರ್ 13ರ ಕೈಕುಂಜೆ
ಕುಕ್ಕಿಪಾಡಿ ಸಿದ್ದಕಟ್ಟೆ ಚರ್ಚ್
ಅರ್ಹ ಅಭ್ಯರ್ಥಿಗಳು ತಮ್ಮ ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ಬಂಟ್ವಾಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಕೈಕುಂಜೆ ಜೋಡು ಮಾರ್ಗ ಅಂಚೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹತ್ತಿರ, ಬಂಟ್ವಾಳ ಇಲ್ಲಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಕಳುಹಿಸಿಕೊಡಬೇಕೆಂದು ಇಲಾಖೆಯ ಅಧಿಕೃತ ಪ್ರಕಟಣೆ ತಿಳಿಸಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

