ಬೆಳ್ತಂಗಡಿ: ನಕಲಿ ನಂಬರ್ ಪ್ಲೇಟ್ ಅಳವಡಿಸಿ ಬೈಕ್ ಸವಾರಿ: ಯುವಕ ಅರೆಸ್ಟ್

ಬೆಳ್ತಂಗಡಿ: ನಕಲಿ ದಾಖಲೆಗಳನ್ನು ಸೃಷ್ಟಿಸಿ, ಬೇರೊಂದು ನಂಬರ್ ಪ್ಲೇಟ್ ಅಳವಡಿಸಿ ವಾಹನ ಚಲಾಯಿಸುತ್ತಿದ್ದ ಘಟನೆ ಬೆಳ್ತಂಗಡಿಯ ಸಂತೆಕಟ್ಟೆಯಲ್ಲಿ ನಡೆದಿದೆ. ಬೆಳ್ತಂಗಡಿ ಸಂಚಾರಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ.ಬಂಧಿತ ಯುವಕನನ್ನು ಕಳಿಯ ಗ್ರಾಮದ ಗೇರುಕಟ್ಟೆ ನಿವಾಸಿ ನವಾಜ್ (19) ಎಂದು ಗುರುತಿಸಲಾಗಿದೆ.

ಸಂತೆಕಟ್ಟೆ ಬಳಿ ಸಂಚಾರಿ ಉಪನಿರೀಕ್ಷಕ ಕಿಶೋರ್ ಕುಮಾರ್ ಪಿ. ಮತ್ತು ಸಿಬ್ಬಂದಿ ಶಿವಾನಂದ ಅವರು ವಾಹನ ತಪಾಸಣೆ ನಡೆಸುತ್ತಿದ್ದಾಗ ನವಾಜ್ ಸಿಕ್ಕಿಬಿದ್ದಿದ್ದಾನೆ. ದಾಖಲೆಗಳ ಪರಿಶೀಲನೆ ವೇಳೆ ಅವು ನಕಲಿ ಎಂಬುದು ದೃಢಪಟ್ಟಿದೆ.ಪೊಲೀಸರ ವಿಚಾರಣೆ ವೇಳೆ ಆಘಾತಕಾರಿ ಸತ್ಯ ಹೊರಬಂದಿದೆ. ಬೈಕ್‌ನ ಫಿಟ್‌ನೆಸ್ ಅವಧಿ ಮುಗಿದಿದ್ದರಿಂದ, ನವಾಜ್ ಫೇಸ್‌ಬುಕ್ ಜಾಹೀರಾತೊಂದನ್ನು ನೋಡಿ ನಕಲಿ ದಾಖಲೆ ಪಡೆಯಲು ಆನ್‌ಲೈನ್ ಮೂಲಕ ಹಣ ಪಾವತಿಸಿದ್ದಾಗಿ ತಿಳಿಸಿದ್ದಾನೆ.

Advertisement

ಇದನ್ನೂ ಓದಿ: ವಿಧಾನಸೌಧದ ಮುಂದೆ ಹೈಡ್ರಾಮಾ: ಮಹಿಳಾ ದಿನದಂದೇ ಯುವತಿಯರ ಬೀದಿ ಕಾಳಗ; ವಿಡಿಯೋ ವೈರಲ್!

ಸದ್ಯ ಪ್ರಕರಣವನ್ನು ಬೆಳ್ತಂಗಡಿ ಕಾನೂನು ಮತ್ತು ಸುವ್ಯವಸ್ಥೆ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಈ ನಕಲಿ ದಾಖಲೆ ಜಾಲದ ಹಿಂದೆ ದೊಡ್ಡ ಆನ್‌ಲೈನ್ ಮಾಫಿಯಾ ಇರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

 

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು