ಬೆಳ್ತಂಗಡಿ: ಬೆಂಕಿ ಹಚ್ಚಿದ್ದ ಪಟಾಕಿ ಮೇಲೆ ಕಾಲಿಟ್ಟ ಯುವಕನ ಪಾದ ಛಿದ್ರ

ಬೆಳ್ತಂಗಡಿ: ದೀಪಾವಳಿ ಸಂಭ್ರಮದ ನಡುವೆಯೇ ಭೀಕರ ದುರಂತವೊಂದು ಸಂಭವಿಸಿದ್ದು, ಬೆಂಕಿ ಹಚ್ಚಿದ್ದ ಪಟಾಕಿ ಮೇಲೆ ಬರಿಗಾಲಿನಲ್ಲಿ ಕಾಲಿಟ್ಟ ಪರಿಣಾಮ ಯುವಕನೊಬ್ಬನ ಬಲಗಾಲಿನ ಪಾದ ಸಂಪೂರ್ಣವಾಗಿ ಛಿದ್ರಗೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ ಕೊಯ್ಯೂರು ಗ್ರಾಮದ ಮಲೆಬೆಟ್ಟಿನ ಪೊರ್ಕಂಡ ನಿವಾಸಿ ಕೃಷ್ಣಪ್ಪ ಗೌಡ ಅವರ ಪುತ್ರ ಲಿಕೇಶ್ ಗೌಡ (20) ಗಂಭೀರವಾಗಿ ಗಾಯಗೊಂಡ ಯುವಕ.

ಕೊಯ್ಯೂರು ಗ್ರಾಮದ ಮಲೆಬೆಟ್ಟಿನಲ್ಲಿ ರಾತ್ರಿ ವೇಳೆ ಮನೆಯವರು ಪಟಾಕಿ ಹಚ್ಚಿ ಸಂಭ್ರಮಿಸುತ್ತಿದ್ದರು. ಈ ವೇಳೆ ಮನೆಯ ಒಳಗಿನಿಂದ ಹೊರಗೆ ಬಂದ ಲಿಕೇಶ್ ಗೌಡ, ಈಗಾಗಲೇ ಬೆಂಕಿ ಹಚ್ಚಲಾಗಿದ್ದ ಪಟಾಕಿಯನ್ನು ಗಮನಿಸದೇ ಅದರ ಮೇಲೆಯೇ ಕಾಲಿಟ್ಟಿದ್ದಾನೆ.  ಲಿಕೇಶ್ ಕಾಲಿಡುತ್ತಿದ್ದಂತೆಯೇ ಭಾರಿ ಶಬ್ದದೊಂದಿಗೆ ಪಟಾಕಿ ಸ್ಪೋಟಗೊಂಡಿದೆ. ಸ್ಪೋಟದ ರಭಸಕ್ಕೆ ಯುವಕನ ಬಲಗಾಲಿನ ಪಾದ ಸಂಪೂರ್ಣವಾಗಿ ಛಿದ್ರಗೊಂಡು ಗಂಭೀರ ಗಾಯಗಳಾಗಿವೆ.

Advertisement

ಇದನ್ನೂ ಓದಿ: 50,683 ಕೋಟಿ ರೂ. NMC ಹೆಲ್ತ್‌ಕೇರ್ ವಂಚನೆ ಪ್ರಕರಣ: ಮಂಗಳೂರು ಮೂಲದ ಬಿ.ಆರ್. ಶೆಟ್ಟಿಗೆ ಅಬುಧಾಬಿ ಕೋರ್ಟ್ ಬಿಗ್ ಶಾಕ್ 

ರಕ್ತದ ಮಡುವಿನಲ್ಲಿ ಬಿದ್ದು ತೀವ್ರ ಯಾತನೆಯಿಂದ ಬಳಲುತ್ತಿದ್ದ ಗಾಯಾಳು ಲಿಕೇಶ್ ಗೌಡನನ್ನು ತಕ್ಷಣವೇ ಸ್ಥಳೀಯರು ಹಾಗೂ ಕುಟುಂಬಸ್ಥರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಯುವಕನ ಬಲಗಾಲಿನ ಪಾದಕ್ಕೆ ತೀವ್ರ ಹಾನಿಯಾಗಿದ್ದು, ವೈದ್ಯರು ಸತತ ಚಿಕಿತ್ಸೆ ನೀಡುತ್ತಿದ್ದಾರೆ.

Advertisement

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Advertisement