ಅಂದು ನಾನು ಪ್ರಧಾನಿಯಾಗದಿರಲು ಆ ಇಬ್ಬರು ಕಾರಣ: ‘ಬಿಲಾಂಗಿಂಗ್’ ಪುಸ್ತಕದಲ್ಲಿ ರಾಜಕೀಯ ರಹಸ್ಯ ಬಿಚ್ಚಿಟ್ಟ ಸೋನಿಯಾ ಗಾಂಧಿ

ನವದೆಹಲಿ: ದಶಕಗಳಿಂದ ಭಾರತದ ಅತ್ಯಂತ ಪ್ರಭಾವಿ ರಾಜಕೀಯ ಕುಟುಂಬದ ಕೇಂದ್ರಬಿಂದುವಾಗಿದ್ದರೂ ತಮ್ಮ ವೈಯಕ್ತಿಕ ಜೀವನವನ್ನು ಅತ್ಯಂತ ರಹಸ್ಯವಾಗಿರಿಸಿದ್ದ ಕಾಂಗ್ರೇಸ್ ನಾಯಕಿ ಸೋನಿಯಾ ಗಾಂಧಿ , ಇದೀಗ ತಮ್ಮ ಜೀವನ ಪಯಣದ ಕುರಿತು ಬರೆದಿರುವ ಆತ್ಮಕಥನ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’  ಪುಸ್ತಕದಲ್ಲಿ ಹಲವು ರಹಸ್ಯಗಳನ್ನು ಬಿಚ್ಚಿಟ್ಟಿದ್ದಾರೆ. ಹಾರ್ಪರ್ ಕಾಲಿನ್ಸ್  ಪ್ರಕಟಿಸಿರುವ ಈ ಪುಸ್ತಕದ ಎಕ್ಸ್‌ಕ್ಲೂಸಿವ್ ಭಾಗವೊಂದು ಹೊರಬಿದ್ದಿದ್ದು, 2004ರಲ್ಲಿ ಕಾಂಗ್ರೆಸ್ ಮೈತ್ರಿಕೂಟ ಅಧಿಕಾರಕ್ಕೆ ಬಂದರೂ ಸ್ವತಃ ಪ್ರಧಾನಿ ಹುದ್ದೆಯನ್ನು ಏರಲು ತಾವು ನಿರಾಕರಿಸಿದ್ದು ಏಕೆ ಮತ್ತು ಆ ನಿರ್ಧಾರದ ಹಿಂದಿದ್ದ ಕುಟುಂಬದ ತೀವ್ರ ಆತಂಕ ಹಾಗೂ ಆಂತರಿಕ ತುಮಲಗಳನ್ನು ಸೋನಿಯಾ ಮುಕ್ತವಾಗಿ ಹಂಚಿಕೊಂಡಿದ್ದಾರೆ.

“ಪ್ರಧಾನಿ ಹುದ್ದೆ ಬೇಡವೇ ಬೇಡ!”: ರಾಹುಲ್-ಪ್ರಿಯಾಂಕಾ ಆತಂಕ

Advertisement

 ಚುನಾವಣೆಗೂ ಕೆಲವು ತಿಂಗಳುಗಳ ಮುಂಚೆಯೇ ಸೋನಿಯಾ ಗಾಂಧಿ ಹಾಗೂ ಅವರ ಮಕ್ಕಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ನಡುವೆ ಪ್ರಧಾನಿ ಹುದ್ದೆಯ ಸ್ವೀಕಾರದ ಕುರಿತು ಸುದೀರ್ಘ ಚರ್ಚೆ ನಡೆದಿತ್ತು. “ಒಂದು ವೇಳೆ ಪಕ್ಷ ಗೆದ್ದರೆ ನೀವು ಪ್ರಧಾನಿ ಹುದ್ದೆ ಸ್ವೀಕರಿಸುತ್ತೀರಾ?” ಎಂದು ಮಕ್ಕಳು ನೇರವಾಗಿ ಕೇಳಿದ್ದರು.  ಅದಕ್ಕೆ ಸೋನಿಯಾ, “ಖಂಡಿತವಾಗಿಯೂ ಇಲ್ಲ” ಎಂದು ಸ್ಪಷ್ಟವಾಗಿ ಉತ್ತರ ನೀಡಿದ್ದರು. ಅಜ್ಜಿ ಇಂದಿರಾ ಗಾಂಧಿ ಹಾಗೂ ತಂದೆ ರಾಜೀವ್ ಗಾಂಧಿ ಅವರ ಭೀಕರ ಹತ್ಯೆಯನ್ನು ಕಣ್ಣಾರೆ ಕಂಡಿದ್ದ ರಾಹುಲ್ ಮತ್ತು ಪ್ರಿಯಾಂಕಾಗೆ ‘ಪ್ರಧಾನಿ ಹುದ್ದೆ’ ಎಂದರೆ ಅತ್ಯಂತ ಅಪಾಯಕಾರಿ ಎಂಬ ಭೀತಿ ಮನದಾಳದಲ್ಲಿ ಇತ್ತು. ಸೋನಿಯಾ ಪ್ರಧಾನಿ ಹುದ್ದೆ ಬೇಡವೆಂದಾಗ ಇಬ್ಬರೂ ನಿಟ್ಟುಸಿರು ಬಿಟ್ಟಿದ್ದರು.

ಪಕ್ಷದ ನಾಯಕರಿಂದ ರಹಸ್ಯವಾಗಿಟ್ಟಿದ್ದ ಸೋನಿಯಾ!

Advertisement

ಚುನಾವಣಾ ಪ್ರಚಾರದುದ್ದಕ್ಕೂ ಮಾಧ್ಯಮಗಳು ಹಾಗೂ ಸಾರ್ವಜನಿಕರು ಪ್ರಧಾನಿ ಅಭ್ಯರ್ಥಿ ಯಾರು ಎಂದು ಕೇಳಿದಾಗಲೆಲ್ಲಾ ಸೋನಿಯಾ ಗಾಂಧಿ ಕೇವಲ ತಟಸ್ಥ ಉತ್ತರ ನೀಡುತ್ತಿದ್ದರು. “ನಮ್ಮ ಪಕ್ಷವು ಅಸ್ತಿತ್ವಕ್ಕಾಗಿ ಹೋರಾಡುತ್ತಿತ್ತು. ಈ ಹಂತದಲ್ಲಿ ನಾಯಕತ್ವದ ಸಂಘರ್ಷ ಹುಟ್ಟಿಕೊಳ್ಳಬಾರದು ಎಂಬ ಕಾರಣಕ್ಕೆ ನನ್ನ ಈ ನಿರ್ಧಾರವನ್ನು ಆಪ್ತ ಸಹೋದ್ಯೋಗಿಗಳಿಗೂ ತಿಳಿಸದೆ ಗೌಪ್ಯವಾಗಿಟ್ಟಿದ್ದೆ. ಭವಿಷ್ಯದ ಕಾಂಗ್ರೆಸ್ ಸರ್ಕಾರವನ್ನು ಮುನ್ನಡೆಸಲು ದೀರ್ಘಾವಧಿಯ ಆಡಳಿತ ಅನುಭವ ಮತ್ತು ಕಳಂಕವಿಲ್ಲದ ಪ್ರಾಮಾಣಿಕ ಇಮೇಜ್  ಇರುವ ನಾಯಕನ ಅಗತ್ಯವಿದೆ ಎಂದು ನನಗೆ ಆಂತರಿಕವಾಗಿ ಅನಿಸಿತ್ತು” ಎಂದು ಸೋನಿಯಾ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಭೇಟಿ ಹಾಗೂ ಸ್ಟಿಂಗ್ ಆಪರೇಷನ್ ವಿವಾದ: ರಾಜಕೀಯ ಮಹತ್ವವಿಲ್ಲ ಎಂದ ಮಾಜಿ ಸಿಎಂ ಸಿದ್ದರಾಮಯ್ಯ

Advertisement

ಆಂತರಿಕ ತಲಮಲ: ಕರ್ತವ್ಯ ಮತ್ತು ಕುಟುಂಬದ ನಡುವೆ ಗೊಂದಲ!

ಮೈತ್ರಿಕೂಟದ ನಾಯಕರು ಸಭೆ ನಡೆಸಿ ಸೋನಿಯಾ ಅವರನ್ನು ಒಪ್ಪಿಸಲು ಯತ್ನಿಸುತ್ತಿದ್ದ ಆ ಗಳಿಗೆಗಳಲ್ಲಿ ತಮ್ಮ ಮನಸ್ಸಿನಲ್ಲಿದ್ದ ಭಾವನಾತ್ಮಕ ಹೋರಾಟವನ್ನು ಸೋನಿಯಾ ನೆನಪಿಸಿಕೊಂಡಿದ್ದಾರೆ. “ನನ್ನ ಗಂಡ ರಾಜೀವ್ ಗಾಂಧಿ ಹಾಗೂ ಅತ್ತೆ ಇಂದಿರಾ ಗಾಂಧಿ ಅವರ ತ್ಯಾಗ ಮತ್ತು ಕರ್ತವ್ಯದ ಕರೆ ನನ್ನನ್ನು ಒಂದು ಬದಿಯಿಂದ ಕರೆಯುತ್ತಿತ್ತು. ಮತ್ತೊಂದೆಡೆ ನಮಗೆ ಮತ ನೀಡಿದ ದೇಶದ ಜನತೆ ಮತ್ತು ಹಗಲಿರುಳು ಶ್ರಮಿಸಿದ ಲಕ್ಷಾಂತರ ಕಾರ್ಯಕರ್ತರ ನಿರೀಕ್ಷೆಗಳಿದ್ದವು. ನನ್ನ ಮನಸ್ಸು ಕ್ಷಣಕ್ಷಣಕ್ಕೂ ಬದಲಾಗುತ್ತಿತ್ತು. ಒಂದು ಕ್ಷಣ ಸ್ಪಷ್ಟತೆ ಸಿಕ್ಕರೆ, ಮರುಕ್ಷಣವೇ ಆಂತರಿಕ ಗೊಂದಲ ಉಂಟಾಗುತ್ತಿತ್ತು” ಎಂದು ಸೋನಿಯಾ ಗಾಂಧಿ ತಮ್ಮ ಆತ್ಮಕಥನದಲ್ಲಿ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ