ಬೆಂಗಳೂರು: ನಗರದಲ್ಲಿ ಆರ್ಡರ್ ಡೆಲಿವರಿ ಮಾಡಲು ತೆರಳಿದ್ದ ಡೆಲಿವರಿ ಬಾಯ್ ಒಬ್ಬನ ಮೇಲೆ ಮಹಿಳೆ ಸೇರಿದಂತೆ ಮೂವರ ಗುಂಪೊಂದು ಭೀಕರವಾಗಿ ಹಲ್ಲೆ ನಡೆಸಿರುವ ಕರುಣಾಜನಕ ಘಟನೆ ಶನಿವಾರ ಮುಂಜಾನೆ ನಡೆದಿದೆ.
ಘಟನೆಯ ಸಂಪೂರ್ಣ ದೃಶ್ಯಾವಳಿಗಳು ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಶನಿವಾರ ಮುಂಜಾನೆ ಡೆಲಿವರಿ ನೀಡಲು ತೆರಳಿದ್ದ ವೇಳೆ, ಡೆಲಿವರಿ ಬಾಯ್ ಹಾಗೂ ಗ್ರಾಹಕರ ನಡುವೆ ಕ್ಷುಲ್ಲಕ ಕಾರಣಕ್ಕೆ ವಾಗ್ವಾದ ಪ್ರಾರಂಭವಾಗಿದೆ.
Delivery Boy Allegedly Assaulted by Three on streets
A delivery boy was allegedly assaulted by three people early Saturday morning.
According to preliminary information, the delivery boy had gone to make a delivery when an argument reportedly broke out, following which three… pic.twitter.com/4MJoR9Z657— Karnataka Portfolio (@karnatakaportf) August 8, 2026
ವಾಗ್ವಾದ ವಿಕೋಪಕ್ಕೆ ತಿರುಗಿ, ಒಬ್ಬ ಮಹಿಳೆ ಸೇರಿದಂತೆ ಮೂವರಿದ್ದ ಗುಂಪು ಡೆಲಿವರಿ ಬಾಯ್ ಮೇಲೆ ಹಲ್ಲೆ ನಡೆಸಿದೆ.ರಸ್ತೆಯಲ್ಲಿ ಡೆಲಿವರಿ ಬಾಯ್ ಮೇಲೆ ನಡೆಸಲಾದ ಈ ಕೃತ್ಯದ ಸಿಸಿಟಿವಿ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸರು ಜಾಗೃತರಾಗಿದ್ದಾರೆ.
ಇದನ್ನೂ ಓದಿ: ತಾರಾ ಹೋಟೆಲ್‌ಗಳಲ್ಲಿ ಆಹಾರದ ಶುಚಿತ್ವ ಪರಿಶೀಲನೆ: ಬೆಂಗಳೂರಿನಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳಿಂದ ಬಿರುಸಿನ ಕಾರ್ಯಾಚರಣೆ
ಘಟನೆ ಕುರಿತು ಮಾಹಿತಿ ಸಂಗ್ರಹಿಸಿರುವ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಸಿಸಿಟಿವಿ ಆಧಾರದ ಮೇಲೆ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.

