ಬೆಂಗಳೂರು: ಸಿಲಿಕಾನ್ ಸಿಟಿಯ ಹೋಟೆಲ್‌ಗಳಲ್ಲಿ ಇನ್ನು ಮುಂದೆ ಆಹಾರ ಪದಾರ್ಥಗಳಿಗಾಗಿ ಹೆಚ್ಚಿನ ಹಣ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ. ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ಗಣನೀಯವಾಗಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ, ಹೋಟೆಲ್ ಮಾಲೀಕರು ಆಹಾರ ಪದಾರ್ಥಗಳ ದರವನ್ನು ಶೇ 20 ರಷ್ಟು ಹೆಚ್ಚಿಸಿದ್ದಾರೆ. ಇನ್ನು ರಾಜ್ಯದ ಇತರ ಜಿಲ್ಲೆಗಳಲ್ಲಿಯು ಹೋಟೆಲ್ ಗಳು ದರ ಏರಿಕೆ ಮಾಡಿದೆ.
ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ 3,154 ರೂ. ಗೆ ಏರಿಕೆಯಾಗಿರುವುದು ಹೋಟೆಲ್ ಉದ್ಯಮಕ್ಕೆ ದೊಡ್ಡ ಹೊರೆಯಾಗಿದೆ. ಊಟ, ದೋಸೆ ಹಾಗೂ ಕಾಫಿ-ಟೀ ಬೆಲೆಗಳಲ್ಲಿ 5 ರಿಂದ 20 ರೂಪಾಯಿಗಳವರೆಗೆ ಏರಿಕೆ ಮಾಡಲಾಗಿದೆ.
ಇದನ್ನೂ ಓದಿ: ಮಂಗಳೂರು ಬಂದರಿನ ಬರ್ತ್ ನಂ. 9 ಆಧುನೀಕರಣ: LPG, ಕ್ರೂಡ್ ಹ್ಯಾಂಡ್ಲಿಂಗ್ ಸಾಮರ್ಥ್ಯ ಹೆಚ್ಚಳಕ್ಕೆ ಉತ್ತೇಜನ
ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ಅನಿಲದ ದರ ಏರಿಕೆಯಿಂದಾಗಿ ಹೋಟೆಲ್ ನಡೆಸುವುದು ಕಷ್ಟಕರವಾಗಿದೆ, ಹಾಗಾಗಿ ಅನಿವಾರ್ಯವಾಗಿ ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ಹೋಟೆಲ್ ಸಂಘಟನೆಗಳು ತಿಳಿಸಿವೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

