ಧನುಷ್ಕೋಡಿ: ಸಾಹಸಕ್ಕೆ ವಯಸ್ಸಾಗಲಿ ಅಥವಾ ವೃತ್ತಿಯಾಗಲಿ ಅಡ್ಡಿಯಾಗದು ಎಂಬುದನ್ನು ಬೆಂಗಳೂರಿನ ಐಟಿ ದಂಪತಿಗಳಾದ ದಾನಿಶ್ ಅಬ್ದಿ ಮತ್ತು ವೃಶಾಲಿ ಪ್ರಸಾದೆ ಸಾಬೀತುಪಡಿಸಿದ್ದಾರೆ. ಐತಿಹಾಸಿಕ ರಾಮಸೇತು ಮಾರ್ಗದಲ್ಲಿ ಶ್ರೀಲಂಕಾದಿಂದ ಭಾರತಕ್ಕೆ ಪಕ್ಕಾ-ಪಕ್ಕದಲ್ಲಿ (Side-by-side) ಈಜುವ ಮೂಲಕ ಈ ಸಾಧನೆ ಮಾಡಿದ ಮೊದಲ ದಂಪತಿ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.
ಮೇ 7ರಂದು ಮುಂಜಾನೆ 4:30ಕ್ಕೆ ಶ್ರೀಲಂಕಾದ ತಲೈಮನ್ನಾರ್‌ನಿಂದ ತಮ್ಮ ಪ್ರಯಾಣ ಆರಂಭಿಸಿದ ಈ ದಂಪತಿ, ಸರಿಸುಮಾರು 32 ಕಿಲೋಮೀಟರ್ ದೂರದ ಪಾಕ್ ಜಲಸಂಧಿಯನ್ನು (Palk Strait) ಯಶಸ್ವಿಯಾಗಿ ದಾಟಿದರು. ಮಧ್ಯಾಹ್ನ 3:15ಕ್ಕೆ ತಮಿಳುನಾಡಿನ ಧನುಷ್ಕೋಡಿಯನ್ನು ತಲುಪುವ ಮೂಲಕ 10 ಗಂಟೆ 45 ನಿಮಿಷಗಳ ಕಾಲ ನಿರಂತರವಾಗಿ ಈಜಿದ್ದಾರೆ.
ಇದನ್ನೂ ಓದಿ: ದೇವರ ಕೋಣೆಯಲ್ಲಿ ಫೋಟೋಗಳ ಜೋಡಣೆ: ಈ ತಪ್ಪುಗಳನ್ನು ಮಾಡಬೇಡಿ! ಸೌಭಾಗ್ಯಕ್ಕಾಗಿ ಈ ನಿಯಮ ಪಾಲಿಸಿ
ಸಮುದ್ರದ ಭೀಕರ ಅಲೆಗಳು, ದಿಕ್ಕನ್ನು ಬದಲಿಸುವ ಜೋರು ಗಾಳಿ ಮತ್ತು ಬಲವಾದ ನೀರಿನ ಸೆಳೆತ ಇವರನ್ನು ಹಾದಿ ತಪ್ಪಿಸಲು ಪ್ರಯತ್ನಿಸಿದರೂ, ದೃತಿಗೆಡದ ದಂಪತಿ ಗುರಿ ತಲುಪಿದ್ದಾರೆ. ಇವರ ಸುರಕ್ಷತೆಗಾಗಿ ಭಾರತೀಯ ಕರಾವಳಿ ಕಾವಲು ಪಡೆ (Indian Coast Guard) ಮತ್ತು ಅರೆವೈದ್ಯಕೀಯ ಸಿಬ್ಬಂದಿ ಬೆಂಬಲ ನೀಡಿದ್ದರು. ಈಜುವಾಗ ತೆಗೆದ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಬೆಂಗಳೂರಿನ ಈ ‘ಸೂಪರ್ ಕಪಲ್’ ಬಗ್ಗೆ ಹೆಮ್ಮೆ ವ್ಯಕ್ತವಾಗುತ್ತಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


