ದೆಹಲಿ: ದೇಶದಲ್ಲಿ ಎದುರಾಗಿರುವ ಇಂಧನ ಬಿಕ್ಕಟ್ಟನ್ನು ಸಮರ್ಥವಾಗಿ ಎದುರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ಸಲಹೆ ನೀಡುವುದಷ್ಟೇ ಅಲ್ಲದೆ, ಅದನ್ನು ಸ್ವತಃ ಪಾಲಿಸುವ ಮೂಲಕ ಗಮನ ಸೆಳೆದಿದ್ದಾರೆ. ಅನಗತ್ಯ ಇಂಧನ ವೆಚ್ಚಕ್ಕೆ ಕಡಿವಾಣ ಹಾಕಲು ತಮ್ಮ ಬೆಂಗಾವಲು ಪಡೆಯ (Convoy) ಗಾತ್ರವನ್ನು ಗಣನೀಯವಾಗಿ ಕಡಿತಗೊಳಿಸಿದ್ದಾರೆ.
ಸಾಮಾನ್ಯವಾಗಿ ಎಸ್‌ಪಿಜಿ (SPG) ಶಿಷ್ಟಾಚಾರದ ಪ್ರಕಾರ ಪ್ರಧಾನಿಗಳ ಭದ್ರತೆಗೆ ಹತ್ತಾರು ವಾಹನಗಳ ಬೆಂಗಾವಲು ಇರುತ್ತದೆ. ಆದರೆ, ಇಂಧನ ಉಳಿತಾಯದ ಸಂದೇಶ ಸಾರಲು ಮೋದಿ ಅವರು ತಮ್ಮ ವಾಹನದ ಹಿಂದೆ ಕೇವಲ 2 ಬೆಂಗಾವಲು ಪಡೆ ವಾಹನಗಳನ್ನು ಮಾತ್ರ ಬಳಸುತ್ತಿದ್ದಾರೆ. ಈ ಮೂಲಕ ಇಂಧನ ವ್ಯರ್ಥ ಮಾಡದಂತೆ ಸರ್ಕಾರದ ಮಟ್ಟದಲ್ಲೇ ಕಠಿಣ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿ ನೀಡಿದ ’10 ಮಂತ್ರ’ಗಳ ಹಿಂದಿನ ರಹಸ್ಯವೇನು? ದೇಶಕ್ಕೆ ಎದುರಾಗಿದೆಯೇ ಆರ್ಥಿಕ ವಿಪತ್ತು?
ಇಲ್ಲಿದೆ ನೋಡಿ ವಿಡಿಯೋ:
View this post on Instagram
ಈಗಾಗಲೇ ಪ್ರಧಾನಿಯವರು ದೇಶದ ಜನತೆಗೆ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಿಸಲು, ಸಾರ್ವಜನಿಕ ಸಾರಿಗೆ ಅವಲಂಬಿಸಲು ಮತ್ತು ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ (Work from home) ಮಾಡುವ ಮೂಲಕ ಇಂಧನ ಉಳಿಸಲು ವಿನಂತಿಸಿದ್ದರು. ಈಗ ತಮ್ಮ ನಡೆಯ ಮೂಲಕವೇ ಅವರು ಇಡೀ ದೇಶಕ್ಕೆ ಹೊಸ ಸಂದೇಶ ರವಾನಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


