ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ದೇಶದ ಜನತೆಗೆ ನೀಡಿರುವ ಸರಣಿ ಕರೆಗಳು ಜಾಗತಿಕ ಮಟ್ಟದಲ್ಲಿ ಭಾರಿ ಚರ್ಚೆಗೆ ನಾಂದಿ ಹಾಡಿವೆ. “ಒಂದು ವರ್ಷ ಚಿನ್ನ ಖರೀದಿಸಬೇಡಿ”, “ವರ್ಕ್ ಫ್ರಂ ಹೋಮ್ ಮಾಡಿ” ಎಂಬಂತಹ ಪ್ರಧಾನಿಯವರ ಮಾತುಗಳು ಮುಂಬರುವ ಯಾವುದೋ ದೊಡ್ಡ ಆರ್ಥಿಕ ಬಿಕ್ಕಟ್ಟಿನ ಮುನ್ಸೂಚನೆಯೇ ಎಂಬ ಶಂಕೆ ಸಾರ್ವಜನಿಕರಲ್ಲಿ ಮೂಡಿದೆ. ವರ್ಕ್ ಫ್ರಂ ಹೋಮ್ ಮಾಡಿ ಇಂಧನ ಉಳಿತಾಯಕ್ಕಾಗಿ ಮನೆಯಿಂದಲೇ ಕೆಲಸ ಮಾಡಲು ಆದ್ಯತೆ ನೀಡಿ.ಸ್ವಂತ ಕಾರಿನ ಬದಲು ಮೆಟ್ರೋ ಅಥವಾ ಬಸ್ ಬಳಸಿ.
ಎಲೆಕ್ಟ್ರಿಕ್ ವಾಹನಗಳನ್ನು ಬಳಸಿ ಅಥವಾ ಪ್ರಯಾಣ ಹಂಚಿಕೊಳ್ಳಿ. ರಾಸಾಯನಿಕ ಗೊಬ್ಬರ ಬಳಕೆ ಶೇ. 50ರಷ್ಟು ಕಡಿತಗೊಳಿಸಿ. ಕೃಷಿಯಲ್ಲಿ ಡೀಸೆಲ್ ಪಂಪ್‌ಸೆಟ್‌ಗಳಿಗೆ ವಿದಾಯ ಹೇಳಿ. ಸೋಲಾರ್ ಪಂಪ್ ಸ್ಥಾಪನೆ ಮಾಡಿ. ಮದುವೆ ಸಮಾರಂಭಗಳಿದ್ದರೂ ಒಂದು ವರ್ಷ ಚಿನ್ನ ಖರೀದಿಸಬೇಡಿ. ವಿದೇಶಿ ಪ್ರವಾಸಗಳನ್ನು ಸದ್ಯಕ್ಕೆ ತಡೆಹಿಡಿಯಿರಿ.
ಆಮದು ಮಾಡಿಕೊಳ್ಳುವ ಎಣ್ಣೆ ಬಳಕೆಯನ್ನು ಕಡಿಮೆ ಮಾಡಿ. ವಿದೇಶಿ ಬ್ರ್ಯಾಂಡ್‌ಗಳ ಬದಲು ಭಾರತೀಯ ಉತ್ಪನ್ನಗಳನ್ನೇ ಬಳಸಿ. ದೇಶದ ಸಂಪತ್ತನ್ನು ವಿದೇಶಕ್ಕೆ ಹರಿದು ಹೋಗದಂತೆ ತಡೆಯಿರಿ. ಅನೇಕರು ಇದು ಕೋವಿಡ್‌ನಂತಹ ಮತ್ತೊಂದು ವೈದ್ಯಕೀಯ ತುರ್ತು ಪರಿಸ್ಥಿತಿಯ ಮುನ್ಸೂಚನೆ ಎಂದು ಭಾವಿಸಿದ್ದಾರೆ. ಆದರೆ, ವಾಸ್ತವದಲ್ಲಿ ಇದು ‘ಆರ್ಥಿಕ ರಕ್ಷಣಾ ಕವಚ’ ಸೃಷ್ಟಿಸುವ ಪ್ರಯತ್ನವಾಗಿದೆ. ಭಾರತದ ವಿದೇಶಿ ವಿನಿಮಯ ಮೀಸಲು ನಿಧಿ (Forex Reserves) ವೇಗವಾಗಿ ಖಾಲಿಯಾಗುತ್ತಿರುವುದು ಮತ್ತು ಚಾಲ್ತಿ ಖಾತೆ ಕೊರತೆ (Current Account Deficit) ಹೆಚ್ಚುತ್ತಿರುವುದು ಪ್ರಧಾನಿಯವರ ಈ ಕಳಕಳಿಗೆ ಮುಖ್ಯ ಕಾರಣ. ನಾವು ಆಮದು ಮಾಡಿಕೊಳ್ಳುವ ಪೆಟ್ರೋಲಿಯಂ, ಚಿನ್ನ ಮತ್ತು ಅಡುಗೆ ಎಣ್ಣೆಗೆ ಅತಿ ಹೆಚ್ಚು ಹಣ ವ್ಯಯವಾಗುತ್ತಿದ್ದು, ಅದನ್ನು ತಡೆಯುವುದು ಸರ್ಕಾರದ ಉದ್ದೇಶವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


