ಇಂದಿನ ಬದಲಾಗುತ್ತಿರುವ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ಹೃದಯ ಸಂಬಂಧಿ ಕಾಯಿಲೆಗಳು (Heart Diseases) ಹೆಚ್ಚುತ್ತಿವೆ. ಹೃದಯವನ್ನು ಆರೋಗ್ಯವಾಗಿಡಲು ನಾವು ದಿನನಿತ್ಯ ಅಡುಗೆಗೆ ಬಳಸುವ ಅಡುಗೆ ಎಣ್ಣೆ (Cooking Oil) ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾದರೆ, ಹೃದಯದ ಆರೋಗ್ಯಕ್ಕೆ ಯಾವ ಎಣ್ಣೆ ಉತ್ತಮ? ಮಾರುಕಟ್ಟೆಯಲ್ಲಿ ಲಭ್ಯವಿರುವ ಎಣ್ಣೆಗಳಲ್ಲಿ ಯಾವುದು ಸುರಕ್ಷಿತ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಹೃದಯದ ಆರೋಗ್ಯಕ್ಕೆ ಯಾವ ಎಣ್ಣೆಗಳು ಉತ್ತಮ?

ಆಲಿವ್ ಆಯಿಲ್ (Olive Oil): ಹೃದಯದ ಆರೋಗ್ಯಕ್ಕೆ ಆಲಿವ್ ಎಣ್ಣೆ ಅತ್ಯಂತ ಉತ್ತಮ ಎಂದು ಪರಿಗಣಿಸಲಾಗಿದೆ. ಇದರಲ್ಲಿ ‘ಮೋನೋಅನ್ಸ್ಯಾಚುರೇಟೆಡ್ ಫ್ಯಾಟಿ ಆಸಿಡ್ಸ್’ (MUFA) ಸಮೃದ್ಧವಾಗಿದ್ದು, ಇದು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ (LDL) ಮಟ್ಟವನ್ನು ಕಡಿಮೆ ಮಾಡಲು ಮತ್ತು ಒಳ್ಳೆಯ ಕೊಲೆಸ್ಟ್ರಾಲ್ (HDL) ಹೆಚ್ಚಿಸಲು ಸಹಾಯ ಮಾಡುತ್ತದೆ.
ಸಾಸಿವೆ ಎಣ್ಣೆ (Mustard Oil): ನಮ್ಮ ದೇಶದ ಉತ್ತರ ಮತ್ತು ಪೂರ್ವ ಭಾರತದ ರಾಜ್ಯಗಳಲ್ಲಿ ಸಾಸಿವೆ ಎಣ್ಣೆಯನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇದರಲ್ಲಿ ಒಮೆಗಾ-3 ಮತ್ತು ಒಮೆಗಾ-6 ಕೊಬ್ಬಿನಾಮ್ಲಗಳು ಸಮತೋಲಿತ ಪ್ರಮಾಣದಲ್ಲಿದ್ದು, ಇದು ಹೃದಯದ ರಕ್ತನಾಳಗಳ ಆರೋಗ್ಯಕ್ಕೆ ಬಹಳ ಒಳ್ಳೆಯದು.

ಅಕ್ಕಿ ಹೊಟ್ಟು ಎಣ್ಣೆ (Rice Bran Oil): ಇದರಲ್ಲಿ ‘ಒರೈಜನಾಲ್’ (Oryzanol) ಎಂಬ ಅಂಶವಿರುತ್ತದೆ, ಇದು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡಲು ಮತ್ತು ಹೃದಯದ ಕಾರ್ಯಕ್ಷಮತೆಯನ್ನು ಸುಧಾರಿಸಲು ಸಹಕಾರಿಯಾಗಿದೆ.
ಶೇಂಗಾ ಅಥವಾ ಕಡಲೆeಎಣ್ಣೆ (Groundnut Oil): ಸಾಂಪ್ರದಾಯಿಕ ಕಡಲೆಎಣ್ಣೆಯಲ್ಲಿಯೂ MUFA ಅಂಶಗಳಿದ್ದು, ಮಿತವಾಗಿ ಬಳಸಿದರೆ ಇದು ಹೃದಯಕ್ಕೆ ಸುರಕ್ಷಿತವಾದ ಎಣ್ಣೆಯಾಗಿದೆ.

ಇದನ್ನೂ ಓದಿ:ಚಳಿಗಾಲದಲ್ಲಿ ನೀವೂ ಈ ಸಣ್ಣ ತಪ್ಪುಗಳನ್ನು ಮಾಡುತ್ತಿದ್ದೀರಾ?: ಆರೋಗ್ಯ ಹಾಳು ಮಾಡುವ ಆ 7 ದಿನಚರಿಗಳು ಇಲ್ಲಿವೆ
ಆದಷ್ಟು ಕಡಿಮೆ ಬಳಸುವುದು ಸೂಕ್ತ?
ಪಾಮ್ ಆಯಿಲ್ (Palm Oil) ಹಾಗೂ ಮಾರುಕಟ್ಟೆಯಲ್ಲಿ ಸಿಗುವ ಸಂಸ್ಕರಿಸಿದ (Refined Oils) ಎಣ್ಣೆಗಳಲ್ಲಿ ಸ್ಯಾಚುರೇಟೆಡ್ ಕೊಬ್ಬಿನಾಂಶ ಹೆಚ್ಚಿರುತ್ತದೆ. ಇವು ರಕ್ತನಾಳಗಳಲ್ಲಿ ಕೊಬ್ಬು ಶೇಖರಣೆಯಾಗಲು ಹಾಗೂ ಹೃದಯಾಘಾತದ (Heart Attack) ಅಪಾಯಕ್ಕೆ ಕಾರಣವಾಗಬಹುದು.
ಯಾವುದೇ ಎಣ್ಣೆಯಾದರೂ ಅದನ್ನು ಅತಿಯಾಗಿ ಕಾಯಿಸುವುದು (Deep Frying) ಅಥವಾ ಪದೇ ಪದೇ ಅದೇ ಎಣ್ಣೆಯನ್ನು ಬಿಸಿ ಮಾಡಿ ಬಳಸುವುದು ಆರೋಗ್ಯಕ್ಕೆ ಹಾನಿಕಾರಕ ಎಂದು ವೈದ್ಯರು ಎಚ್ಚರಿಸುತ್ತಾರೆ.



