ಸಹರ್ಸಾ : ಕೋಸಿ ನದಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಬಲೆಗೆ ಬಿದ್ದ ಅಪರೂಪದ ಗಂಗಾ ನದಿ ಡಾಲ್ಫಿನ್ (Gangetic Dolphin) ಅನ್ನು ನೀರಿನಿಂದ ಹೊರತೆಗೆದು ಮನೆಗೆ ಕೊಂಡೊಯ್ದ ಮೀನುಗಾರನೊಬ್ಬನನ್ನು ಬಿಹಾರದ ಸಹರ್ಸಾ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಅರಣ್ಯ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ
ಕೋಸಿ ನದಿಯಲ್ಲಿ ಮೀನು ಹಿಡಿಯುವಾಗ ಡಾಲ್ಫಿನ್ ಆತನ ಬಲೆಗೆ ಸಿಲುಕಿತ್ತು. ಅದನ್ನು ಮತ್ತೆ ನೀರಿಗೆ ಬಿಡುವ ಬದಲು, ಆತ ಮನೆಗೆ ಒಯ್ದಿದ್ದನು.ಸ್ಥಳೀಯ ಪ್ರಜೆಯೊಬ್ಬರು ಇದನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದು, ಅದರಲ್ಲಿ ಮೀನುಗಾರನು ಡಾಲ್ಫಿನ್‌ನಿಂದ ಎಣ್ಣೆ (Dolphin Oil) ತೆಗೆಯುವ ಕುರಿತು ಮಾತನಾಡುತ್ತಿರುವುದು ದಾಖಲಾಗಿತ್ತು.
ಇಲ್ಲಿದೆ ನೋಡಿ ಸ್ಟೋರಿ:
🚨🐬 INDIA’S NATIONAL AQUATIC ANIMAL GANGETIC DOLPHIN HUNTED IN BIHAR
A disturbing video circulating on social media appears to show a Gangetic river dolphin (Platanista gangetica) lying dead while a man is seen brutally handling the dolphin he hunted.
Reportedly linked to…
— Dilthi Gujarati (@dilthi_gujarati) August 25, 2026
ವಿಡಿಯೋ ಬೆಳಕಿಗೆ ಬರುತ್ತಿದ್ದಂತೆಯೇ ಎಫ್‌ಐಆರ್ ದಾಖಲಿಸಿಕೊಂಡ ಪೊಲೀಸರು ಹಾಗೂ ಅರಣ್ಯ ಸಿಬ್ಬಂದಿ 2 ದಿನಗಳ ಹುಡುಕಾಟದ ನಂತರ 3ನೇ ದಿನ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಹರ್ಸಾ ಉಪ ವಿಭಾಗೀಯ ಪೊಲೀಸ್ ಅಧಿಕಾರಿ (SDPO) ಓಂ ಪ್ರಕಾಶ್ ಅವರು ಪ್ರತಿಕ್ರಿಯಿಸಿ, “ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗುತ್ತಿದ್ದು, ಶೀಘ್ರವೇ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗುವುದು” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಗಂಗೊಳ್ಳಿ ಬಳಿ ಅಲೆಗಳ ಹೊಡೆತಕ್ಕೆ ಪರ್ಸೀನ್ ಬೋಟ್ ಮುಳುಗಡೆ: 30 ಮೀನುಗಾರರನ್ನು ರಕ್ಷಿಸಿದ ಕರಾವಳಿ ಕಾವಲು ಪಡೆ
ಗಂಗಾ ನದಿ ಡಾಲ್ಫಿನ್ ಭಾರತದ ‘ರಾಷ್ಟ್ರೀಯ ಜಲಚರ ಪ್ರಾಣಿ’ ಹಾಗೂ ಅತ್ಯಂತ ಅಪರೂಪದ ಜೀವಿಯಾಗಿದೆ.1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಡಾಲ್ಫಿನ್ ಬೇಟೆಯಾಡುವುದು ಅಥವಾ ಕೊಲ್ಲುವುದು ಗುರುತರ ಅಪರಾಧವಾಗಿದೆ.ಈ ಕಾಯ್ದೆಯ ಉಲ್ಲಂಘನೆಗೆ 7 ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆ ಹಾಗೂ ಭಾರಿ ಮೊತ್ತದ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.

