ಬಂಟ್ವಾಳ: ವ್ಯಕ್ತಿಯೋರ್ವರು ಬಂಟ್ವಾಳ ರೈಲ್ವೇ ನಿಲ್ದಾಣದ ಬಳಿ ಇರುವ ಪಾರ್ಕಿಂಗ್ ನಲ್ಲಿ ತಮ್ಮ ಬೈಕ್ ಇಟ್ಟು ಹೋಗಿ, ಮರಳಿ ಬಂದು ನೋಡಿದಾಗ ಬೈಕ್ ಕಳವಾಗಿರುವ ಘಟನೆ ನಡೆದಿದೆ.
ಮೂಲತಃ ಉಳ್ಳಾಲ ತಾಲೂಕಿನವರಾದ ಅಬ್ದುಲ್ ಜಬ್ಬಾರ್ ಬೆಂಗಳೂರಿನಲ್ಲಿ ವ್ಯಾಪಾರ ಮಾಡಿಕೊಂಡಿದ್ದು, ಫೆ.10ರಂದು ಸುಮಾರು 7.30ಕ್ಕೆ ರಾತ್ರಿ ಬಿ.ಮೂಡ ಗ್ರಾಮದ ರೈಲ್ವೆ ನಿಲ್ದಾಣದ ಪಾರ್ಕಿಂಗ್ ಜಾಗದಲ್ಲಿ ದ್ವಿಚಕ್ರ ವಾಹನವನ್ನು ಪಾರ್ಕ್ ಮಾಡಿ ರೈಲಿನಲ್ಲಿ ಬೆಂಗಳೂರಿಗೆ ಹೋಗಿದ್ದರು.

ಇದನ್ನೂ ಓದಿ: Ranaji Trophy: 11 ವರ್ಷದ ಬಳಿಕ ಫೈನಲ್ಸ್‌ಗೆ ಕರ್ನಾಟಕ ತಂಡ
13ರಂದು ಬೆಳಗ್ಗೆ ರೈಲಿನಲ್ಲಿ ಊರಿಗೆ ಮರಳಿದ ವೇಳೆ ದ್ವಿಚಕ್ರ ವಾಹನ ಕಾಣಿಸದೇ ಇದ್ದು ಕೂಡಲೇ ಬಂಟ್ವಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

