ಫೆಬ್ರವರಿ 20, 2026, ಶುಕ್ರವಾರದ ಚಿನ್ನ ಮತ್ತು ಬೆಳ್ಳಿ ಬೆಲೆಗಳ ಸಂಪೂರ್ಣ ವಿವರ ಇಲ್ಲಿದೆ. ಕಳೆದ ಕೆಲವು ದಿನಗಳಿಂದ ಏರಿಕೆ ಕಾಣುತ್ತಿದ್ದ ಬೆಲೆಗಳಲ್ಲಿ ಇಂದು ಸ್ವಲ್ಪ ಇಳಿಕೆ ಕಂಡುಬಂದಿದೆ. ನಿನ್ನೆ 210 ರೂ ಏರಿದ್ದ ಚಿನ್ನದ ಬೆಲೆ ಶುಕ್ರವಾರ 30 ರೂ ಕಡಿಮೆಗೊಂಡಿದೆ. 22 ಕ್ಯಾರೆಟ್ ಚಿನ್ನಕ್ಕೆ 14,315 ರೂ. 24 ಕ್ಯಾರೆಟ್ ಚಿನ್ನಕ್ಕೆ 15,617 ರೂ. 18 ಕ್ಯಾರೆಟ್ ಚಿನ್ನಕ್ಕೆ 11,713 ರೂ. ಬೆಳ್ಳಿ ದರದಲ್ಲೂ ಕೂಡ ಬದಲಾವಣೆಗಳು ಆಗಿಲ್ಲ. ಪ್ರತಿ 1 ಗ್ರಾಂಗೆ 270 ರೂ. ಆಗಿದೆ.
ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ (1 ಗ್ರಾಂಗೆ):

ಬೆಂಗಳೂರು: ₹ 14,315
ಮುಂಬೈ: ₹ 14,315

ದೆಹಲಿ: ₹ 14,330
ಚೆನ್ನೈ: ₹ 14,420
ಇದನ್ನೂ ಓದಿ: ಇಂಡಿಯಾ ಎಐ ಮಿಷನ್: ವಿಶ್ವ ದಾಖಲೆ ಬರೆದ ಭಾರತ
ವಿದೇಶಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ
ದುಬೈ: ₹ 13,802
ಮಲೇಷ್ಯಾ: ₹ 13,913
ಅಮೆರಿಕ: ₹ 14,191
ಸಿಂಗಾಪುರ: ₹ 14,206
ಈ ಮೇಲಿನ ಬೆಲೆಗಳು ಮಾರುಕಟ್ಟೆಯ ಇತ್ತೀಚಿನ ಮಾಹಿತಿಯನ್ನು ಆಧರಿಸಿವೆ. ಆಯಾ ನಗರದ ಸ್ಥಳೀಯ ತೆರಿಗೆಗಳು, ಜಿಎಸ್‌ಟಿ (GST) ಮತ್ತು ಜ್ಯುವೆಲ್ಲರಿ ಅಂಗಡಿಗಳ ಮೇಕಿಂಗ್ ಚಾರ್ಜಸ್‌ಗಳಿಗೆ ಅನುಗುಣವಾಗಿ ಅಂತಿಮ ಬೆಲೆಯಲ್ಲಿ ವ್ಯತ್ಯಾಸವಿರಬಹುದು. ಜಾಗತಿಕ ಮಾರುಕಟ್ಟೆಯಲ್ಲಿನ ಸಕಾರಾತ್ಮಕ ಬೆಳವಣಿಗೆಗಳು ಮತ್ತು ಅಮೆರಿಕದ ಡಾಲರ್ ಸೂಚ್ಯಂಕದಲ್ಲಿನ ವ್ಯತ್ಯಾಸದಿಂದಾಗಿ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಂದು ಕೊಂಚ ತಗ್ಗಿದೆ. ಮದುವೆ ಸೀಸನ್ ಆರಂಭವಾಗುತ್ತಿರುವ ಈ ಸಮಯದಲ್ಲಿ ದರ ಇಳಿಕೆಯಾಗಿರುವುದು ಗ್ರಾಹಕರಿಗೆ ಅನುಕೂಲಕರವಾಗಿದೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

