ಸುಳ್ಯ: ಭಾರತೀಯ ಮಜ್ದೂರ್ ಸಂಘ (BMS)ದ 71ನೇ ಸ್ಥಾಪನಾ ದಿನಾಚರಣೆಯನ್ನು ಸುಳ್ಯ ತಾಲ್ಲೂಕಿನ ಕಲ್ಲುಗುಂಡಿ ಘಟಕದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ತಾಯಿ ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಹಾಗೂ ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಲಾಯಿತು. ಸಂಘದ ಅಧ್ಯಕ್ಷ ಜಗದೀಶ್ ಗೂನಡ್ಕ ಅವರು ಸದಸ್ಯರಿಗೆ ಶುಭಾಶಯಗಳನ್ನು ಕೋರಿದರು.
ಸಭೆಯಲ್ಲಿ ನಿಕಟ ಪೂರ್ವ ಅಧ್ಯಕ್ಷ ಕೇಶವ ಬಂಗ್ಲೆಗುಡ್ಡೆ ಅವರು ಸಂಘದ ಸ್ಥಾಪಕರಾದ ದತ್ತೊಪಂತ್ ಠೇಂಗಡಿ ಅವರ ಜೀವನ ಚರಿತ್ರೆ, ಭಾರತೀಯ ಮಜ್ದೂರ್ ಸಂಘ ನಡೆದು ಬಂದ ಹಾದಿ, ಸಂಘಟನೆಯ ಧ್ಯೇಯ-ಉದ್ದೇಶಗಳು ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸಂಘದ ಸದಸ್ಯರ ಪಾತ್ರ ಮತ್ತು ಪಾಲ್ಗೊಳ್ಳುವಿಕೆಯ ಕುರಿತು ಮಾಹಿತಿ ನೀಡಿದರು.
ಇದನ್ನೂ ಓದಿ: ಸುಳ್ಯ: ಬಿಎಂಎಸ್ ಸಂಯೋಜಿತ ಆಟೋ ಚಾಲಕರಿಂದ ಭಾರತೀಯ ಮಜ್ದೂರ್ ಸಂಘದ 71ನೇ ಸಂಸ್ಥಾಪನಾ ದಿನಾಚರಣೆ
ಈ ಸಂದರ್ಭದಲ್ಲಿ ಸಂಘದ ಸದಸ್ಯ ದಿವಾಕರ ದೊಡ್ಡಡ್ಕ ಅವರು ಎಲ್ಲಾ ಸದಸ್ಯರಿಗೆ ಸಿಹಿತಿಂಡಿ ವಿತರಿಸಿ ದಿನಾಚರಣೆಯನ್ನು ಸಂಭ್ರಮಿಸಿದರು.
ಕಾರ್ಯಕ್ರಮದಲ್ಲಿ ಜಗದೀಶ್ ಕೊಯನಾಡು ಅವರು ಸ್ವಾಗತಿಸಿದರು. ಚಂದ್ರಶೇಖರ ಪೆರಂಗೋಡಿ ಅವರು ವಂದಿಸಿದರು.

