ಬೆಂಗಳೂರು, ಫೆ.8: ಇಂದಿನ ದಿನಗಳಲ್ಲಿ ಪ್ರಾಮಾಣಿಕತೆ ಎಂಬುದು ಅಪರೂಪವಾಗುತ್ತಿರುವಾಗ, ಬಿಎಂಟಿಸಿ (BMTC) ಅಥವಾ ಕೆಎಸ್ಆರ್ಟಿಸಿ (KSRTC) ಚಾಲಕ ಮತ್ತು ನಿರ್ವಾಹಕರು ತೋರಿದ ಈ ಗುಣ ನಿಜಕ್ಕೂ ಶ್ಲಾಘನೀಯ. ಇಂತಹ ಸಿಬ್ಬಂದಿಗಳಿಂದಲೇ ಸಾರಿಗೆ ಸಂಸ್ಥೆಗಳ ಗೌರವ ಹೆಚ್ಚಾಗುತ್ತದೆ. ಸಾಮಾನ್ಯವಾಗಿ ಸಾರ್ವಜನಿಕ ಸಾರಿಗೆಯಲ್ಲಿ ಸಿಬ್ಬಂದಿಗಳ ಬಗ್ಗೆ ಅಸಮಾಧಾನವಿರುತ್ತದೆ, ಆದರೆ ಇಂತಹ ಕೆಲಸಗಳು ಆ ಇಮೇಜ್ ಅನ್ನು ಬದಲಿಸುತ್ತವೆ. ಬಸ್ಸಿನಲ್ಲಿ ಕಳೆದು ಹೋಗಿದ್ದ ಬ್ಯಾಗ್ನ್ನು ಮರಳಿ ಮಹಿಳೆ ನೀಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆ ಕಾರಣವಾಗಿದೆ.
ಮಹಿಳೆಯೊಬ್ಬರು ಬಸ್ಸಿನಲ್ಲಿ ಬ್ಯಾಗ್ ಮರೆತು ಹೋಗಿದ್ದರು. ಮತ್ತೆ ಪಡೆಯಲು ವಾಪಸು ಬಂದಿದ್ದಾರೆ. ತಕ್ಷಣ ಚಾಲಕ ಮತ್ತು ನಿರ್ವಾಹಕರು ಮಹಿಳೆಯ ಬ್ಯಾಗ್ ಮರಳಿ ನೀಡಿದ್ದಾರೆ. ಈ ವಿಡಿಯೋದಲ್ಲಿ ಮಹಿಳೆ ಅಳುತ್ತಿರುವುದನ್ನು ನೋಡಬಹುದು. ತನ್ನ ಅಮೂಲ್ಯವಾದ ವಸ್ತುಗಳು ಆ ಬ್ಯಾಗ್ನಲ್ಲಿತ್ತು. ಅಳುತ್ತಿರುವ ಮಹಿಳೆಯನ್ನು ಚಾಲಕ ಮತ್ತು ನಿರ್ವಾಹಕರು ಸಮಾಧಾನ ಮಾಡಿದ್ದಾರೆ. ಅಳಬೇಡಿ ಅಮ್ಮ ಎಲ್ಲ ಸರಿಯಾಗಿದ್ದೀಯಾ ನೋಡಿ ಎಂದು ಸಮಾಧಾನ ಮಾಡಿದ್ದಾರೆ.

ಇದನ್ನೂ ಓದಿ: ಅಮ್ಮನ ಮುಂದೆಯೇ ಗೆಳತಿ ಜತೆಗೆ ಸಿಕ್ಕಿಬಿದ್ದ ಮಗ! ಎಲ್ಲರ ಮುಂದೆ ತಾಯಿ ಮಾಡಿದ್ದೇನು ನೋಡಿ?
ವೈರಲ್ ವಿಡಿಯೋ ಇಲ್ಲಿದೆ ನೋಡಿ:
A lady left her bag on a BMTC/KSRTC bus… and it was safely kept and returned.
What a proud moment. What a relief it is to get back something earned with hard work.
Kudos to the conductor and driver , honesty like this restores faith. pic.twitter.com/zJW0M40Bct— Aparajite (@amshilparaghu) February 8, 2026
ಇಂತಹ ಪ್ರಾಮಾಣಿಕ ಕೆಲಸ ಮಾಡಿದ ಆ ಚಾಲಕ ಮತ್ತು ನಿರ್ವಾಹಕರಿಗೆ ನಮ್ಮದೂ ಒಂದು ದೊಡ್ಡ ‘ಸಲ್ಯೂಟ್’ ಎಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಹೇಳಿದ್ದಾರೆ. ಈ ವಿಡಿಯೋವನ್ನು @Aparajite ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಅವರು ಈ ಪೋಸ್ಟ್ನಲ್ಲಿ ಹೀಗೆ ಬರೆದುಕೊಂಡಿದ್ದಾರೆ. ಕಂಡಕ್ಟರ್ ಮತ್ತು ಚಾಲಕನಿಗೆ ಧನ್ಯವಾದಗಳು, ಈ ರೀತಿಯ ಪ್ರಾಮಾಣಿಕತೆ ನಂಬಿಕೆಯನ್ನು ಪುನಃಸ್ಥಾಪಿಸುತ್ತದೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

