ವ್ಯಾಲೆಂಟೈನ್ಸ್ ಡೇಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಪ್ರೇಮಿಗೆ ಶಾಕ್​ ನೀಡಿದ ಯುವತಿ: ಡೆತ್ ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಬೆಂಗಳೂರಿನ ಜಿಮ್ ಟ್ರೈನರ್

ಬೆಂಗಳೂರಿನಲ್ಲಿ ಇಂದು (ಫೆಬ್ರವರಿ 8, 2026) 26 ವರ್ಷದ ಬಾಡಿ ಬಿಲ್ಡರ್ ಮತ್ತು ಜಿಮ್ ಟ್ರೈನರ್ ಕಿರಣ್ ಎಂಬ ಯುವಕನ ಆತ್ಮಹತ್ಯೆ. ಪ್ರೀತಿಯಲ್ಲಿನ ವೈಫಲ್ಯ ಮತ್ತು ಪ್ರೇಯಸಿಯ ನಿಶ್ಚಿತಾರ್ಥವೇ ಈ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ.ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಿವಾಸಿಯಾಗಿದ್ದ ಕಿರಣ್, ವೃತ್ತಿಯಿಂದ ಜಿಮ್ ಟ್ರೈನರ್ ಮತ್ತು ಬಾಡಿ ಬಿಲ್ಡರ್ ಆಗಿದ್ದರು. ಕಳೆದ ಮೂರು ವರ್ಷಗಳಿಂದ ಯುವತಿಯೊಬ್ಬರನ್ನು ಪ್ರೀತಿಸುತ್ತಿದ್ದರು. ಪ್ರೇಯಸಿ ಶನಿವಾರ ಕಿರಣ್ ಅವರನ್ನು ಭೇಟಿಯಾಗಿ, ತನ್ನ ಮದುವೆ ಬೇರೆಯವರೊಂದಿಗೆ ನಿಶ್ಚಯವಾಗಿದೆ ಎಂದು ಹೇಳಿದ್ದಾಳೆ. ಅಷ್ಟೇ ಅಲ್ಲದೆ, ತನ್ನ ಮದುವೆಯ ಆಮಂತ್ರಣ ಪತ್ರಿಕೆ ಮತ್ತು ಹೊಸ ಸೀರೆಯನ್ನು ತೋರಿಸಿದ್ದಾಳೆ ಎನ್ನಲಾಗಿದೆ.

ದರಿಂದ ತೀವ್ರ ಮನನೊಂದ ಕಿರಣ್, ಮನೆಗೆ ಬಂದು ತನ್ನ ಕೋಣೆಯ ಬಾಗಿಲು ಹಾಕಿಕೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯವರು ಎಷ್ಟೇ ಕೂಗಿದರೂ ಬಾಗಿಲು ತೆಗೆಯದಿದ್ದಾಗ, ಬಾಗಿಲು ಒಡೆದು ನೋಡಿದಾಗ ಕಿರಣ್ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.ಕಿರಣ್ ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿದ್ದು, ಅದರಲ್ಲಿ ಕೆಲವು ಗಂಭೀರ ವಿಷಯಗಳನ್ನು ಉಲ್ಲೇಖಿಸಿದ್ದಾರೆ. ತನ್ನ ಸಾವಿಗೆ ಪ್ರೇಯಸಿ ಮತ್ತು ಆಕೆಯ ತಾಯಿಯೇ ಕಾರಣ ಎಂದು ಬರೆದಿದ್ದಾರೆ.

ಇದನ್ನೂ ಓದಿ; ಶಾಪಿಂಗ್ ಮಾಲ್‌ನಲ್ಲಿರುವ ಸ್ಪಾ ಕೇಂದ್ರವೊಂದರಲ್ಲಿ ರಾಶಿ ರಾಶಿ ಕಾಂಡೋಮ್‌ ಪತ್ತೆ

ಪೊಲೀಸರಿಗೆ ತನಿಖೆಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ತನ್ನ ಮೊಬೈಲ್ ಪಾಸ್‌ವರ್ಡ್ ಅನ್ನು ಸಹ ಡೆತ್ ನೋಟ್‌ನಲ್ಲಿ ಬರೆದಿದ್ದಾರೆ. ವರದಿಗಳ ಪ್ರಕಾರ, ಕಿರಣ್ ಮುಂಬರುವ ವ್ಯಾಲೆಂಟೈನ್ಸ್ ಡೇ (ಫೆಬ್ರವರಿ 14) ಪ್ರಯುಕ್ತ ತನ್ನ ಪ್ರೇಯಸಿಗೆ ವಿಶೇಷ ಉಡುಗೊರೆ ನೀಡಲು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಅದಕ್ಕೂ ಮುನ್ನವೇ ಈ ಆಘಾತಕಾರಿ ಸುದ್ದಿ ಕೇಳಿ ಜೀವನವನ್ನೇ ಕೊನೆಗೊಳಿಸಿದ್ದಾರೆ. ಮಹಾಲಕ್ಷ್ಮಿ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಲಾಗಿದೆ. ಡೆತ್ ನೋಟ್ ಆಧಾರದ ಮೇಲೆ ಯುವತಿ ಮತ್ತು ಆಕೆಯ ಕುಟುಂಬದವರ ವಿಚಾರಣೆ ನಡೆಯುವ ಸಾಧ್ಯತೆಯಿದೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು