ಬಾಲಿವುಡ್‌ನ ಬಹು ನಿರೀಕ್ಷಿತ ‘ರಾಮಾಯಣ’ ಸಿನಿಮಾ ಟೀಸರ್ ಬಿಡುಗಡೆಯಾದ ಕ್ಷಣದಿಂದಲೇ ಸಿನಿ ಲೋಕದಲ್ಲಿ ಸದ್ದು ಮಾಡುತ್ತಿದೆ. ಹನುಮ ಜಯಂತಿಯ ಸ್ಪೆಷಲ್ ಆಗಿ ಬಂದ ಈ ಟೀಸರ್‌ನಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ ಕಾಣಿಸಿಕೊಂಡಿದ್ದು, ಫ್ಯಾನ್ಸ್ ಮಧ್ಯೆ ಕುತೂಹಲವೂ, ಚರ್ಚೆಯೂ ಒಂದೇ ಸಮಯದಲ್ಲಿ ಜೋರಾಗಿದೆ.
ಟೀಸರ್‌ನಲ್ಲಿ ರಣಬೀರ್‌ನ ಲುಕ್ ಕೆಲವರಿಗೆ ‘ದೈವೀ’ ಅನ್ನಿಸಿದರೆ, ಇನ್ನೂ ಕೆಲವರು “ಇನ್ನೂ ಇಂಪ್ಯಾಕ್ಟ್ ಬೇಕಿತ್ತು” ಎಂದು ಅಭಿಪ್ರಾಯಪಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ #RamayanaTeaser ಟ್ರೆಂಡ್ ಆಗುತ್ತಿದ್ದು, ಅಭಿಪ್ರಾಯಗಳು ಎರಡು ಕಡೆಯಾಗಿ ವಿಭಜಿತವಾಗಿವೆ.

ಇಷ್ಟು ದೊಡ್ಡ ಬಜೆಟ್ ಸಿನಿಮಾಗೆ ಬಂದ ಟೀಸರ್ ನೋಡಿದ ಕೆಲ ನೆಟ್ಟಿಗರು “ಇದು ಹಾಲಿವುಡ್ ಮಟ್ಟಕ್ಕೆ ಹೋಗಬೇಕಿತ್ತು” ಎಂದು ಟೀಕಿಸಿದ್ದಾರೆ. ಕೆಲವರು ದೃಶ್ಯಗಳನ್ನು “AI ಮಾದರಿಯಾಗಿದೆ” ಎಂದು ಹೇಳಿದ್ದು, ಚಿತ್ರತಂಡದ ಮೇಲೆ ಒತ್ತಡ ಹೆಚ್ಚಿಸಿದೆ.
ಇದನ್ನೂ ಓದಿ: ಗೆಳತಿಯ ಜೊತೆ ಬಾತ್‌ರೂಮ್‌ನಲ್ಲಿ ನಿವೇದಿತಾ ಗೌಡ ಬಿಂದಾಸ್ ಡ್ಯಾನ್ಸ್; ವಿಡಿಯೋ ವೈರಲ್!

ವಿದೇಶಿಗರಿಗೆ ಇಷ್ಟವಾಗದಿದ್ರೆ ಫೇಲ್
ಈ ನಡುವೆ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರ ಹಳೆಯ ಹೇಳಿಕೆ ವೈರಲ್ ಆಗಿದೆ. “ಪಶ್ಚಿಮದ ಪ್ರೇಕ್ಷಕರಿಗೆ ಇಷ್ಟವಾಗದಿದ್ದರೆ ಇದು ವೈಫಲ್ಯ” ಎನ್ನುವ ಮಾತುಗಳು ಈಗ ಚರ್ಚೆಗೆ ಕಾರಣವಾಗಿದೆ. ಅಲ್ಲದೆ, “ಇದು ಕೇವಲ ಭಾರತೀಯರಿಗಾಗಿ ಅಲ್ಲ, ಜಗತ್ತಿನ ಸಿನಿಮಾ” ಎನ್ನುವುದು ಅವರ ಸ್ಪಷ್ಟ ನಿಲುವು.
4000 ಕೋಟಿ ರೂ. ಮೆಗಾ ಪ್ರಾಜೆಕ್ಟ್!
ಎರಡು ಭಾಗಗಳಲ್ಲಿ ಮೂಡಿ ಬರಲಿರುವ ಈ ‘ರಾಮಾಯಣ’ ಸಿನಿಮಾ ಒಟ್ಟು 4000 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಹಾಲಿವುಡ್ ಸಿನಿಮಾಗಳಿಗಿಂತಲೂ ಹೆಚ್ಚು ಖರ್ಚಿನ ಈ ಪ್ರಾಜೆಕ್ಟ್, ಈಗಾಗಲೇ “ಇಂಡಿಯನ್ ಸಿನೆಮಾದ ಗೇಮ್ ಚೇಂಜರ್” ಆಗಬಹುದೇ ಎನ್ನುವ ಪ್ರಶ್ನೆ ಮೂಡಿಸಿದೆ.

ಟೀಸರ್‌ಗೆ ಬಂದ ಮಿಶ್ರ ಪ್ರತಿಕ್ರಿಯೆ ಚಿತ್ರತಂಡಕ್ಕೆ ಮೊದಲ ದೊಡ್ಡ ಪರೀಕ್ಷೆಯಾಗಿದೆ. ಮುಂದಿನ ಟ್ರೈಲರ್, ಪೋಸ್ಟರ್‌ಗಳು ಮತ್ತು ಪ್ರಚಾರಗಳು “ವಾವ್ ಫ್ಯಾಕ್ಟರ್” ನೀಡಬೇಕಾದ ಅವಶ್ಯಕತೆ ಇದೆ.
‘ರಾಮಾಯಣ’ ಸಿನಿಮಾ ಇನ್ನೂ ಬಿಡುಗಡೆಯಾಗಿಲ್ಲ, ಆದರೆ ಈಗಾಗಲೇ ಇದು “ಬ್ಲಾಕ್‌ಬಸ್ಟರ್ ಚರ್ಚೆ” ಆಗಿದೆ.
ರಣಬೀರ್ ರಾಮನಾಗಿ ಪ್ರೇಕ್ಷಕರ ಮನ ಗೆಲ್ಲುವರಾ? ಅಥವಾ ಟೀಕೆಗಳಿಗೆ ಉತ್ತರ ಕೊಡಬೇಕಾಗುತ್ತದೆಯಾ? ಕಾದುನೋಡಬೇಕಿದೆ.
ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

