Breaking News

ಜ್ಞಾನ ಮತ್ತು ಸಮಾನತೆಯ ಹರಿಕಾರ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ

ಜಾತಿ ತಾರತಮ್ಯ, ಅಂಧಶ್ರದ್ಧೆ ಹಾಗೂ ಸಾಮಾಜಿಕ ಅಸಮಾನತೆಯ ಕತ್ತಲೆಯನ್ನು ಹೋಗಲಾಡಿಸಿ, ಸಮಸ್ತ ಮಾನವಕುಲಕ್ಕೆ ಪ್ರೀತಿ, ಅಹಿಂಸೆ ಮತ್ತು ಜ್ಞಾನದ ಬೆಳಕು ತೋರಿದ ಮಹಾನ್ ದಾರ್ಶನಿಕ, ಯುಗಪುರುಷ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಯ ಶುಭ ಸಂದರ್ಭದಲ್ಲಿ ನಾಡಿನಾದ್ಯಂತ ಶ್ರದ್ಧಾಪೂರ್ವಕ ನಮನಗಳನ್ನು ಸಲ್ಲಿಸಲಾಗುತ್ತಿದೆ.

ಆಧ್ಯಾತ್ಮಿಕ ಶಕ್ತಿ, ಮಾನವೀಯ ಪ್ರೀತಿ ಮತ್ತು ಸುಧಾರಣಾವಾದಿ ಚಿಂತನೆಗಳ ಮೂಲಕ ಸಮಾಜದ ತಳಸಮುದಾಯಗಳಿಗೆ ಆತ್ಮಗೌರವ, ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ತಂದುಕೊಟ್ಟ ಮಹಾನ್ ಕ್ರಾಂತಿಕಾರಿ ಹರಿಕಾರ ನಾರಾಯಣ ಗುರುಗಳು.

ಇದನ್ನೂ ಓದಿ: ವರಮಹಾಲಕ್ಷ್ಮಿ ವ್ರತ ಯಾವಾಗ?: ಕರ್ನಾಟಕದಲ್ಲಿ ಈ ದಿನದಂದೇ ಆಚರಣೆ ಮಾಡಬೇಕು

“ವಿದ್ಯೆಯಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಬಲಶಾಲಿಗಳಾಗಿ”

ನಾರಾಯಣ ಗುರುಗಳು ಸಮಾಜಕ್ಕೆ ನೀಡಿದ “ವಿದ್ಯೆಯಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಬಲಶಾಲಿಗಳಾಗಿ” (Educate to be free, Organise to be strong) ಎಂಬ ಐತಿಹಾಸಿಕ ಕರೆಯು ಇಂದಿನ ಆಧುನಿಕ ಯುಗದಲ್ಲೂ ಅತ್ಯಂತ ಪ್ರಸ್ತುತವಾಗಿದೆ.

ಅಷ್ಟೇ ಅಲ್ಲದೆ, “ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಮಾನವನಿಗೆ” ಎಂಬ ನಾರಾಯಣ ಗುರುಗಳ ತತ್ತ್ವಬೋಧನೆಯು ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಶಿಕ್ಷಣ ಮತ್ತು ಸಂಘಟನೆಯ ಮೂಲಕ ಸಾಮಾಜಿಕ ಬದಲಾವಣೆ ಸಾಧ್ಯ ಎಂಬುದನ್ನು ಅವರು ತಮ್ಮ ಜೀವನದ ಮೂಲಕವೇ ನಿರೂಪಿಸಿ ತೋರಿಸಿದ್ದರು.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *