ದಕ್ಷಿಣ ಕನ್ನಡ
ಸರಸ್ವತಿ ಸೌಹಾರ್ದ ಚುನಾವಣೆ: ಮತದಾನ ಮುಕ್ತಾಯ, ಕೌಂಟಿಂಗ್ ಪ್ರಾರಂಭ
ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಚೊಚ್ಚಲ ಚುನಾವಣೆ ಮುಕ್ತಾಯಗೊಂಡಿದೆ. ಕೆಲವೇ ಹೊತ್ತಿನಲ್ಲಿ ಫಲಿತಾಂಶ ಪ್ರಕಟಗೊಳ್ಳಲಿದೆ.
Read Moreದಂಡುಪಾಳ್ಯ ಗ್ಯಾಂಗ್ ಆರೋಪಿಯ ಬಂಧನ ಕಾರ್ಯಾಚರಣೆ ಹೇಗಿತ್ತು? ಮಹಿಳಾ ಕಾನ್ಸ್ಟೇಬಲ್ ಪಾತ್ರಕ್ಕೆ ಮೆಚ್ಚುಗೆ
ಉರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣ ಸಂಬಂಧ 27 ವರ್ಷಗಳಿಂದ ತಲೆಮರೆಸಿಕೊಂಡಿದ್ದ ದಂಡುಪಾಳ್ಯ ಗ್ಯಾಂಗ್ನ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಉರ್ವ ಪೊಲೀಸ್ ಠಾಣೆಯ ಮಹಿಳಾ ಕಾನ್ಸ್ಟೆಬಲ್ ಲಲಿತಾ ಯಶಸ್ವಿಯಾಗಿದ್ದಾರೆ.
Read Moreಜಾರಿಗೂ ಮುನ್ನ ದ್ವೇಷ ಭಾಷಣ ಮಸೂದೆಯಡಿ ಬಿಜೆಪಿ ಮುಖಂಡ ವಿಕಾಸ್ರಿಗೆ ನೋಟಿಸ್
ದ್ವೇಷ ಭಾಷಣ ಮಸೂದೆಗೆ ರಾಜ್ಯಪಾಲರ ಅಂಕಿತ ಇನ್ನೂ ಬಿದ್ದಿಲ್ಲ. ಆದರೆ, ಜಾರಿಗೂ ಮುನ್ನವೇ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಇಲಾಖೆ ಬಿಜೆಪಿ ಮುಖಂಡ ವಿಕಾಸ್ ಪಿ. ಅವರಿಗೆ ದ್ವೇಷ ಭಾಷಣ ಮಸೂದೆಯಡಿ ನೋಟಿಸ್ ಜಾರಿ ಮಾಡಿರುವುದು ಚರ್ಚೆಗೆ ಕಾರಣವಾಗಿದೆ.
Read MoreBangalore : ಕಾಲೇಜಿನಲ್ಲಿ ಸೀನಿಯರ್ ವಿದ್ಯಾರ್ಥಿಗಳಿಂದ ಜ್ಯೂನಿಯರ್ ವಿದ್ಯಾರ್ಥಿಗಳ ಮೇಲೆ ಹಲ್ಲೆ
ಬೆಂಗಳೂರು ಜಿಲ್ಲೆಯ ದೇವನಹಳ್ಳಿಯಲ್ಲಿರುವ ಶಿಕ್ಷಣ ಸಂಸ್ಥೆಯೊಂದರಲ್ಲಿ ರ್ಯಾಗಿಂಗ್ ಹಾಗೂ ದೈಹಿಕ ಹಲ್ಲೆಯ ಪ್ರಕರಣ ಬೆಳಕಿಗೆ ಬಂದಿದೆ. ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪಡೆದುಕೊಂಡಿದ್ದು, ಆಕಾಶ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ನೀಡಿದ ದೂರಿನ ಮೇರೆಗೆ ಜನವರಿ 16ರಂದು ಎಫ್ಐಆರ್ ದಾಖಲಿಸಲಾಗಿದೆ.
Read MoreForest : ರಾಜ್ಯದ 1800 ಅರಣ್ಯ ಪ್ರದೇಶಗಳಲ್ಲಿ ಅಗ್ನಿ ದುರಂತ ಸಂಭವ ! ಎಚ್ಚರಿಕೆ
ಡಿಸೆಂಬರ್ನಿಂದ ರಾಜ್ಯದ ಕೆಲವು ಭಾಗಗಳಲ್ಲಿ ಅಸಾಮಾನ್ಯ ಚಳಿಗಾಲದ ಅಲೆ ಕಂಡುಬಂದಿದ್ದರೂ, ಅರಣ್ಯ ಪ್ರದೇಶಗಳಲ್ಲಿ ಬೇರೆ ರೀತಿಯ ಆತಂಕ ಎದುರಾಗಿದ್ದು, ಸಂರಕ್ಷಿತ ವಲಯಗಳ ಸುತ್ತಮುತ್ತಲಿನ ಅರಣ್ಯ ಪ್ರದೇಶಗಳಿಂದ 1,800 ಅಗ್ನಿ ಘಟನೆಗಳ ಎಚ್ಚರಿಕೆಗಳು ದಾಖಲಾಗಿವೆ.
Read Moreಪುತ್ತೂರು ಕಂಬಳ : 125ಮೀ ಓಡಿ ಗಮನ ಸೆಳೆದ ಸುಳ್ಯದ 73ರ ವೃದ್ಧ
ಕರಾವಳಿಯ ಸಾಂಸ್ಕೃತಿಕ ಪ್ರತೀಕವಾಗಿರುವ ಕಂಬಳವು ಇದೀಗ ಕರಾವಳಿ ವ್ಯಾಪ್ತಿಗೆ ಸೀಮಿತವಾಗದೆ ರಾಜ್ಯ, ದೇಶ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದೆ. ಇಂತಹ ಕಂಬಳದ ಬಗ್ಗೆ ಸಣ್ಣ ಮಕ್ಕಳಿಂದ ಹಿಡಿದು ತರುಣರವರೆಗೆ ಮಾತ್ರವಲ್ಲದೆ, ಹಿರಿಯರಿಗೂ ಹೆಚ್ಚಿನ ಆಸಕ್ತಿ ಇರುತ್ತದೆ ಎಂಬುದಕ್ಕೆ ಸುಳ್ಯದ 73 ವರ್ಷದ ಶ್ರೀಧರ್ ಅವರೇ ಸಾಕ್ಷಿ.
Read MorePuttur Kambala: 33ನೇ ವರ್ಷದ ಪುತ್ತೂರು ಕಂಬಳಕ್ಕೆ ಅದ್ದೂರಿಯ ಚಾಲನೆ
ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ಜಾತ್ರಾ ಗದ್ದೆಯಲ್ಲಿ ಪ್ರತೀ ವರ್ಷ ನಡೆಯುವ ಐತಿಹಾಸಿಕ ಪುತ್ತೂರು ಕಂಬಳಕ್ಕೆ ಅದ್ದೂರಿಯ ಚಾಲನೆ ನೀಡಲಾಗಿದೆ.
Read Moreದೇಶದ ಸುರಕ್ಷಿತ ನಗರಗಳಲ್ಲಿ ಮಂಗಳೂರು ಪ್ರಥಮ, ನಂಬಿಯೋ ವರದಿ
ಮಂಗಳೂರು: ಇತ್ತೀಚೆಗೆ ಬಿಡುಗಡೆಯಾದ ನಂಬಿಯೊ ಸುರಕ್ಷತಾ ಸೂಚ್ಯಂಕ 2026 ರಲ್ಲಿ ಮಂಗಳೂರು ಭಾರತದ ಅತ್ಯಂತ ಸುರಕ್ಷಿತ ನಗರವೆಂದು ಹೆಸರಿಸಲ್ಪಟ್ಟಿದೆ, ವಿಶ್ವದಾದ್ಯಂತ ಮೌಲ್ಯಮಾಪನ ಮಾಡಲಾದ 304 ನಗರಗಳಲ್ಲಿ 74.4 ಸುರಕ್ಷತಾ ಅಂಕಗಳೊಂದಿಗೆ ಜಾಗತಿಕವಾಗಿ 46 ನೇ ಸ್ಥಾನದಲ್ಲಿದೆ. ಜನವರಿ 2026 ರಲ್ಲಿ ಬಿಡುಗಡೆಯಾದ ಸಮೀಕ್ಷೆ ಆಧಾರಿತ ಸೂಚ್ಯಂಕದ ಪ್ರಕಾರ, ಚೀನಾದ ಕ್ವಿಂಗ್ಡಾವೊ 89.2 ಸುರಕ್ಷತಾ ಅಂಕಗಳೊಂದಿಗೆ ಜಾಗತಿಕವಾಗಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ.
Read Moreಕಲ್ಲಡ್ಕ ಶ್ರೀರಾಮ ಮಂದಿರದಲ್ಲಿ ಶ್ರೀರಾಮ ವಿದ್ಯಾಕೇಂದ್ರದಿಂದ ಸರಸ್ವತಿ ಪೂಜೆ
ಕಲ್ಲಡ್ಕ ಶ್ರೀರಾಮ ಮಂದಿರದಲ್ಲಿ ಶ್ರೀರಾಮ ವಿದ್ಯಾಕೇಂದ್ರದ ವತಿಯಿಂದ ಜ.23 ರಂದು ಸರಸ್ವತಿ ಪೂಜೆ ನಡೆಯಿತು.
Read Moreಮಂಚಿ ಕೊಳ್ನಾಡು ಪ್ರೌಢಶಾಲೆಯಲ್ಲಿ ಯಕ್ಷದ್ರುವ ಯಕ್ಷ ಶಿಕ್ಷಣ ಸಮಾರೋಪ
ಪಟ್ಲ ಫೌಂಡೇಶನ್ ವಿಟ್ಲ ಘಟಕದ ವತಿಯಿಂದ ಮಂಚಿ ಕೊಳ್ನಾಡು ಸರಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ಯಕ್ಷದ್ರುವ ಯಕ್ಷ ಶಿಕ್ಷಣ-ಯಕ್ಷಗಾನ ಅಭ್ಯಾಸ ತರಗತಿಯ ಸಮಾರೋಪ ಸಮಾರಂಭ ಜ.೨೩ ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು.
Read More
