ದಕ್ಷಿಣ ಕನ್ನಡ
ಮಂಗಳೂರು: ದೇವಸ್ಥಾನಗಳಲ್ಲಿ ಕೇಸರಿ ಧ್ವಜ ಹಾರಿಸಬೇಡಿ: ರಮಾನಾಥ ರೈ
ಮಂಗಳೂರಿನಲ್ಲಿ ಮಾತನಾಡಿದ ಮಾಜಿ ಸಚಿವ ರಮಾನಾಥ ರೈ, ದೇವಾಲಯದ ಕಾರ್ಯಕ್ರಮದಲ್ಲಿ ರಾಜಕೀಯ ಪ್ರೇರಿತ ಪತಾಕೆ ಹಾರಿಸಿರುವುದನ್ನು ಧಿಕ್ಕರಿಸಬೇಕು ಎಂದರು.
Read Moreಮಾಣಿ: ಕೊಡಾಜೆಯಲ್ಲಿ ‘ನಕ್ಷತ್ರ ಸಭಾಂಗಣ’ ಲೋಕಾರ್ಪಣೆ
ಮಾಣಿ ಸಮೀಪದ ಕೊಡಾಜೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ನಕ್ಷತ್ರ ಸಭಾಭವನವನ್ನು ಜ.೨೨ ರಂದು ಲೋಕಾರ್ಪಣೆಗೊಳಿಸಲಾಯಿತು.
Read MoreSullia : ಸುಳ್ಯ ತಾಲೂಕಿಗೆ 60 ವರುಷ: ಬೃಹತ್ ಮೆರವಣಿಗೆ, ಸಂಭ್ರಮಾಚರಣೆ
ಸುಳ್ಯ ತಾಲೂಕು ಆಗುವಲ್ಲಿ ನಮ್ಮ ತಂದೆಯವರು ಮುಂಚೂಣಿಯಲ್ಲಿದ್ದರು ಹಾಗೂ ಇದಕ್ಕಾಗಿ ಶ್ರಮವಹಿಸಿರುತ್ತಾರೆ. ಜತೆಗೆ ಹಲವು ಹಿರಿಯರು ಕೂಡಾ ಶ್ರಮವಹಿಸಿರುವುದು ಕಂಡಿರುತ್ತೇವೆ. ಆ ಎಲ್ಲಾ ವ್ಯಕ್ತಿಗಳನ್ನು ನಾವು ಸ್ಮರಿಸಿಕೊಳ್ಳಬೇಕು ಎಂದು ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ.ಕೆ.ವಿ.ರೇಣುಕಾಪ್ರಸಾದ್ , ಸುಳ್ಯ ತಾಲೂಕು ರಚನೆಗೊಂಡು 60 ವರ್ಷ ತುಂಬಿದ ಹಿನ್ನಲೆಯಲ್ಲಿ ಷಷ್ಟ್ಯಬ್ಧ ಆಚರಣೆ ಮೆರವಣಿಗೆಗೆ ಚೆಂಡೆ ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
Read Moreಮುಂಡೂರು: ಮಿಸೆಸ್ ಇಂಡಿಯಾ ಡಾ.ರಶ್ಮಾ ಅವರಿಗೆ ಸನ್ಮಾನ
ಮಿಸೆಸ್ ಇಂಡಿಯಾ ಕಿರೀಟ-2025 ಅನ್ನು ಮುಡಿಗೇರಿಸಿಕೊಂಡ ತಾಲೂಕಿನ ಮುಂಡೂರಿನವರಾದ ಡಾ.ರಶ್ಮಾ ಎಂ. ಶೆಟ್ಟಿ ಅವರನ್ನು ಮುಂಡೂರು ಸರಕಾರಿ ಉ.ಹಿ.ಪ್ರಾ.ಶಾಲೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
Read Moreಪುತ್ತೂರು: ಎಪಿಎಂಸಿ ರಸ್ತೆಯಲ್ಲಿ ಗೋಶನ್ ಕಾಂಪ್ಲೆಕ್ಸ್ ಲೋಕಾರ್ಪಣೆ
Puttur News: ಎಪಿಎಂಸಿ ರಸ್ತೆಯ ಐಸಿಐಸಿಐ ಬ್ಯಾಂಕ್ ಮುಂಭಾಗದಲ್ಲಿ ತಲೆ ಎತ್ತಿರುವ ಗೋಶನ್ ಕಾಂಪ್ಲೆಕ್ಸ್ ಜ.21ರಂದು ಲೋಕಾರ್ಪಣೆಗೊಂಡಿತು.
Read Moreಶಾಲೆಯ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಸಹಾಯ ಹಸ್ತ : ರೋಟರಿ ಕ್ಲಬ್ ಬಿ.ಸಿ ರೋಡ್ ಘಟಕ
ರೋಟರಿ ಕ್ಲಬ್ ನ ಬಿಸಿ ರೋಡ್ ಘಟಕವು ಶಾಲೆಯ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಯಾವಾಗಲೂ ಸಹಾಯ ಹಸ್ತವನ್ನು ನೀಡುತ್ತಲೇ ಇರುತ್ತದೆ. ಇದೀಗ ಸರಕಾರಿ ಪ್ರೌಢಶಾಲೆ ಕೊಯ್ಲಾದಲ್ಲಿ ಶಾಲಾ ಕಚೇರಿಗೆ ಅಗತ್ಯವಾಗಿರುವ ಒಂದು ಕಂಪ್ಯೂಟರ್, ಒಂದು ಯುಪಿಎಸ್ ಮತ್ತು ಒಂದು ಪ್ರಿಂಟರನ್ನು ಕೊಡುಗೆಯಾಗಿ ನೀಡಿದೆ.
Read Moreಸ್ವಸ್ತಿಕ್ ಪ್ರೀಮಿರ್ ಲೀಗ್-1 ಕ್ರಿಕೆಟ್ ಟೂರ್ನಮೆಂಟ್: ನವೀನ್ ಶೆಟ್ಟಿ ತಂಡ ಚಾಂಪಿಯನ್
ಪುತ್ತೂರು: ಮರಿಲ್ ಬಳಿ ಇರುವ ಸಾರ್ವಜನಿಕ ಕ್ರೀಡಾಂಗಣದಲ್ಲಿ ಜ.20 ರಂದು ನಡೆದ ನಮ್ಮ ಶಿಫ್ಟ್ ಅರ್ಪಿಸುವ ಸ್ವಸ್ತಿಕ್ ಪ್ರೀಮಿಯರ್ ಲೀಗ್ ಸೀಸನ್-1 ಕ್ರಿಕೆಟ್ ಟೂರ್ನಮೆಂಟ್ನಲ್ಲಿ ನವೀನ್ ಶೆಟ್ಟಿ ನಾಯಕತ್ವದ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.
Read Moreಸಹಕಾರಿ ಸೌಹಾರ್ದ ಚುನಾವಣೆ: ಸುನಿಲ್ ಬೋರ್ಕರ್ ನೇತೃತ್ವದ ತಂಡ ಅಖಾಡಕ್ಕೆ
ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಆಡಳಿತ ಮಂಡಳಿಯ ಚೊಚ್ಚಲ ಚುನಾವಣೆಗೆ ಒಟ್ಟು ಏಳು ಮಂದಿ ಸ್ಪರ್ಧಿಸುತ್ತಿದ್ದೇವೆ ಎಂದು ಸುನಿಲ್ ಬೋರ್ಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Read MoreMangalore : ಕರಾವಳಿಗೆ ಬೇಕಿದೆ ಸುಸಜ್ಜಿತ ಚಿತ್ರಮಂದಿರಗಳು: ರಾಜ್ ಬಿ ಶೆಟ್ಟಿ
ಕರಾವಳಿ ಕರ್ನಾಟಕದಲ್ಲಿ ಚಿತ್ರಗಳಿಗೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದ್ದು, ಹೆಚ್ಚುತ್ತಿರುವ ಬೇಡಿಕೆಗೆ ತಕ್ಕಂತೆ ಇನ್ನಷ್ಟು ಚಿತ್ರಮಂದಿರಗಳನ್ನು ತೆರೆಯಬೇಕಾಗಿದೆ ಎಂದು ರಾಜ್ ಬಿ. ಶೆಟ್ಟಿ ಹೇಳಿದರು.
Read MorePuttur : ಕಳ್ಳತನ್ನ ತಪ್ಪಿಸಲು ಚಪ್ಪಲ್ ಗೆ ಬೀಗದ ಭದ್ರತೆ!
ಪುತ್ತೂರಿನ ಸಭಾಭವನವೊಂದರಲ್ಲಿ ಕಾರ್ಯಕ್ರಮ ನಡೆಯುತ್ತಿತ್ತು. ಸಭಾಂಗಣದ ಒಳಗೆ ಹೋದವರೆಲ್ಲರೂ ಚಪ್ಪಲಿ ಹೊರಗಿಟ್ಟು ತೆರಳಿದ್ದರು. ಎಲ್ಲರೂ ಸಭಾ ಭವನದ ಪ್ರವೇಶ ದ್ವಾರದ ಬಳಿ ಚಪ್ಪಲಿ ಇಟ್ಟು ತೆರಳಿದ್ದರು. ಆದರೆ ಇದೇ ಸಭಾಂಗಣದ ಸ್ವಲ್ಪ ದೂರದಲ್ಲಿ ಬೀಗ ಹಾಕಿದ ಚಪ್ಪಲಿಯನ್ನು ಕಂಡು ಒಮ್ಮೆಲೆ ಆಶ್ಚರ್ಯವಾಯಿತು. ಹಳೆಯ ಎರಡು ಚಪ್ಪಲಿಗಳ ಬಾರವನ್ನು ಜೋಡಿಸಿ ಹಳೆಯ ಬೀಗವನ್ನು ಜಡಿಯಲಾಗಿತ್ತು. ಇದು ಚಪ್ಪಲಿ ಕದಿಯದಿರಲಿ ಎಂಬ ಉದ್ದೇಶದಿಂದ ಆ ವ್ಯಕ್ತಿ ಬೀಗ ಹಾಕಿದ್ದಾಗಿದೆ. ಹಲವು ಬಾರಿ ಇವರ ಚಪ್ಪಲಿ ಕಳುವಾದ ಬಳಿಕ ಬೀಗ ಹಾಕುವ ತೀರ್ಮಾನಕ್ಕೆ ಬಂದಿರುವುದಾಗಿದೆ.
Read More
