Breaking News

Udupi : ಖಾಸಗಿ ಬಸ್ ಗಳಿಗೂ ಬಾಗಿಲು ಅಳವಡಿಕೆ ಕಡ್ಡಾಯ: ಅಂತಿಮ ದಿನ ವಿಸ್ತರಣೆ

ಉಡುಪಿ : ಜಿಲ್ಲೆಯ ಎಲ್ಲಾ ಖಾಸಗಿ ಬಸ್‌ಗಳಲ್ಲಿ ಕಡ್ಡಾಯವಾಗಿ ಬಾಗಿಲುಗಳನ್ನು ಅಳವಡಿಸುವ ಸಂಬಂಧ ನೀಡಲಾಗಿದ್ದ ಗಡುವನ್ನು ಜೂನ್ 1, 2026ರವರೆಗೆ ವಿಸ್ತರಿಸಲಾಗಿದೆ. ಈ ಕುರಿತು ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ ಅವರ ಅಧ್ಯಕ್ಷತೆಯಲ್ಲಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಅವರ ಉಪಸ್ಥಿತಿಯಲ್ಲಿ ನಡೆದ ಖಾಸಗಿ ಬಸ್ ಮಾಲೀಕರ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಪ್ರಸ್ತುತ ಶಾಲಾ ಶೈಕ್ಷಣಿಕ ವೇಳಾಪಟ್ಟಿ ಹಾಗೂ ಮಾರ್ಚ್ ವರೆಗೆ ನಡೆಯುವ ಪರೀಕ್ಷಾ ಅವಧಿ, ಜೊತೆಗೆ ಬಸ್‌ಗಳಲ್ಲಿ ಮಡಚುವ (ಫೋಲ್ಡಿಂಗ್) ಮಾದರಿಯ ಬಾಗಿಲುಗಳನ್ನು

Read More

Cambodia : ಕಾಂಬೋಡಿಯದಲ್ಲಿ ಸಿಲುಕಿದ್ದ ಮಂಗಳೂರಿನ ಐವರ ರಕ್ಷಣೆ

ಮಂಗಳೂರು : ಕಾಂಬೋಡಿಯದಲ್ಲಿ ಸೈಬರ್ ವಂಚಕರ ಕೈಗೆ ಸಿಲುಕಿ ಬಂಡವಾಳ ಕಾರ್ಮಿಕರಂತೆ ಬಂಧಿತರಾಗಿದ್ದ ಮಂಗಳೂರು ಮೂಲದ ಐವರು ಯುವಕರನ್ನು ಸುರಕ್ಷಿತವಾಗಿ ಭಾರತಕ್ಕೆ ಮರಳಿ ತರಲು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ನಿರಂತರ ಪ್ರಯತ್ನಗಳು ಯಶಸ್ವಿಯಾಗಿವೆ. ಉದ್ಯೋಗದ ಹುಡುಕಾಟದಲ್ಲಿ ಕಾಂಬೋಡಿ ತೆರಳಿದ್ದ ಈ ಯುವಕರು ಸೈಬರ್ ಅಪರಾಧ ಜಾಲದಲ್ಲಿ ಸಿಲುಕಿ ತಿಂಗಳಾವಧಿ ತೀವ್ರ ಸಂಕಷ್ಟ ಅನುಭವಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹಸ್ತಕ್ಷೇಪದ ಫಲವಾಗಿ, ದಕ್ಷಿಣ

Read More

KSRTC : ಸಾರಿಗೆ ಬಸ್ ಗಳಲ್ಲಿ ಗುಡ್ಕ, ತಂಬಾಕು ಜಾಹೀರಾತುಗಳಿಗೆ ನಿರ್ಬಂಧ

ಬೆಂಗಳೂರು : ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗಳ ಮೇಲೆ ಗುಟ್ಕಾ, ತಂಬಾಕು ಉತ್ಪನ್ನಗಳ ಜಾಹೀರಾತು ಹೆಚ್ಚಾಗಿರೋದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಕಾರಣ ಸಾರಿಗೆ ಸಚಿವರು ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಅಧಿಕೃತ ಸೂಚನಾ ಪತ್ರ ರವಾನಿಸಿದ್ದಾರೆ.’ಸಾರ್ವಜನಿಕರ ಹಿತದೃಷ್ಟಿಯಿಂದ ಈ ಕೂಡಲೇ ಬಸ್ಸುಗಳಲ್ಲಿ ಮತ್ತು ಬಸ್ ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನಗಳ ಸೇವನೆಗೆ ಉತ್ತೇಜಿಸುವ ನೇರ ಅಥವಾ ಪರೋಕ್ಷವಾದ ಯಾವುದೇ ಜಾಹೀರಾತುಗಳನ್ನು ಪ್ರಚಾರ ಮಾಡುವಂತಿಲ್ಲ ಎಂದು ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಇದನ್ನೂ ಓದಿ

Read More