ದೆಹಲಿ: ಯುದ್ಧದ ಹಿನ್ನೆಲೆಯಲ್ಲಿ ಉಂಟಾಗಿದ್ದ ಅಡುಗೆ ಅನಿಲದ ತೀವ್ರ ಅಭಾವದಿಂದ ಕಂಗಾಲಾಗಿದ್ದ ಹೋಟೆಲ್ ಮತ್ತು ರೆಸ್ಟೋರೆಂಟ್ ಮಾಲೀಕರಿಗೆ ಕೇಂದ್ರ ಪೆಟ್ರೋಲಿಯಂ ಸಚಿವಾಲಯವು ಭರ್ಜರಿ ಸಿಹಿ ಸುದ್ದಿ ನೀಡಿದೆ. ವಾಣಿಜ್ಯ ಬಳಕೆಯ ಸಿಲಿಂಡರ್ಗಳ ಕೊರತೆಯನ್ನು ನೀಗಿಸಲು ರಾಜ್ಯಗಳಿಗೆ ನೀಡಲಾಗುವ ಎಲ್ಪಿಜಿ ಹಂಚಿಕೆಯಲ್ಲಿ ಶೇ. 20ರಷ್ಟು ಹೆಚ್ಚಳ ಮಾಡಲಾಗಿದೆ.
ರಾಜ್ಯಗಳಿಗೆ ನೀಡಲಾಗುತ್ತಿದ್ದ ಒಟ್ಟಾರೆ ಎಲ್ಪಿಜಿ ಹಂಚಿಕೆಯನ್ನು ಈಗ ಶೇ. 50ರ ಮಟ್ಟಕ್ಕೆ ಹೆಚ್ಚಿಸಲಾಗಿದೆ. ಇದು ಮಾರ್ಚ್ 23, 2026ರಿಂದ (ಸೋಮವಾರ) ಜಾರಿಗೆ ಬರಲಿದೆ. ಈ ಹೆಚ್ಚುವರಿ ಅನಿಲವನ್ನು ಪ್ರಮುಖವಾಗಿ ರೆಸ್ಟೋರೆಂಟ್ಗಳು, ಹೋಟೆಲ್ಗಳು, ಧಾಬಾಗಳು, ಕೈಗಾರಿಕಾ ಕ್ಯಾಂಟೀನ್ಗಳು ಮತ್ತು ಡೈರಿ ಉದ್ಯಮಗಳಿಗೆ ಆದ್ಯತೆಯ ಮೇಲೆ ವಿತರಿಸಲು ಕೇಂದ್ರ ಸೂಚಿಸಿದೆ.

ಅನಿಲದ ಕೊರತೆಯಿಂದಾಗಿ ಉಡುಪಿಯ ಮಲ್ಪೆ ಸೇರಿದಂತೆ ದೇಶದ ಹಲವೆಡೆ ಮೀನು ಊಟದ ಹೋಟೆಲ್ಗಳು ಮತ್ತು ಸಣ್ಣ ರೆಸ್ಟೋರೆಂಟ್ಗಳು ಮುಚ್ಚುವ ಹಂತಕ್ಕೆ ತಲುಪಿದ್ದವು. ಸರ್ಕಾರದ ಈ ನಡೆ ಉದ್ಯಮಕ್ಕೆ ಮರುಜೀವ ನೀಡಲಿದೆ. ಕಾರ್ಮಿಕರಿಗಾಗಿ 5 ಕೆಜಿಯ ಎಫ್ಟಿಎಲ್ (FTL) ಸಿಲಿಂಡರ್ಗಳನ್ನು ಸುಲಭವಾಗಿ ಒದಗಿಸಲು ವ್ಯವಸ್ಥೆ ಮಾಡಲಾಗಿದ್ದು, ಸಮುದಾಯ ಅಡುಗೆ ಮನೆಗಳಿಗೂ (Community Kitchens) ನಿರಂತರ ಪೂರೈಕೆ ಮಾಡಲಾಗುವುದು.
ಇದನ್ನೂ ಓದಿ: ವಾಹನ ಸವಾರರಿಗೆ ಶಾಕ್! ಪ್ರೀಮಿಯಂ ಪೆಟ್ರೋಲ್ ಬೆಲೆ ದಿಢೀರ್ ಏರಿಕೆ
ಈ ಹೆಚ್ಚುವರಿ ಗ್ಯಾಸ್ ದುರುಪಯೋಗವಾಗದಂತೆ ಮತ್ತು ಕಾಳಸಂತೆಗೆ ಹೋಗದಂತೆ ನೋಡಿಕೊಳ್ಳಲು ರಾಜ್ಯ ಸರ್ಕಾರಗಳಿಗೆ ಪೆಟ್ರೋಲಿಯಂ ಇಲಾಖೆ ಕಾರ್ಯದರ್ಶಿಗಳು ಪತ್ರ ಬರೆದು ಸೂಚಿಸಿದ್ದಾರೆ.
ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

