ಮಲ್ಪೆ ಬಂದರಿನಲ್ಲಿ ಮೀನುಗಾರಿಕಾ ಬಿಕ್ಕಟ್ಟು! ಪಾತಾಳಕ್ಕೆ ಕುಸಿದ ಮೀನಿನ ದರ

ಉಡುಪಿ: ಎಲ್ಲೋ ನಡೆಯುತ್ತಿರುವ ಯುದ್ಧದ ಬಿಸಿ ಕರಾವಳಿಯ ಮೀನುಗಾರಿಕಾ ಉದ್ಯಮಕ್ಕೆ ತಟ್ಟಿದೆ. ಏಷ್ಯಾದ ಅತಿ ದೊಡ್ಡ ಮೀನುಗಾರಿಕಾ ಬಂದರು ಎನಿಸಿಕೊಂಡಿರುವ ಮಲ್ಪೆಯಲ್ಲಿ ಇಂದು ಮೀನುಗಾರಿಕೆ ಉದ್ಯಮ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಕೋಟ್ಯಂತರ ರೂಪಾಯಿ ವಹಿವಾಟು ಸ್ತಬ್ಧಗೊಂಡಿದೆ. ರಫ್ತು ಸ್ಥಗಿತಗೊಂಡಿರುವುದು ಮತ್ತು ಸ್ಥಳೀಯ ಬೇಡಿಕೆ ಕುಸಿದಿರುವುದರಿಂದ ಮೀನಿನ ದರದಲ್ಲಿ 100 ರಿಂದ 200 ರೂಪಾಯಿ ಇಳಿಕೆಯಾಗಿದೆ. ಇದು ಮೀನುಗಾರ ಮಹಿಳೆಯರಿಗೆ ಮತ್ತು ಬಂಡವಾಳ ಹಾಕಿದ ಮೀನುಗಾರರಿಗೆ ಭಾರಿ ನಷ್ಟ ಉಂಟುಮಾಡಿದೆ.

ಅಡುಗೆ ಅನಿಲದ (LPG) ಕೊರತೆ ಮತ್ತು ಗ್ರಾಹಕರ ಸಂಖ್ಯೆ ಇಳಿಮುಖವಾದ ಕಾರಣ ಪ್ರತಿದಿನ ಅನೇಕ ಮೀನು ಊಟದ ಹೋಟೆಲ್‌ಗಳು ಬಾಗಿಲು ಹಾಕುತ್ತಿವೆ. ಹೋಟೆಲ್ ಮಾಲೀಕರು ಮಾರುಕಟ್ಟೆಗೆ ಬಾರದ ಕಾರಣ ಮೀನುಗಳು ಮಾರುಕಟ್ಟೆಯಲ್ಲೇ ಉಳಿಯುತ್ತಿವೆ. ಮಲ್ಪೆಯಿಂದ ಕೇರಳದ ಹೋಟೆಲ್‌ಗಳಿಗೆ ಪ್ರತಿದಿನ ಹೋಗುತ್ತಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಮೀನು ಪೂರೈಕೆ ಈಗ ಸಂಪೂರ್ಣ ನಿಂತುಹೋಗಿದೆ. ಕೇರಳದಲ್ಲೂ ಹೋಟೆಲ್‌ಗಳು ಮುಚ್ಚಿರುವುದು ಇದಕ್ಕೆ ಮುಖ್ಯ ಕಾರಣ.

ಇದನ್ನೂ ಓದಿ: ಬಜ್ಪೆ: ಕಾರಿನಲ್ಲಿ ಗೋವುಗಳ ಕ್ರೂರ ಸಾಗಾಟ, ಇಬ್ಬರು ಆರೋಪಿಗಳ ಬಂಧನ

ಯುದ್ಧದ ಹಿನ್ನೆಲೆಯಲ್ಲಿ ಅಡುಗೆ ಅನಿಲ ಪೂರೈಕೆಯಲ್ಲಿ ಉಂಟಾಗಿರುವ ಗಂಭೀರ ಸಮಸ್ಯೆಯು ಹೋಟೆಲ್ ಉದ್ಯಮವನ್ನು ಹಳಿ ತಪ್ಪಿಸಿದೆ. “ದಿನವಿಡೀ ಕುಳಿತರೂ ವ್ಯಾಪಾರವಾಗುತ್ತಿಲ್ಲ, ಹಾಕಿದ ಅಸಲು ಕೂಡ ಸಿಗುತ್ತಿಲ್ಲ” ಎಂದು ಮಲ್ಪೆ ಮಾರುಕಟ್ಟೆಯ ಮಹಿಳೆಯರು ಅಳಲು ತೋಡಿಕೊಂಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು