Breaking News

Horoscope Today in Kannada: ಇಂದಿನ ದಿನ ಭವಿಷ್ಯ 18 ಆಗಸ್ಟ್ 2026 | 12 ರಾಶಿಗಳ ಫಲಾಫಲ

ಮೇಷ (Aries): ಅನಿರೀಕ್ಷಿತವಾಗಿ ದೂರದ ಪ್ರಯಾಣ ಕೈಗೊಳ್ಳಬೇಕಾಗಬಹುದು. ಆರೋಗ್ಯದಲ್ಲಿ ಹಠಾತ್ ಏರುಪೇರಾಗುವ ಸಾಧ್ಯತೆ ಇರುವುದರಿಂದ ಕಾಳಜಿ ವಹಿಸಿ. ಅನಗತ್ಯ ವೆಚ್ಚಗಳನ್ನು ನಿಯಂತ್ರಿಸುವುದು ಉತ್ತಮ.

ವೃಷಭ (Taurus): ಖರ್ಚು ವೆಚ್ಚಗಳನ್ನು ಸರಿದೂಗಿಸಲು ಶ್ರಮಿಸಬೇಕಾಗುತ್ತದೆ. ಕುಟುಂಬದ ಸದಸ್ಯರು ಹಾಗೂ ಸಂಗಾತಿಯ ಭಾವನೆಗಳಿಗೆ ಗೌರವ ನೀಡಿ. ಉದ್ಯೋಗ ಕ್ಷೇತ್ರದಲ್ಲಿ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.

ಮಿಥುನ (Gemini): ಕುಟುಂಬದವರೊಂದಿಗೆ ಮಾತನಾಡುವಾಗ ಬುದ್ಧಿವಂತಿಕೆ ಹಾಗೂ ತಾಳ್ಮೆ ಅಗತ್ಯ. ಹೊಸ ಸಂಪರ್ಕಗಳು ಮತ್ತು ನೆಟ್‌ವರ್ಕಿಂಗ್ ಮೂಲಕ ಆರ್ಥಿಕ ಲಾಭ ಅಥವಾ ಹೊಸ ಅವಕಾಶಗಳು ಒದಗಿಬರಲಿವೆ.

ಕಟಕ (Cancer): ವೈಯಕ್ತಿಕ ಹಾಗೂ ಸಾಮಾಜಿಕ ಜೀವನದಲ್ಲಿ ಕೆಲವು ಸಣ್ಣಪುಟ್ಟ ಸವಾಲುಗಳು ಎದುರಾಗಬಹುದು. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದ್ದು, ನಿರೀಕ್ಷಿತ ಹಣ ಕೈಸೇರುವ ಸಾಧ್ಯತೆ ಹೆಚ್ಚಿದೆ.

ಕನ್ಯಾ (Virgo): ವ್ಯಾಪಾರ ಮತ್ತು ಆಸ್ತಿ ವ್ಯವಹಾರಗಳಲ್ಲಿ ಕಾಗದಪತ್ರಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ನಿರ್ಧಾರ ತಗೊಳ್ಳಿ. ಕೆಲಸದ ಸ್ಥಳದಲ್ಲಿ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ.

ಸಿಂಹ (Leo): ಕೆಲಸದ ಒತ್ತಡ ಹೆಚ್ಚಾಗಲಿದೆ. ಆಪ್ತರ ಹಾಗೂ ಹಳೆಯ ಸ್ನೇಹಿತರ ಆಗಮನದಿಂದ ಮನಸ್ಸಿಗೆ ಸಂತೋಷ ಸಿಗಲಿದೆ. ಹಿರಿಯರ ಸಲಹೆಯನ್ನು ಪಡೆಯುವುದು ಸೂಕ್ತ.

ತುಲಾ (Libra): ಆಸ್ತಿ ಅಥವಾ ಅಪಾರ್ಟ್‌ಮೆಂಟ್‌ ಖರೀದಿಗೆ ಹಣ ಹೂಡಿಕೆ ಮಾಡಲು ಮನಸ್ಸು ಮಾಡುವಿರಿ. ಆರ್ಥಿಕ ನಿರ್ಧಾರಗಳು ಲಾಭದಾಯಕವಾಗಿರುತ್ತವೆ.

ವೃಶ್ಚಿಕ (Scorpio): ನಿಮ್ಮ ಮುಖ್ಯ ರಹಸ್ಯಗಳನ್ನು ಅಥವಾ ನಿರ್ಧಾರಗಳನ್ನು ಕುಟುಂಬದವರೊಂದಿಗೆ ಹಂಚಿಕೊಳ್ಳುವುದು ಒಳಿತು. ಕೆಲಸದಲ್ಲಿ ಏಕಾಗ್ರತೆ ವಹಿಸುವುದು ಮುಖ್ಯ.

ಧನುಸ್ಸು (Sagittarius) : ವ್ಯಾಪಾರಿಗಳಿಗೆ ಆರ್ಥಿಕ ಲಾಭ ಗಳಿಸಲು ಹೆಚ್ಚಿನ ಶ್ರಮ ಮತ್ತು ಒತ್ತಡ ಎದುರಾಗಲಿದೆ. ಆರೋಗ್ಯದ ವಿಚಾರದಲ್ಲಿ ಕೊಂಚ ಜಾಗ್ರತೆ ಅಗತ್ಯ.

ಮಕರ (Capricorn): ನಿರಂತರ ಕಠಿಣ ಪರಿಶ್ರಮಕ್ಕೆ ತಕ್ಕಂತೆ ಉತ್ತಮ ಫಲಿತಾಂಶಗಳು ಪ್ರಾಪ್ತಿಯಾಗಲಿವೆ. ಹಿರಿಯರ ಬೆಂಬಲ ನಿಮಗೆ ಎಷ್ಟೋ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ.

ಕುಂಭ (Aquarius): ಪೋಷಕರು ಮತ್ತು ಹಿರಿಯರ ಆಶೀರ್ವಾದ ಪಡೆದು ಶುಭ ಕಾರ್ಯಗಳನ್ನು ಆರಂಭಿಸಿ. ಉದ್ಯೋಗ ಮತ್ತು ಆರ್ಥಿಕ ರಂಗದಲ್ಲಿ ಅದೃಷ್ಟದ ಬೆಂಬಲ ಸಿಗಲಿದೆ.

ಮೀನ (Pisces): ಶುಚಿತ್ವ ಮತ್ತು ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಿ. ವೃತ್ತಿಜೀವನದಲ್ಲಿ ಸುಧಾರಣೆ ಕಂಡುಬರಲಿದ್ದು, ನಿರೀಕ್ಷಿತ ಕೆಲಸಗಳು ಪೂರ್ಣಗೊಳ್ಳಲಿವೆ.

Leave a Reply

Your email address will not be published. Required fields are marked *