ಬಂಟ್ವಾಳ: ಪೂರ್ಲಪ್ಪಾಡಿಯ ಶ್ರೀವರ ಯುವಕ ಮಂಡಲದ ನಾಲ್ಕನೇ ವಾರ್ಷಿಕೋತ್ಸವದ ಪ್ರಯುಕ್ತ ಫೆ.21 ರಂದು ಅವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮಟ್ಟದ ಲೆವೆಲ್ ಮಾದರಿಯ 530 ಕೆಜಿ ವಿಭಾಗದ 7 ಜನರ ಮುಕ್ತ ಪುರುಷರ ಹಗ್ಗ ಜಗ್ಗಾಟ ಪಂದ್ಯಾಟ ಆಯೋಜಿಸಲಾಗಿದೆ.
ಇದನ್ನೂ ಓದಿ: ಫೆ.8 ರಂದು ಕೊಡ್ಮಣ್ ಪ್ರೀಮಿಯರ್ ಲೀಗ್-3 ಕ್ರಿಕೆಟ್ ಪಂದ್ಯಾವಳಿ

ವಿಟ್ಲದ ಪಡ್ನೂರಿನಲ್ಲಿರುವ ಪೂರ್ಲಪ್ಪಾಡಿ ಶ್ರೀವರ ವೇದಿಕೆ ಮುಂಭಾಗದಲ್ಲಿ ಈ ಪಂದ್ಯಾಟ ನಡೆಯಲಿದೆ. ಗೆದ್ದ ಪ್ರಥಮ ತಂಡಕ್ಕೆ 8026 ರೂ. ನಗದು ಬಹುಮಾನದ ಜೊತೆಗೆ ಶ್ರೀವರ ಟ್ರೋಫಿ, ದ್ವಿತೀಯ 5026 ರೂ. ನಗದು ಬಹುಮಾನದ ಜೊತೆಗೆ ಶ್ರೀವರ ಟ್ರೋಫಿ, ತೃತೀಯ 3026 ರೂ. ನಗದು ಬಹುಮಾನದ ಜೊತೆ ಶ್ರೀವರ ಟ್ರೋಫಿ ಮತ್ತು ಚತುರ್ಥ 2026 ರೂ. ನಗದು ಬಹುಮಾನದ ಜೊತೆಗೆ ಶ್ರೀವರ ಟ್ರೋಫಿ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ 9901796849, 9591174935 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

