Breaking News

Sullia : ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ವಿರುದ್ಧ ಅವಹೇಳನಕಾರಿ ಪೋಸ್ಟ್ : ಖಂಡನೆ

ಸುಳ್ಯ : ಫೇಸ್‌ಬುಕ್, ಎಕ್ಸ್ (ಟ್ವಿಟರ್) ಖಾತೆ, ಇನ್ಸ್ಟಾಗ್ರಾಂ, ಯೂಟ್ಯೂಬ್ ಮೊದಲಾದ ಸಾಮಾಜಿಕ ಜಾಲತಾಣಗಳು ಅಭಿಪ್ರಾಯ ವ್ಯಕ್ತಪಡಿಸುವ ಮುಕ್ತ ವೇದಿಕೆಯಾಗಿವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ವೇದಿಕೆಗಳಲ್ಲಿ ಅವಹೇಳನಕಾರಿ ಹೇಳಿಕೆಯನ್ನು ಪೋಸ್ಟ್ ಮಾಡುವ ಸಂಸ್ಕೃತಿ ಗಂಭೀರ ಸಮಸ್ಯೆಯಾಗಿ ಬೆಳೆಯುತ್ತಿದೆ. ಉದ್ದೇಶಪೂರ್ವಕವಾಗಿ ವ್ಯಕ್ತಿ, ಸಮೂಹ ಅಥವಾ ಸಂಸ್ಥೆಯನ್ನು ಅವಮಾನಿಸುವುದು, ನಿಂದಿಸುವುದು ಸರ್ವೇ ಸಾಮಾನ್ಯವಾಗಿದೆ. ಹೌದು… ಇದೀಗ ಸುಳ್ಯದ ಶಾಸಕರ ಮೇಲೆ ಅವಹೇಳನಕಾರಿ ಪೋಸ್ಟ್ ಹಾಕುವುದರ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ : DL : ರಾಜ್ಯದಲ್ಲಿ 5947 ಡ್ರೈವಿಂಗ್ ಲೈಸೆನ್ಸ್ ರದ್ದು, ಇನ್ನೂ ಬಾಕಿ ಇವೆ ಪ್ರಕರಣಗಳು

Advertisement

ಹಲವಾರು ಜನರು ಸಾಮಾಜಿಕ ಜಾಲತಾಣದಲ್ಲಿ ಖಂಡನೆ ;

ಬಿಲ್ಲವ ಸಮುದಾಯದ ಸಂದೇಶ್ ಎಂಬ ವ್ಯಕ್ತಿಯೊಬ್ಬ ಫೇಸ್ಬುಕ್ ನಲ್ಲಿ ಸುಳ್ಯ ಶಾಸಕರಾದ ಭಾಗೀರಥಿ ಮುರುಳ್ಯ ರ ಭಾವಚಿತ್ರ ಹಾಕಿ ಶ್ರದ್ಧಾಂಜಲಿ ಎಂದು ಹಾಕಿರುತ್ತಾರೆ. ಈ ವಿಷಯವಾಗಿ ಹಲವಾರು ಜನರು ಸಾಮಾಜಿಕ ಜಾಲತಾಣದಲ್ಲಿ ಖಂಡನೆಯನ್ನು ವ್ಯಕ್ತಪಡಿಸುತ್ತಿರುವುದು ವರದಿಯಾಗಿದೆ. ದಲಿತ ಸಮುದಾಯದ ಅದರಲ್ಲೂ ಯಾವುದೇ ರಾಜಕಾರಣದ ಹಿನ್ನಲೆ ಇಲ್ಲದೆ ಅತ್ಯಂತ ಕಡು ಕುಟುಂಬದಲ್ಲಿ ಹುಟ್ಟಿ ಯಾವುದೇ ಹಗರಣ ಮಾಡದೆ ತಾವಾಯ್ತು ತಮ್ಮ ಕೆಲಸವಾಯ್ತು ಅಂತ ಇರುವ ಸುಳ್ಯದ ಬಿಜೆಪಿಯ ದಲಿತ ಕುಟುಂಬದಿಂದ ಬಂದ ಶಾಸಕಿ ಭಾಗೀರಥಿ ಮುರುಳ್ಯರವರನ್ನು ಜೀವಂತ ಇರುವಾಗಲೇ ಅವರು ಸತ್ತುಹೋಗಿದ್ದಾರೆ ಅಂತ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಹೇಳಿಕೆಯನ್ನು ಪೋಸ್ಟ್ ಮಾಡಿ ಶ್ರದ್ಧಾಂಜಲಿ ಸಲ್ಲಿಸಿರುವುದು ಆತನ ವಿಕೃತ ಮನಸ್ಸಿನ ಪರಮಾವಧಿ ಎಂದು ಕೆಲವರು ಆರೋಪಿಸಿರುತ್ತಾರೆ.

ಅವನು ಯಾರೇ ಆಗಿರಲಿ,‌ಒಂದು ಹೆಣ್ಣಿಗೆ ಮಾಡಿದ ಅವಮಾನ. ಭಾಗೀರಥಿ ಅವರು ತಾಯಿಗೆ ಸಮಾನ, ಅವರನ್ನು ಅವಮಾನ ಮಾಡುವುದು ಅಕ್ಷಮ್ಯ ಅಪರಾಧ. ಇಂತಹ ಕೃತ್ಯವನ್ನು ಆದಿ ದ್ರಾವಿಡ ಸಮುದಾಯ ತೀವ್ರವಾಗಿ ಖಂಡಿಸುತ್ತದೆ. ಅವನು ಯಾರೇ ಆಗಿರಲಿ, ತಕ್ಷಣ ಅವನ ಮೇಲೆ  ಕೇಸು ದಾಖಲಿಸಿ ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಿ ಎಂದು ಅವರು ಆಗ್ರಹಿಸಿದ್ದಾರೆ.‌ ದಲಿತ ಸಮುದಾಯಕ್ಕೆ ಸೇರಿದವರು ಹಾಗೂ ಮಹಿಳೆ ಎಂಬ ಕಾರಣಕ್ಕೆ ಈ ರೀತಿ ಅವರ ಬಗ್ಗೆ ಬರೆದು ಹಾಕುವುದು ಖಂಡನೀಯ. ಇಂತಹ ವ್ಯಕ್ತಿಗಳಿಂದ ಸಮಾಜದ ಶಾಂತಿ ಕದಡುತ್ತದೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು