ಬೆಂಗಳೂರು : ವಾಹನ ಚಾಲನೆ ಇಂದಿನ ಜೀವನದ ಅವಿಭಾಜ್ಯ ಭಾಗವಾಗಿದ್ದು, ರಸ್ತೆ ಸುರಕ್ಷತೆ ಹಾಗೂ ಸಂಚಾರ ನಿಯಮಗಳ ಪಾಲನೆಗಾಗಿ ಚಾಲನಾ ಪರವಾನಗಿ/ಡ್ರೈವಿಂಗ್ ಲೈಸೆನ್ಸ್ ಕಡ್ಡಾಯವಾಗಿದೆ. ಚಾಲನಾ ಪರವಾನಗಿ ಎಂದರೆ ವ್ಯಕ್ತಿಯು ಸಾರ್ವಜನಿಕ ರಸ್ತೆಯಲ್ಲಿ ಕಾನೂನುಬದ್ಧವಾಗಿ ವಾಹನ ಚಲಾಯಿಸಲು ಅರ್ಹನಾಗಿದ್ದಾನೆ ಎಂಬುದಕ್ಕೆ ಸರ್ಕಾರ ನೀಡುವ ಅಧಿಕೃತ ದಾಖಲೆಯಾಗಿರುತ್ತದೆ.
ಅಲ್ಲದೇ ಈ ಚಾಲನಾ ಪರವಾನಗಿ ಇಲ್ಲದೆ ವಾಹನ ಚಾಲನೆ ಮಾಡುವುದು ಕಾನೂನುಬಾಹಿರ. ಇದು ಕೇವಲ ದಾಖಲೆ ಮಾತ್ರವಲ್ಲದೆ, ಚಾಲಕನಿಗೆ ಸಂಚಾರ ನಿಯಮಗಳು, ರಸ್ತೆ ಶಿಸ್ತು ಹಾಗೂ ಸುರಕ್ಷತೆಯ ಅರಿವು ಇದೆ ಎಂಬುದನ್ನು ದೃಢೀಕರಿಸುತ್ತದೆ. ಅಪಘಾತಗಳನ್ನು ತಡೆಗಟ್ಟಲು ಹಾಗೂ ರಸ್ತೆಗಳಲ್ಲಿ ಶಿಸ್ತು ಕಾಪಾಡಲು ಚಾಲನಾ ಪರವಾನಗಿ ಪ್ರಮುಖ ಪಾತ್ರ ವಹಿಸುತ್ತದೆ.

ಇದನ್ನೂ ಓದಿ : ವಾಹನ ಕಳ್ಳತನದ ಕ್ಲೇಮ್ ಪಾವತಿಸಲು ವಿಮಾ ಕಂಪನಿಗೆ ಗ್ರಾಹಕ ನ್ಯಾಯಾಲಯ ಆದೇಶ
ಸ್‌ಮಸ್ ರಜೆ ಹಾಗೂ ಹೊಸ ವರ್ಷದ ಆಚರಣೆಗಳ ವೇಳೆ ತಪಾಸಣೆಗಳನ್ನು ತೀವ್ರ;

2025ರಲ್ಲಿ ಕರ್ನಾಟಕ ರಾಜ್ಯಾದ್ಯಂತ ಒಟ್ಟು 5,947 ಚಾಲನಾ ಪರವಾನಗಿಗಳನ್ನು (ಡಿಎಲ್) ಸಾರಿಗೆ ಇಲಾಖೆ ಅಮಾನತುಗೊಳಿಸಿದೆ. ಆರು ಸಾರಿಗೆ ವಿಭಾಗಗಳಲ್ಲಿ ಬೆಂಗಳೂರು ನಗರವೇ ಅಗ್ರಸ್ಥಾನದಲ್ಲಿದ್ದು 4,479 ಪರವಾನಗಿ ಅಮಾನತು ಪ್ರಕರಣಗಳು ದಾಖಲಾಗಿವೆ.
ಸಾರಿಗೆ ಇಲಾಖೆ ಅಧಿಕಾರಿಗಳ ಪ್ರಕಾರ, ಅತಿವೇಗ, ಅಜಾಗರೂಕ ಹಾಗೂ ನಿರ್ಲಕ್ಷ್ಯ ಚಾಲನೆ ಸೇರಿದಂತೆ ವಿವಿಧ ಸಂಚಾರ ನಿಯಮ ಉಲ್ಲಂಘನೆಗಳಿಗೆ ಸಂಬಂಧಿಸಿದ 1,512 ಪ್ರಕರಣಗಳು ಇನ್ನೂ ವಿವಿಧ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ (ಆರ್‌ಟಿಒ) ಬಾಕಿ ಉಳಿದಿವೆ. ಕ್ರಿಸ್‌ಮಸ್ ರಜೆ ಹಾಗೂ ಹೊಸ ವರ್ಷದ ಆಚರಣೆಗಳ ವೇಳೆ ತಪಾಸಣೆಗಳನ್ನು ತೀವ್ರಗೊಳಿಸಿರುವ ಹಿನ್ನೆಲೆಯಲ್ಲಿ, ಮುಂದಿನ ದಿನಗಳಲ್ಲಿ ಅಮಾನತು ಪ್ರಕರಣಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಟ್ಟು ಅಮಾನತುಗಳಲ್ಲಿ 4,735 ಚಾಲನಾ ಪರವಾನಗಿಗಳು ಮದ್ಯಪಾನ ಮಾಡಿ ವಾಹನ ಚಾಲನೆ ಪ್ರಕರಣಗಳಿಗೆ ಸಂಬಂಧಿಸಿದ್ದಾಗಿವೆ. ಸಾರಿಗೆ ಇಲಾಖೆ ನಿಯಮಾನುಸಾರ, ಚಾಲನಾ ಪರವಾನಗಿಯನ್ನು ಮೂರು ತಿಂಗಳಿಂದ ಆರು ತಿಂಗಳವರೆಗೆ ಅಮಾನತುಗೊಳಿಸುವ ಅಧಿಕಾರ ಹೊಂದಿದೆ. ಏಪ್ರಿಲ್‌ನಿಂದ ನವೆಂಬರ್ 2025ರ ಅವಧಿಯಲ್ಲಿ ರಾಜ್ಯದಲ್ಲಿ ಈ 5,947 ಚಾಲನಾ ಪರವಾನಗಿ ಅಮಾನತುಗಳು ನಡೆದಿದ್ದು, ಅದರಲ್ಲಿ ಹೆಚ್ಚಿನವು ಮದ್ಯಪಾನ ಚಾಲನೆಗೆ ಸಂಬಂಧಿಸಿದವು. ಜೊತೆಗೆ, ಅಮಾನತಿಗಾಗಿ ಶಿಫಾರಸು ಮಾಡಲಾಗಿರುವ 1,512 ಪ್ರಕರಣಗಳಲ್ಲಿ ಇನ್ನೂ ಕ್ರಮ ಕೈಗೊಳ್ಳುವುದು ಬಾಕಿಯಾಗಿದೆ. ಇದಲ್ಲದೆ, ಹೊಸ ವಾಹನಗಳು ಒಂದು ವರ್ಷ ಪೂರೈಸಿದ ನಂತರ ಮಾಲಿನ್ಯ ಪರೀಕ್ಷೆ ಕಡ್ಡಾಯವಾಗಿ ಮಾಡಿಸಬೇಕೆಂದು ಸಾರಿಗೆ ಇಲಾಖೆ ಸ್ಪಷ್ಟಪಡಿಸಿದೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

