ದೆಹಲಿಯ ಜಂತರ್ ಮಂತರ್‌ನಲ್ಲಿ ಧರಣಿಗೆ ನಿಷೇಧ

ದೆಹಲಿ: ದೇಶದ ರಾಜಧಾನಿ ನವದೆಹಲಿಯಲ್ಲಿ ಸುದೀರ್ಘ ದಶಕಗಳಿಂದ ಸಾರ್ವಜನಿಕ ಮತ್ತು ರಾಜಕೀಯ ಪ್ರತಿಭಟನೆಗಳಿಗೆ ಪ್ರಮುಖ ಕೇಂದ್ರವಾಗಿದ್ದ ಐತಿಹಾಸಿಕ ‘ಜಂತರ್ ಮಂತರ್’ (Jantar Mantar) ಧರಣಿ ಸ್ಥಳವನ್ನು ಅಧಿಕೃತವಾಗಿ ರದ್ದುಗೊಳಿಸಲಾಗಿದೆ. ದೆಹಲಿ ಪೊಲೀಸ್ ಆಯುಕ್ತ ಅನುರಾಗ್ ಕುಮಾರ್ ಅವರು ಈ ಕುರಿತು ಅಧಿಕೃತ ಅಧಿಸೂಚನೆ ಹೊರಡಿಸಿದ್ದು, ಸ್ಟ್ಯಾಂಡಿಂಗ್ ಆರ್ಡರ್ ಸಂಖ್ಯೆ L&O/48/22 ಗೆ ಮಹತ್ವದ ತಿದ್ದುಪಡಿ ತಂದಿದ್ದಾರೆ.

ಕೇಂದ್ರ ಗೃಹ ಸಚಿವಾಲಯ ರಚಿಸಿದ್ದ ವಿಶೇಷ ಸಮಿತಿಯ ಶಿಫಾರಸಿನ ಮೇರೆಗೆ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಸಾರ್ವಜನಿಕ ಹಾಗೂ ನಾಗರಿಕ ಸಮಾಜದ ಪ್ರತಿಭಟನೆಗಳಿಗೆ ದೆಹಲಿಯಲ್ಲಿ ಮೂರು ಹೊಸ ಪರ್ಯಾಯ ಸ್ಥಳಗಳನ್ನು ನಿಗದಿಪಡಿಸಲಾಗಿದೆ.

ಇದನ್ನೂ ಓದಿ: ಸಂತ್ರಸ್ತೆಯ ವಾದ ಆಲಿಸದೆ ನೀಡುವ ಜಾಮೀನು ‘ಅಸಿಂಧು’ : ವಿಚಾರಣಾ ನ್ಯಾಯಾಲಯದ ಕಾರ್ಯವೈಖರಿಗೆ ಅಲಹಾಬಾದ್ ಹೈಕೋರ್ಟ್ ತೀವ್ರ ಅಸಮಾಧಾನ

ದೆಹಲಿಯ ಹೊಸ 3 ಪ್ರತಿಭಟನಾ ಸ್ಥಳಗಳು :

ಅಕ್ಟೋಬರ್ 12 ರಿಂದ ಜಾರಿಗೆ ಬರುವಂತೆ ಸಾರ್ವಜನಿಕರು ಹಾಗೂ ಪ್ರತಿಭಟನಾಕಾರರು ತಮ್ಮ ಧರಣಿ ಮತ್ತು ಸತ್ಯಾಗ್ರಹಗಳನ್ನು ನಿಗದಿಪಡಿಸಿದ ಹೊಸ ಮೂರು ಮೈದಾನಗಳಲ್ಲೇ ನಡೆಸಬೇಕಾಗುತ್ತದೆ.

“ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಜಂತರ್ ಮಂತರ್ ಅನ್ನು ಪ್ರತಿಭಟನಾ ಸ್ಥಳವೆಂದು ನೀಡಲಾಗಿದ್ದ ಮಾನ್ಯತೆಯನ್ನು ರದ್ದುಗೊಳಿಸಲಾಗಿದೆ. ಈ ಹೊಸ ಮೂರು ಸ್ಥಳಗಳಲ್ಲಿ ಪ್ರತಿಭಟನೆ ಆಯೋಜಿಸಲು ವಿವರವಾದ ಪರಿಷ್ಕೃತ ಪ್ರಮಾಣಿತ ಕಾರ್ಯವಿಧಾನವನ್ನು (SOP) ಪ್ರತ್ಯೇಕವಾಗಿ ಹೊರಡಿಸಲಾಗುವುದು” ಎಂದು ದೆಹಲಿ ಪೊಲೀಸ್ ಕಮಿಷನರೇಟ್ ಆದೇಶದಲ್ಲಿ ತಿಳಿಸಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ