ವಡೋದರ: ಮಹಿಳಾ ಐಪಿಎಲ್ನ ರೋಚಕ ಎಲಿಮಿನೇಟರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗುಜರಾತ್ ಜೈಂಟ್ಸ್ ತಂಡದ ವಿರುದ್ಧ ಜಯ ಗಳಿಸಿ ಸತತ ನಾಲ್ಕನೇ ಬಾರಿಗೆ ಫೈನಲ್ಸ್ಗೆ ಪ್ರವೇಶ ಪಡೆಯಿತು.
ಇಲ್ಲಿನ ಬಿಸಿಎ ಸ್ಟೇಡಿಯಂ ನಲ್ಲಿ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು.

ಇದನ್ನೂ ಓದಿ: ವಿಬಿ ಜಿ ರಾಮ್ಜಿ ಕಾಯ್ದೆ: ಸಿಎಂ ಹೇಳಿಕೆಗೆ ಸದನದಲ್ಲಿ ಭಾರಿ ಗದ್ದಲ
ಗುಜರಾತ್ ಪರ ಆರಂಭಿಕ ಆಟಗಾರ್ತಿ ಬೇತ್ ಮೂನಿ ಅಜೇಯ 62 ರನ್ ಗಳಿಸಿ ತಂಡಕ್ಕೆ ಆಧಾರವಾದರು. ಜಾರ್ಜಿಯ ವೇರ್ಹಮ್ 35, ಕಶ್ವಿ ಗೌತಮ್ 18, ಅನುಶ್ಕ ಶರ್ಮ 16 ರನ್ಗಳ ಉಪಯುಕ್ತ ಕಾಣಿಕೆ ನೀಡಿದರು. ನಿಗದಿತ 20 ಓವರ್ಗಳಲ್ಲಿ ಗುಜರಾತ್ ತಂಡ 7 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿತು. ಡೆಲ್ಲಿ ಪರ ಚಿನ್ನೆಲೆ ಹೆನ್ರಿ 3 ವಿಕೆಟ್, ನಂದಿನಿ ಶರ್ಮ 2 ವಿಕೆಟ್, ಮಿನು ಮಣಿ ಒಂದು ವಿಕೆಟ್ ಪಡೆದರು.
168 ರನ್ ಗುರಿ ಬೆನ್ನತ್ತಿದ ಡೆಲ್ಲಿ ತಂಡಕ್ಕೆ ಆರಂಭಿಕ ಆಟಗಾರ್ತಿಯರಾದ ಲಿಜಿ ಲೀ ಮತ್ತು ಶಫಾಲಿ ವರ್ಮಾ ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್ಗೆ ಈ ಜೋಡಿ 89 ರನ್ ಗಳಿಸಿದರು. ಲಿಜಿ ಲೀ 24 ಎಸೆತಗಳಲ್ಲಿ 43 ರನ್ ಗಳಿಸಿದರು. ಶಫಾಲಿ ವರ್ಮ 21 ಎಸೆತಗಳಲ್ಲಿ 31 ರನ್ ಗಳಿಸಿದರು.
ನಂತರ ಜೊತೆಯಾದ ನಾಯಕಿ ಜೆಮಿಮಾ ರೋಡ್ರಿಗಸ್ ಮತ್ತು ಲಾರಾ ವೂಲ್ಡ್ವರ್ತ್ ಗೆಲುವಿನ ಜೊತೆಯಾಟ ಸಂಘಟಿಸಿದರು. ಜೆಮಿಮಾ 23 ಎಸೆತಗಳಲ್ಲಿ 41 ರನ್ ಗಳಿಸಿದರು. ಲಾರಾ 24 ಎಸೆತಗಳಲ್ಲಿ 32 ರನ್ ಗಳಸಿದರು.
ಕೇವಲ 15.4 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು ಡೆಲ್ಲಿ ಗೆಲುವಿನ ನಗೆ ಬೀರಿತು. ಗುಜರಾತ್ ಪರ ಜಾರ್ಜಿಯಾ ವೇರ್ಹಮ್ 2 ವಿಕೆಟ್ ಮತ್ತು ರಾಜೇಶ್ವರಿ ಗಾಯಕ್ವಾಡ್ ಒಂದು ವಿಕೆಟ್ ಪಡೆದರು.
ಇದೇ ಗುರುವಾರ ಡೆಲ್ಲಿ ತಂಡ ಆರ್ಸಿಬಿ ತಂಡದ ವಿರುದ್ಧ ವಡೋದರದಲ್ಲಿ ಫೈನಲ್ ಪಂದ್ಯ ಆಡಲಿದೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

