ವಿಬಿ ಜಿ ರಾಮ್‌ಜಿ ಕಾಯ್ದೆ: ಸಿಎಂ ಹೇಳಿಕೆಗೆ ಸದನದಲ್ಲಿ ಭಾರಿ ಗದ್ದಲ

ಬೆಂಗಳೂರು: ವಿಧಾನಸಭೆಯಲ್ಲಿ ಇಂದು ವಿಬಿ ಜಿ ರಾಮ್‌ಜಿ ಕಾಯ್ದೆ ವಿಚಾರದ ಬಗ್ಗೆ ಆಡಳಿತ ಹಾಗೂ ವಿರೋಧ ಪಕ್ಷಗಳ ಮಧ್ಯೆ ಕಿಚ್ಚು ಹಚ್ಚಿತ್ತು. ಸಿಎಂ ಸಿದ್ದರಾಮಯ್ಯ ಅವರು ವಿಬಿ-ಜಿರಾಮ್‌ಜಿ ಕಾಯ್ದೆ ವಿರೋಧಿಸಿ ನಿರ್ಣಯ ಮಂಡನೆ ವೇಳೆ ವಿಪಕ್ಷ ಸದಸ್ಯರು ತೀವ್ರವಾಗಿ ಖಂಡಿಸಿದ್ದರಿಂದ ಸದನದಲ್ಲಿ ತೀವ್ರ ಗದ್ದಲ, ವಾಕ್ಸಮರಕ್ಕೆ ದಾರಿ ಮಾಡಿಕೊಟ್ಟಿದೆ.

ವಿಧಾನಸೌಧದಲ್ಲಿ ಇಂದು ಸರ್ಕಾರದ ನಿರ್ಣಯ ಓದಿದ ಸಿಎಂ, ಈ ಸದನ ವಿಬಿ-ಜಿರಾಮ್‌ಜಿ ಕಾಯ್ದೆಯನ್ನು ತೀವ್ರವಾಗಿ ವಿರೋಧಿಸುತ್ತದೆ. ವಿಬಿ ಜಿ ರಾಮ್ ಜಿ ಕಾಯ್ದೆ ರದ್ದು ಮಾಡಬೇಕು. ಮನರೇಗಾ ಕಾಯ್ದೆ ಮೂಲ ಸ್ವರೂಪದಲ್ಲಿ ಮರು ಜಾರಿ ಮಾಡಬೇಕು. ವಿಬಿ ಜಿ ರಾಮ್ ಜಿ ಕಾಯ್ದೆ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ.

Advertisement

ಇದನ್ನೂ ಓದಿ: Shocking: ಮಗಳ ಸಾವಿನ ಬೆನ್ನಲ್ಲೇ ಮತ್ತೊಂದು ಜೀವ ಬಲಿ

ಮನರೇಗಾ ಸಂವಿಧಾನದ ಹಕ್ಕುಗಳನ್ನು ನೀಡುವ ಯೋಜನೆ. ಕೆಲಸದ ಹಕ್ಕು ಯೋಜನೆ ನೀಡುತ್ತಿದ್ದ ಯೋಜನೆ ಮನರೇಗಾ. ನರೇಗಾ ವಾಪಸ್ ಜಾರಿ, ವಿಬಿ ಜಿ ರಾಮ್ ಜಿ ರದ್ದಿಗೆ ಈ ನಿರ್ಣಯ ಮೂಲಕ ಈ ಸದನ ಕೇಂದ್ರಕ್ಕೆ ಆಗ್ರಹಿಸುತ್ತದೆ. ಈ ನಿರ್ಣಯವನ್ನು ಈ ಸದನ ನಿರ್ಣಯ ಅಂಗೀಕರಿಸುತ್ತದೆ ಎಂದು ಗದ್ದಲದ ಮಧ್ಯೆಯೇ ಸಿಎಂ ನಿರ್ಣಯ ಓದಿದರು.

Advertisement

ಇದೇ ವೇಳೆ ಈ ಸದನ ಅಲ್ಲ, ನಿಮ್ಮ ಸರ್ಕಾರ ವಿರೋಧಿಸುತ್ತದೆ ಎಂದು ಹೇಳಿ ಎಂದು ಅಶೋಕ್ ಒತ್ತಾಯಿಸಿದರು. ಆಗ ಈ ಸದನ ಈ ಸದನವೆಂದು ಒತ್ತಿ ಹೇಳಿ ವಿಪಕ್ಷಗಳಿಗೆ ಸಿಎಂ ಗುದ್ದು ನೀಡಿದರು. ಇದಕ್ಕೆ ಸರ್ಕಾರ ಸರ್ಕಾರ ಈ ಸದನ ಅಲ್ಲವೆಂದು ವಿಪಕ್ಷ ಸದಸ್ಯರು ಟಾಂಗ್ ನೀಡಿದರು.

ವಿಪಕ್ಷಗಳಿಂದ ಸರ್ಕಾರದ ವಿರುದ್ಧ ಧಿಕ್ಕಾರ ಘೋಷಣೆ ಮುಂದುವರೆಯಿತು. ಆರ್.ಬಿ. ತಿಮ್ಮಾಪೂರ ರಾಜೀನಾಮೆ ನೀಡಬೇಕೆಂದು ಪಟ್ಟು ಹಿಡಿದು ಸಿಎಂ ನಿರ್ಣಯ ಮಂಡನೆಗೆ ವಿಪಕ್ಷಗಳ ಸದಸ್ಯರು ಎದ್ದು ನಿಂತು ಅಡ್ಡಿ ಪಡಿಸಿದರು. ಈ ವೇಳೆ ವಿಪಕ್ಷಗಳ ಮೇಲೆ ಸಿಎಂ ಗರಂ ಆದರು. ಅಧ್ಯಕ್ಷರೇ ಅವರನ್ನು ಕೂರಿಸಿ, ಯಾರು ನಿಮ್ಮ ಮಾತು ಕೇಳೋದಿಲ್ಲವೋ ಅವರನ್ನು ಹೊರಗೆ ಹಾಕಿ ಎಂದು ಸಿಎಂ ವಾಗ್ದಾಳಿ ನಡೆಸಿದರು.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು