ಮಂಗಳೂರು: ಕರಾವಳಿಯ ಪ್ರಮುಖ ರೈಲು ನಿಲ್ದಾಣವಾದ ಮಂಗಳೂರು ಸೆಂಟ್ರಲ್ನಲ್ಲಿ ಪ್ರಯಾಣಿಕರ ಸೌಲಭ್ಯಗಳನ್ನು ಸುಧಾರಿಸುವ ನಿಟ್ಟಿನಲ್ಲಿ “ಸ್ವಯಂಚಾಲಿತ ಡಿಜಿಟಲ್ ಲಗೇಜ್ ಲಾಕರ್” ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ದಕ್ಷಿಣ ರೈಲ್ವೆಯ ಅಧಿಕಾರಿಗಳ ಸಮ್ಮುಖದಲ್ಲಿ ಈ ನೂತನ ಸೇವೆಯನ್ನು ಉದ್ಘಾಟಿಸಲಾಯಿತು. ಇದು ಸಂಪೂರ್ಣವಾಗಿ ಮಾನವರಹಿತ ಮತ್ತು ಸ್ವಯಂಚಾಲಿತವಾಗಿದ್ದು, ಪ್ರಯಾಣಿಕರು ಸುಲಭವಾಗಿ ತಾವೇ ನಿರ್ವಹಿಸಬಹುದು.
ಪ್ರಯಾಣಿಕರ ಬ್ಯಾಗ್ಗಳ ಗಾತ್ರಕ್ಕೆ ಅನುಗುಣವಾಗಿ ಮಧ್ಯಮ (Medium), ದೊಡ್ಡದು (Large) ಮತ್ತು ಅತಿ ದೊಡ್ಡ (Extra-Large) ಗಾತ್ರದ ಲಾಕರ್ಗಳು ಲಭ್ಯವಿವೆ. ಮೊಬೈಲ್ ಸಂಖ್ಯೆಗೆ ಬರುವ ಒನ್ ಟೈಮ್ ಪಾಸ್ವರ್ಡ್ (OTP) ಮತ್ತು QR ಕೋಡ್ ಮೂಲಕ ಲಾಕರ್ ಅನ್ನು ಸುರಕ್ಷಿತವಾಗಿ ಬಳಸಬಹುದು.

ಇದನ್ನೂ ಓದಿ: ಸುಳ್ಯ: ನಿಯಮ ಉಲ್ಲಂಘಿಸಿದ ಯುವಕನಿಗೆ ಟ್ರಾಫಿಕ್ ರೂಲ್ಸ್ ಜಾಗೃತಿ ಮೂಡಿಸುವ ಶಿಕ್ಷೆ ವಿಧಿಸಿದ ಕೋರ್ಟ್
ಲಾಕರ್ ಪ್ರದೇಶವು 24/7 ಸಿಸಿಟಿವಿ ಕಣ್ಗಾವಲಿನಲ್ಲಿದ್ದು, ವಸ್ತುಗಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಈ ಸೇವೆಯು ಪಾರದರ್ಶಕವಾಗಿದ್ದು, ಯುಪಿಐ (UPI) ಅಥವಾ ಕಾರ್ಡ್ ಮೂಲಕ ಕೇವಲ ಡಿಜಿಟಲ್ ಪಾವತಿಯನ್ನು ಮಾತ್ರ ಸ್ವೀಕರಿಸುತ್ತದೆ. ಈ ಸೌಲಭ್ಯವು ಅತ್ಯಂತ ಕೈಗೆಟುಕುವ ದರದಲ್ಲಿ ಲಭ್ಯವಿದ್ದು, ಕನಿಷ್ಠ ₹40 ರಿಂದ (6 ಗಂಟೆಗಳ ಅವಧಿಗೆ) ಪ್ರಾರಂಭವಾಗುತ್ತದೆ. ಈ ಸೌಲಭ್ಯವು ಪ್ರವಾಸಿಗರಿಗೆ, ಯಾತ್ರಾರ್ಥಿಗಳಿಗೆ ಮತ್ತು ಅಲ್ಪಾವಧಿಗೆ ನಗರಕ್ಕೆ ಭೇಟಿ ನೀಡುವವರಿಗೆ ಹೋಟೆಲ್ ರೂಮ್ ಬುಕ್ ಮಾಡದೆ ತಮ್ಮ ಲಗೇಜ್ಗಳನ್ನು ಸುರಕ್ಷಿತವಾಗಿಟ್ಟು ನಗರ ಸುತ್ತಲು ಅನುವು ಮಾಡಿಕೊಡುತ್ತದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

