ಭೂಮಿಯಿಂದ ದೂರ ಸರಿಯುತ್ತಿದ್ದಾನೆ ಚಂದ್ರ: ಇನ್ನು ಮುಂದೆ ದಿನಕ್ಕೆ 24 ಅಲ್ಲ, 25 ಗಂಟೆ!

ಭೂಮಿ ಮತ್ತು ಚಂದ್ರನ ನಡುವಿನ ಸಂಬಂಧದಲ್ಲಿ ಶತಕೋಟಿ ವರ್ಷಗಳಿಂದ ಬದಲಾವಣೆಗಳು ನಡೆಯುತ್ತಿವೆ. ಇತ್ತೀಚಿನ ಸಂಶೋಧನೆಯೊಂದರ ಪ್ರಕಾರ, ಚಂದ್ರನು ಪ್ರತಿವರ್ಷ ಭೂಮಿಯಿಂದ ಸರಿಸುಮಾರು 3.8 ಸೆಂಟಿಮೀಟರ್‌ಗಳಷ್ಟು ದೂರ ಸರಿಯುತ್ತಿದ್ದಾನೆ. ಈ ವಿದ್ಯಮಾನವು ಭೂಮಿಯ ವೇಗವನ್ನು ಕಡಿಮೆ ಮಾಡಲಿದ್ದು, ಭವಿಷ್ಯದಲ್ಲಿ ಒಂದು ದಿನದ ಅವಧಿ 25 ಗಂಟೆಯಾಗಲಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ವಿಸ್ಕಾನ್ಸಿನ್-ಮ್ಯಾಡಿಸನ್ ವಿಶ್ವವಿದ್ಯಾಲಯದ ವಿಜ್ಞಾನಿಗಳ ಪ್ರಕಾರ, ಚಂದ್ರನು ನಿಧಾನವಾಗಿ ಭೂಮಿಯಿಂದ ದೂರ ಹೋಗುತ್ತಿದ್ದಾನೆ. ಇದು ಭೂಮಿಯ ಭ್ರಮಣ ವೇಗ (Rotation speed) ಕಡಿಮೆಯಾಗಲು ಕಾರಣವಾಗುತ್ತದೆ.ಸುಮಾರು 1.4 ಶತಕೋಟಿ ವರ್ಷಗಳ ಹಿಂದೆ ಭೂಮಿಯ ಮೇಲೆ ಒಂದು ದಿನ ಕೇವಲ 18 ಗಂಟೆ ಇತ್ತು. ಕಾಲಾನಂತರದಲ್ಲಿ ಅದು ಈಗಿನ 24 ಗಂಟೆಗೆ ಬಂದಿದೆ. ಇದೇ ರೀತಿ ಮುಂದುವರಿದರೆ ಮುಂದಿನ 200 ಮಿಲಿಯನ್ ವರ್ಷಗಳಲ್ಲಿ ಒಂದು ದಿನದ ಅವಧಿ 25 ಗಂಟೆಯಾಗಲಿದೆ.

ಇದನ್ನೂನ ಓದಿ: ಗ್ರಹಣದ ಸಮಯದಲ್ಲಿ ಏನು ಮಾಡಬೇಕು? ಏನು ಮಾಡಬಾರದು?

ಚಂದ್ರನ ಗುರುತ್ವಾಕರ್ಷಣೆಯು ಭೂಮಿಯ ಮೇಲೆ ಉಬ್ಬರವಿಳಿತಗಳನ್ನು (Tides) ಸೃಷ್ಟಿಸುತ್ತದೆ. ಚಂದ್ರ ದೂರ ಹೋದಂತೆ ಈ ಬಲವು ಕಡಿಮೆಯಾಗಿ, ಭೂಮಿಯ ತಿರುಗುವಿಕೆಯ ವೇಗ ಬ್ರೇಕ್ ಹಾಕಿದಂತೆ ನಿಧಾನವಾಗುತ್ತದೆ.ಸದ್ಯಕ್ಕೆ ಇದು ನಮ್ಮ ಜೀವನದ ಮೇಲೆ ಯಾವುದೇ ವ್ಯತ್ಯಾಸ ಮಾಡದಿದ್ದರೂ, ದೀರ್ಘಾವಧಿಯಲ್ಲಿ ಹವಾಮಾನ, ಪರಿಸರ ವ್ಯವಸ್ಥೆ ಮತ್ತು ಜೀವಿಗಳ ಜೈವಿಕ ಗಡಿಯಾರದ (Circadian rhythm) ಮೇಲೆ ಪ್ರಭಾವ ಬೀರಲಿದೆ.

ಆಧ್ಯಾತ್ಮಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು