Breaking News

Education : ಮಕ್ಕಳ ಕಲಿಕೆಯನ್ನು ಸಂಭ್ರಮವಾಗಿ ರೂಪಿಸುವ ಶಿಕ್ಷಣೋತ್ಸವೇ ಕಲಿಕಾ ಹಬ್ಬ

ಶಿಕ್ಷಣ : ಈಗ ಪ್ರತೀ ಶಾಲೆಯಲ್ಲೂ ಕಲಿಕಾ ಹಬ್ಬ ನಡೆಯೋದನ್ನು ನೋಡಿರುತ್ತೇವೆ ಅಥವಾ ಕೇಳಿರುತ್ತೇವೆ. ಇಲ್ಲಿ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳ ಕಲಿಕೆ, ಪ್ರತಿಭೆ ಮತ್ತು ಸೃಜನಶೀಲತೆಯನ್ನು ಹಬ್ಬದ ರೂಪದಲ್ಲಿ ಆಚರಿಸುವ ವಿಶೇಷ ಕಾರ್ಯಕ್ರಮವಾಗಿದೆ. ಇದು ಸಾಮಾನ್ಯವಾಗಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಆಯೋಜಿಸಲಾಗುತ್ತದೆ. ಮಕ್ಕಳಿಗೆ ಕಲಿಕೆ ಒತ್ತಡದ ವಿಷಯವಲ್ಲ, ಸಂತೋಷದ ಅನುಭವವಾಗಬೇಕು ಎಂಬ ಉದ್ದೇಶದಿಂದ ಈ ಹಬ್ಬವನ್ನು ರೂಪಿಸಲಾಗಿದೆ.

ಪ್ರತೀ ಶಾಲೆಗಳಲ್ಲಿ‌ ಈ ಕಲಿಕಾ ಹಬ್ಬವನ್ನು ಮಾಡುವ ಮುಖ್ಯ ಉದ್ದೇಶವೇನೆಂದರೆ, ಮಕ್ಕಳಲ್ಲಿ ಕಲಿಕೆಯ ಮೇಲಿನ ಆಸಕ್ತಿ ಹೆಚ್ಚಿಸುವುದು, ಆತ್ಮವಿಶ್ವಾಸ ಬೆಳೆಸುವುದು, ಪಾಠಗಳನ್ನು ಪ್ರಾಯೋಗಿಕವಾಗಿ ಅರ್ಥಮಾಡಿಕೊಳ್ಳುವ ಅವಕಾಶ ನೀಡುವುದು, ಪೋಷಕರು ಮತ್ತು ಸಮುದಾಯವನ್ನು ಶಾಲೆಯೊಂದಿಗೆ ಸಂಪರ್ಕಿಸುವುದು, ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರುವುದಾಗಿದೆ.

Advertisement

ಈ ಕಲಿಕಾ ಹಬ್ಬದಲ್ಲಿ ಅನೇಕ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಮುಖ್ಯವಾಗಿ, ಈ ಹಬ್ಬದ ಸಂದರ್ಭದಲ್ಲಿ ಶಾಲಾ ಆವರಣದಲ್ಲಿ ಹಲವು ಶಿಕ್ಷಣಾತ್ಮಕ ಹಾಗೂ ಮನರಂಜನಾ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ. ಉದಾಹರಣೆಗೆ: ವಿಜ್ಞಾನ ಮತ್ತು ಗಣಿತ ಮಾದರಿ ಪ್ರದರ್ಶನ, ಭಾಷಾ ಆಟಗಳು, ಕಥೆ ಹೇಳುವ ಸ್ಪರ್ಧೆ,‌ ಚಿತ್ರಕಲೆ, ಕೈತೋಟ, ಕರಕುಶಲ ವಸ್ತು ಪ್ರದರ್ಶನ, ನಾಟಕ, ನೃತ್ಯ, ಹಾಡುಗಳಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು, ಪುಸ್ತಕ ಮೇಳ, ಓದು ಅಭಿಯಾನ, ಮಕ್ಕಳಿಂದಲೇ ಪಾಠ ವಿವರಣೆ ಇತ್ಯಾದಿಗಳು…

ಕಲಿಕಾ ಹಬ್ಬದಲ್ಲಿ ಶಿಕ್ಷಕರು ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುತ್ತಾರೆ. ಹಾಗಾಗಿ, ಇಲ್ಲಿ ಪೋಷಕರು ಮಕ್ಕಳ ಕಲಿಕೆಯ ಪ್ರಗತಿಯನ್ನು ನೇರವಾಗಿ ನೋಡಬಹುದು. ಇದರಿಂದ ಮನೆ ಮತ್ತು ಶಾಲೆಯ ನಡುವೆ ಉತ್ತಮ ಸಹಕಾರ ನಿರ್ಮಾಣವಾಗುತ್ತದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ಬಹಳ ಒತ್ತಡದ ವಿಷಯವಾಗಿದೆ. ಆದರೆ ಕಲಿಕಾ ಹಬ್ಬ ಮಕ್ಕಳಿಗೆ, ಕಲಿಕೆ ಕೇವಲ ಪರೀಕ್ಷೆಗೆ ಅಲ್ಲ, ಜೀವನಕ್ಕೆ ಎಂಬ ಸಂದೇಶವನ್ನು ನೀಡುತ್ತದೆ. ಇದು ಮಕ್ಕಳಲ್ಲಿ ಸೃಜನಶೀಲತೆ, ಹೊಂದಾಣಿಕೆ, ಸಂವಹನ ಕೌಶಲ್ಯ ಮತ್ತು ಸಮಸ್ಯೆ ಪರಿಹಾರ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ : Virus : ಹವಾಯಿಯ ಒಹು ದ್ವೀಪದಲ್ಲಿ ಜಿಕಾ ವೈರಸ್ ಪ್ರಕರಣ ಪತ್ತೆ

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು