WPL: ರಾಧಾ-ರಿಚಾ ಜೊತೆಯಾಟ, ಟಗರು ಪುಟ್ಟಿ ಕಮಾಲ್, RCBಗೆ ಹ್ಯಾಟ್ರಿಕ್ ಗೆಲುವು

ಮುಂಬೈ: ಆಲ್‌ರೌಂಡರ್ ರಾಧಾ ಯಾದವ್ ಅವರ ಸಮಯೋಚಿತ ಅರ್ಧ ಶತಕ ಮತ್ತ ಶ್ರೇಯಾಂಕಾ ಪಾಟೀಲ್ ಅವರ ಚುರುಕಿನ ದಾಳಿಯಿಂದ ಡಬ್ಲುಪಿಎಲ್ ನಲ್ಲಿ ಆರ್‌ಸಿಬಿ ತಂಡ ಹ್ಯಾಟ್ರಿಕ್ ಗೆಲುವು ಸಾಧಿಸಿದೆ.

ಮುಂಬೈನ ಡಾ.ಡಿ.ವೈ ಸ್ಪೋರ್ಟ್ಸ್ ಅಕಾಡೆಮಿ ಮೈದಾನದಲ್ಲಿ ನಡೆದ ಪಂದ್ಯಾಟದಲ್ಲಿ ಆರ್‌ಸಿಬಿ ತಂಡ ಗುಜರಾತ್ ತಂಡದ ವಿರುದ್ಧ 32 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು‌.

Advertisement

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಗುಜರಾತ್ ತಂಡಕ್ಕೆ ಬೌಲರ್‌ಗಳು ಉತ್ತಮ ಆರಂಭವನ್ನೇ ಒದಗಿಸಿದರು. ಎರಡನೇ ಓವರಿನಲ್ಲಿ ಉತ್ತಮವಾಗಿ ಆಡುತ್ತಿದ್ದ ಗ್ರೇಸ್ ಹ್ಯಾರಿಸ್ ವಿಕೆಟ್ ಪಡೆಯುವಲ್ಲಿ ಕಶ್ವೀ ಗೌತಮ್ ಸಫಲರಾದರು‌. ನಂತರ ಸ್ಮೃತಿ ಮಂದಾನ, ದಯಾನ ಹೇಮಲತಾ, ಗೌತಮಿ ನಾಯಕ್ ಹೆಚ್ಚು ಹೊತ್ತು ನಿಲ್ಲದೆ ಫೆವಿಲಿಯನ್ ಹಾದಿ ಹಿಡಿದರು‌.

ಇದನ್ನೂ ಓದಿ: Virus : ಹವಾಯಿಯ ಒಹು ದ್ವೀಪದಲ್ಲಿ ಜಿಕಾ ವೈರಸ್ ಪ್ರಕರಣ ಪತ್ತೆ

Advertisement

ಶತಕದ ಜೊತೆಯಾಟ ನೀಡಿದ ರಾಧಾ-ರಿಚಾ

ಒಂದೆಡೆ ವಿಕೆಟ್ ಉರುಳುತ್ತಿದ್ದರೆ ಮತ್ತೊಂದೆಡೆ ಬ್ಯಾಟಿಂಗ್ ಮುಂಬಡ್ತಿ ಪಡೆದು ಬಂದಿದ್ದ ರಾಧಾ ಯಾದವ್ ನಿರಾಯಾಸವಾಗಿ ಬ್ಯಾಟ್ ಬೀಸಲು ಆರಂಭಿಸಿದರು. ಅವರಿಗೆ ಡ್ಯಾಷಿಂಗ್ ಬ್ಯಾಟರ್ ರಿಚಾ ಘೋಷ್ ಸಾಥ್ ನೀಡಿದರು. ಈ ಜೋಡಿ 5ನೇ ವಿಕೆಟ್‌ಗೆ 66 ಎಸೆತಗಳಲ್ಲಿ 105 ಗಳ ಜೊತೆಯಾಟ ನೀಡಿದರು. ರಾಧಾ ಯಾದವ್ 47 ಎಸೆತಗಳಲ್ಲಿ 6 ಬೌಂಡರಿ 3 ಸಿಕ್ಸರ್‌ನೊಂದಿಗೆ 66 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ರಿಚಾ 28 ಎಸೆತಗಳಲ್ಲಿ 44 ರನ್ ಗಳಿಸಿ ಔಟಾದರು. ನಂತರ ಬಂದ ನದಿನಿ ಡಿ ಕ್ಲರ್ಕ್ ಬಿರುಸಿನ ಹೊಡೆತಕ್ಕೆ ಕೈ ಹಾಕಿ 12 ಎಸೆತಗಳಲ್ಲಿ 26 ರನ್‌ಗಳ ಅಮೂಲ್ಯ ಕಾಣಿಕೆ ನೀಡಿದರು. ನಿಗದಿತ 20 ಓವರ್‌ಗಳಲ್ಲಿ ಆರ್‌ಸಿಬಿ ತಂಡ 7 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿತು.

ಗುರಿ ಬೆನ್ನತ್ತಿದ ಗುಜರಾತ್ ತಂಡಕ್ಕೆ ಆರ್‌ಸಿಬಿ ಬೌಲರ್‌ಗಳು ಬಿಗು ದಾಳಿ ನಡೆಸಿ ಹಂತ ಹಂತವಾಗಿ ವಿಕೆಟ್ ಉರುಳಿಸುತ್ತಾ ಪಂದ್ಯವನ್ನು ತಮ್ಮದಾಗಿಸಿಕೊಂಡರು. ಒಂದೆಡೆ ಭಾರತಿ ಫುಲ್ಮಾಲಿ ಮತ್ತು ಕಶ್ವೀ ಗೌತಮ್ ಉತ್ತಮ ಜೊತೆಯಾಟ ನೀಡಿದರೂ ಗೆಲುವು ಆರ್‌ಸಿಬ ಪಾಲಾಯಿತು‌.

ಟಗರು ಪುಟ್ಟಿಗೆ ಫೈಫರ್

ಟಗರು ಪುಟ್ಟಿ ಖ್ಯಾತಿಯ ಶ್ರೇಯಾಂಕಾ ಪಾಟೀಲ್ ಬೌಲಿಂಗ್‌ನಲ್ಲಿ ಮಿಂಚಿದರು. 3.5 ಓವರ್‌ಗಳಲ್ಲಿ 23 ರನ್ ನೀಡಿ 5 ವಿಕೆಟ್ ಕಬಳಿಸಿದರು‌.

ಸಂಕ್ಷಿಪ್ತ ಸ್ಕೋರ್: ಆರ್‌ಸಿಬಿ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 182 ರನ್: ರಾಧಾ ಯಾದವ್ 66 (44 ಬಾಲ್ಸ್, 4*6, 6*3), ರಿಚಾ ಘೋಷ್ 44 (28 ಬಾಲ್ಸ್ 4*4, 6*2) ಸೋಫಿ ಡಿವೈನ್ 3 ವಿಕೆಟ್.

ಗುಜರಾತ್ 18.5 ಓವರ್‌ಗಳಲ್ಲಿ ಆಲ್ಔಟ್: ಭಾರತಿ ಫುಲ್ಮಾಲಿ 39 (20 ಬಾಲ್ಸ್, 4*3, 6*3) ಬೇಥ್ ಮೂನಿ 27 (14 ಬಾಲ್ಸ್ 4*4, 6*1) ಶ್ರೇಯಾಂಕ ಪಾಟಿಲ್ 5 ವಿಕೆಟ್, ಲಾರೆನ್ ಬೆಲ್ 3 ವಿಕೆಟ್.

ಈ ಗೆಲುವಿನೊಂದಿಗೆ ಆರ್‌ಸಿಬಿ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಇದೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು