ತ್ರಿಶೂರ್: ದೇವಾಲಯದ ಉತ್ಸವದ ಸಂದರ್ಭ ಆನೆಯೊಂದು ಅಲ್ಲಿದ್ದ ಯುವಕನನ್ನು ಎತ್ತಿ ಬಿಸಾಡಿದ ಘಟನೆ ಕೇರಳದ ತ್ರಿಶೂರಿನಲ್ಲಿ ನಡೆದಿದೆ.
ತ್ರಿಶೂರ್‌ನ ಅನ್ನಮನದ ಮಹದೇವ ಎಂಬ ದೇಗುಲದ ಜಾತ್ರೆಯ ಉತ್ಸವದಲ್ಲಿ ಆನೆಯೊಂದು 26 ವರ್ಷದ ಯುವಕನನ್ನು ಎತ್ತಿ ಎಸೆದಿದ್ದು ಆತ ಗಂಭೀರವಾಗಿ ಗಾಯಗೊಂಡಿದ್ದಾನೆ.

ಇದನ್ನೂ ಓದಿ: T20 Worldcup: ಜಿಂಬಾಬ್ವೆ ವಿರುದ್ಧ ಬ್ಯಾಟರ್‌ಗಳ ಅಬ್ಬರ, ಭಾರತದ ಸೆಮಿಫೈನ್ಸ್ ಆಸೆ ಜೀವಂತ
ದೇಗುಲದ ವಲಿಯವಿಳಕ್ಕು ಹಬ್ಬದ ಸಂದರ್ಭದಲ್ಲಿ ಬೆಳಿಗ್ಗೆ 9 ಗಂಟೆ ಸುಮಾರಿಗೆ ಶೀವೇಲಿ ಮೆರವಣಿಗೆಗೆ ಸಿದ್ಧತೆಗಳು ನಡೆಯುತ್ತಿದ್ದಾಗ ಈ. ಘಟನೆ ನಡೆದಿದೆ. ಆನೆ ದಾಳಿಗೊಳಗಾದ ಯುವಕನನ್ನು ಮಾಂಬ್ರಾದ ಎರಯಂಕುಡಿ ಮೂಲದ ಮತ್ತು ತುರನೆಲ್ಲೂರ್ ಮಾನಾ ನಿವಾಸಿ ವಿವೇಕ್ ಎಂದು ಗುರುತಿಸಲಾಗಿದೆ.
ಆಭರಣಗಳನ್ನು ಹಸ್ತಾಂತರಿಸುವಾಗ ಅಕ್ಕಿಕಾವು ಕಾರ್ತಿಕೇಯನ್ ಎಂಬ ಆನೆ ಉದ್ರೇಕಗೊಂಡು ಇದ್ದಕ್ಕಿದ್ದಂತೆ ತನ್ನ ಸೊಂಡಿಲಿನಿಂದ ಯುವಕ ವಿವೇಕ್‌ನನ್ನು ಎತ್ತಿ ಎಸೆದಿದೆ. ಘಟನೆಯಲ್ಲಿ ವಿವೇಕ್ ಅವರಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣ ಅವರನ್ನು ಅಂಗಮಾಲಿಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಯಿತು.
ಅವರ ಸ್ಥಿತಿ ಗಂಭೀರವಾಗಿದೆ. ಪೆರುವನಂ ಕುಟ್ಟನ್ ಮಾರಾರ್ ನೇತೃತ್ವದ ಪಂಚರಿ ಮೇಳ ಆರಂಭವಾಗುವ ಮುನ್ನ ಈ ಘಟನೆ ನಡೆದಿದೆ. ಘಟನೆಯ ನಂತರ, ದೇವಾಲಯದಲ್ಲಿ ಉತ್ಸವದ ಆಚರಣೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಈ ಅನೆಯನ್ನು ದೇವಾಲಯದ ಆವರಣದಲ್ಲಿಯೇ ನಿಯಂತ್ರಿಸಲಾಗಿದ್ದು, ಮಾಹಿತಿ ಪಡೆದ ಮಾಲಾ ಪೊಲೀಸರು ಸ್ಥಳಕ್ಕೆ ತಲುಪಿ ಭದ್ರತಾ ಕ್ರಮಗಳನ್ನು ಕೈಗೊಂಡರು. ಆನೆ ದಳವೂ ಆಗಮಿಸಿ, ಆನೆಯನ್ನು ದೇವಾಲಯದ ಆವರಣದಿಂದ ಸುರಕ್ಷಿತವಾಗಿ ಸ್ಥಳಾಂತರಿಸಿದರು.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

