T20 Worldcup: ಜಿಂಬಾಬ್ವೆ ವಿರುದ್ಧ ಬ್ಯಾಟರ್‌ಗಳ ಅಬ್ಬರ, ಭಾರತದ ಸೆಮಿಫೈನ್ಸ್ ಆಸೆ ಜೀವಂತ

ಚೆನ್ನೈ: ಟಿ-20 ವಿಶ್ವಕಪ್‌ನ ಸೂಪರ್‌-8 ಪಂದ್ಯದಲ್ಲಿ ಬ್ಯಾಟರ್ ‌ಗಳ ಅಬ್ಬರದಿಂದ ಭಾರತ ಬೃಹತ್ ಮೊತ್ತ ಪೇರಿಸಿ ಜಿಂಬಾಬ್ವೆ ವಿರುದ್ಧ 72 ರನ್‌ಗಳ ಅಂತರದಿಂದ ಜಯ ಗಳಿಸಿದೆ. ಇದರೊಂದಿಗೆ ಸೆಮಿಫೈನಲ್ಸ್ ಆಸೆ ಜೀವಂತವಾಗಿಸಿಕೊಂಡಿದೆ.

ಇಲ್ಲಿನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಜಿಂಬಾಬ್ವೆ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಭಾರತ 4 ವಿಕೆಟ್ ನಷ್ಟಕ್ಕೆ 256 ರನ್ ಗಳಿಸಿತು.

Advertisement

ಇದನ್ನೂ ಓದಿ: T20 Worldcup: ವೆಸ್ಟ್ ಇಂಡೀಸ್ ಮಣಿಸಿದ ದಕ್ಷಿಣ ಆಫ್ರಿಕಾ, ಭಾರತಕ್ಕೆ ಮತ್ತೊಂದು ಅವಕಾಶ

ಲಯಕ್ಕೆ ಮರಳಿದ ಅಭಿಷೇಕ್ ಶರ್ಮ:
ಭಾರತದ ಬ್ಯಾಟಿಂಗ್ ಸೆನ್ಸೇಷನ್ ಅಭಿಷೇಕ್ ಶರ್ಮ ಮೊದಲ ಮೂರು ಪಂದ್ಯದಲ್ಲಿ ಸೊನ್ನೆ ಸುತ್ತಿ ದಕ್ಷಿಣ ಆಫ್ರಿಕಾ ವಿರುದ್ಧ ಕೇವಲ 15 ರನ್ ಗಳಿಸಿದರು. ಆದರೆ ಇಂದು ಲಯಕ್ಕೆ ಮರಳಿದ ಅಭಿಷೇಕ್ ಶರ್ಮ ಭರ್ಜರಿ 4 ಬೌಂಡರಿ, 4 ಸಿಕ್ಸರ್‌ಗಳೊಂದಿಗೆ 30 ಎಸೆತಗಳಲ್ಲಿ 55 ರನ್ ಗಳಿಸಿದರು.

Advertisement

ಹಾರ್ದಿಕ್ ಪಾಂಡ್ಯ 23 ಎಸೆತಗಳಲ್ಲಿ 50, ತಿಲಕ್ ವರ್ಮ 16 ಎಸೆತಗಳಲ್ಲಿ 44, ಇಶಾನ್ ಕಿಶನ್ 38, ಸೂರ್ಯಕುಮಾರ್ ಯಾದವ್ 33, ಸಂಜು ಸ್ಯಾಮ್‌ಸನ್ 24 ರನ್ ಗಳಿಸಿದರು. ಜಿಂಬಾಬ್ವೆ ಪರ ರಿಚರ್ಡ್ ಎಂಗವರ, ಬ್ಲೆಸ್ಸಿಂಗ್ ಮುಜರಬಾನಿ, ಟಿನೋಟೆಂಡ ಮಪೋಸ ಮತ್ತು ಸಿಕಂದರ್ ರಾಜಾ ತಲಾ ಒಂದು ವಿಕೆಟ್ ಪಡೆದರು.

ಗುರಿ ಬೆನ್ನತ್ತಿದ ಜಿಂಬಾಬ್ವೆ ಉತ್ತಮ ಆರಂಭ ಪಡೆಯಿತು. ಪವರ್‌ಪ್ಲೇಯಲ್ಲಿ ವಿಕೆಟ್ ನಷ್ಟವಿಲ್ಲದೆ 44 ರನ್ ಗಳಿಸಿತು. ನಂತರ ಅಕ್ಷರ್ ಪಟೇಲ್ ಮರುಮಾನಿ ವಿಕೆಟ್ ಪಡೆದು ಭಾರತಕ್ಕೆ ಮೇಲುಗೈ ತಂದುಕೊಟ್ಟರು. ಆರಂಭಿಕ ಆಟಗಾರ ಬ್ರಯಾನ್ ಬೆನ್ನೆಟ್ ಅಜೇಯ 97 ರನ್ ಗಳಿಸಿ ಏಕಾಂಗಿ ಹೋರಾಟ ಪ್ರದರ್ಶಿಸಿದರು.

ಉಳಿದಂತೆ ಸಿಕಂದರ್ ರಾಜಾ 31, ತಡಿವನಶೆ ಮರುಮಾನಿ 20, ಟೋನಿ ಮುಯೋಂಗ 11 ರನ್ ಗಳಿಸಿದರು. ಭಾರತ ಪರ ಅರ್ಶದೀಪ್ ಸಿಂಗ್ 3, ವರುಣ್ ಚಕ್ರವರ್ತಿ, ಅಕ್ಷರ್ ಪಟೇಲ್ ಮತ್ತು ಶಿವಂ ದುಬೆ ತಲಾ ಒಂದು ವಿಕೆಟ್ ಪಡೆದರು.

ಅಂತಿಮವಾಗಿ ಜಿಂಬಾಬ್ವೆ 184 ರನ್ ಗಳಿಸಿ 72 ರನ್‌ಗಳ ಅಂತರದಿಂದ ಸೋಲು ಕಂಡಿತು‌. ಇದರೊಂದಿಗೆ ಭಾರತದ ಸೆಮಿಫೈನಲ್ಸ್ ಆಸೆ ಜೀವಂತವಾಗಿದೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ‌ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು