ಟಿ-20 ವಿಶ್ವಕಪ್ ಟೂರ್ನಿಯ ಸೂಪರ್-8 ಹಂತದ ಪಂದ್ಯಗಳು ಈಗಾಗಲೇ ಆರಂಭವಾಗಿದೆ. ಇದರಲ್ಲಿ ಇಂಗ್ಲೆಂಡ್ ಮತ್ತು ಪಾಕಿಸ್ತಾನ ಪಂದ್ಯದ ನಂತರ ಇಂಗ್ಲೆಂಡ್ ವೇಗಿ ಜೋಫ್ರ ಆರ್ಚರ್ ಅವರ ಕುತ್ತಿಗೆಯಲ್ಲಿ ಚಿನ್ನದ ಸರ ಕಾಣಿಸದೇ ಇರುವುದು ಬಹಳಷ್ಟು ಚರ್ಚೆಗೆ ಗ್ರಾಸವಾಗಿದ್ದು, ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪಾಕಿಸ್ತಾನದ ಆಟಗಾರರು ಮತ್ತು ಅಭಿಮಾನಿಗಳ ಕಾಲೆಳೆಯುತ್ತಿದ್ದಾರೆ.
ಪ್ರತಿ ಪಂದ್ಯದಲ್ಲೂ ಚಿನ್ನದ ಸರದೊಂದಿಗೆ ಮೈದಾನಕ್ಕೆ ಇಳಿಯುತ್ತಿದ್ದ ಇಂಗ್ಲೆಂಡ್ ತಂಡದ ಸ್ಟಾರ್ ಬೌಲರ್ ಜೋಫ್ರಾ ಆರ್ಚರ್, ಈ ಪಂದ್ಯದಲ್ಲಿ ಮಾತ್ರ ಚಿನ್ನದ ಸರವಿಲ್ಲದೇ ಕಾಣಿಸಿಕೊಂಡರು. ಹೀಗಾಗಿ, ಅವರ ಚಿನ್ನ ಕಾಣಿಸದೇ ಇರುವುದನ್ನು ಪಾಕಿಸ್ತಾನದ ಆಟಗಾರರಿಗೆ ಲಿಂಕ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಲಾಗುತ್ತಿದೆ.

ಇದನ್ನೂ ಓದಿ: ಅಖಿಲಾ ಪಜಿಮಣ್ಣು ವಿಚ್ಛೇದನದ ಹಿಂದಿನ ಅಸಲಿ ಸತ್ಯ ಏನು? ಮೌನ ಮುರಿದ ‘ಕನ್ನಡ ಕೋಗಿಲೆ’
ಅದರಲ್ಲೂ ಇಂಗ್ಲೆಂಡ್ ತಂಡದ ಅಭಿಮಾನಿಗಳು ಪಾಕ್ ಆಟಗಾರರನ್ನು ಟ್ರೋಲ್ ಮಾಡಲು ಪ್ರಾರಂಭಿಸಿದ್ದಾರೆ. ಪಾಕಿಸ್ತಾನಿ ಆಟಗಾರರೇ ಕಳ್ಳತನ ಮಾಡಿರಬೇಕೆಂದು ಪರೋಕ್ಷವಾಗಿ ಹೀಯಾಳಿಸುತ್ತಿದ್ದಾರೆ. ಇಂಗ್ಲೆಂಡ್ ತಂಡದ ಅಭಿಮಾನಿಗಳ ಜತೆ ಟೀಮ್ ಇಂಡಿಯಾ ಅಭಿಮಾನಿಗಳು ಪಾಕ್ ಆಟಗಾರರನ್ನು ಗೇಲಿ ಮಾಡುತ್ತಿದ್ದಾರೆ. ಪಾಕಿಸ್ತಾನದ ಆರ್ಥಿಕ ಸ್ಥಿತಿಗತಿಗಳನ್ನು ಮುಂದಿಟ್ಟುಕೊಂಡು ಈ ಟ್ರೋಲ್ ಮಾಡಲಾಗುತ್ತಿದೆ.
ಪಾಕಿಸ್ತಾನ ವಿರುದ್ಧದ ಪಂದ್ಯದ ಸಮಯದಲ್ಲಿ ಜೋಫ್ರಾ ಆರ್ಚರ್ ಚಿನ್ನದ ಸರವಿಲ್ಲದೇ ಬೌಲಿಂಗ್ ಮಾಡಿದರು. ಹೀಗಾಗಿ, ಎಲ್ಲಾ ಅಭಿಮಾನಿಗಳು ಚಿನ್ನದ ಸರದ ಬಗ್ಗೆ ಚರ್ಚಿಸುತ್ತಿದ್ದಾರೆ.
ಜೋಫ್ರಾ ಆರ್ಚರ್ ಅವರ ಚಿನ್ನದ ಸರ ಎಲ್ಲಿಗೆ ಹೋಯಿತು? ಯಾರಾದರೂ ಅದನ್ನು ಕದ್ದಿದ್ದಾರೆಯೇ? ಎಂದು ಇಂಗ್ಲೆಂಡ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಮಾಡುತ್ತಿದ್ದಾರೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

