Kenya: ಭಗವದ್ಗೀತೆ ಹಿಡಿದು ಪ್ರಮಾಣವಚನ ಸ್ವೀಕರಿಸಿದ ಕೀನ್ಯಾ ದೇಶದ ಶಾಸಕ

ಕೀನ್ಯ: ಭಾರತದ ಸನಾತನ ಸಂಸ್ಕೃತಿಗೆ ವಿದೇಶಿಗರು ಮಾರುಹೋಗುತ್ತಿರುವುದು ಇದೇ ಮೊದಲಲ್ಲ. ಹಲವಾರು ಜನರು ಭಾರತದ ಉಡುಗೆ ತೊಡುಗೆ, ಆಚಾರ ವಿಚಾರ, ಸನಾತನ ಆಚರಣೆಗಳನ್ನ ಪಾಲಿಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಕೀನ್ಯದಲ್ಲಿ ನೂತನ ಶಾಸಕರೊಬ್ಬರು ಪ್ರಮಾಣವಚನ ವೇಳೆ ಭಗವದ್ಗೀತೆ ಹಿಡಿದು ಅಚ್ಚರಿ ಮೂಡಿಸಿದ್ದಾರೆ.

ಕೀನ್ಯಾದ ಮೊಂಬಾಸಾ ಕೌಂಟಿಯಲ್ಲಿ ನಡೆದ ಪ್ರಮಾಣವಚನ ಸಮಾರಂಭದಲ್ಲಿ ಯುವ ನಾಯಕ ಕ್ಯಾಲೆಬ್ ಬಲಗೈಯಲ್ಲಿ ಭಗವದ್ಗೀತೆ ಹಿಡಿದು ಶಪಥ ಸ್ವೀಕರಿಸಿದ ಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Advertisement

ಇದನ್ನೂ ಓದಿ: Cricket: ಆರ್ಚರ್ ಕುತ್ತಿಗೆಯಲ್ಲಿ ಕಾಣಿಸದ ಚಿನ್ನದ ಸರ: ಎಲ್ಲರ ಕಣ್ಣು ಪಾಕ್ ಆಟಗಾರರ ಮೇಲೆ!

ಚಂಗವ್ವ ಕ್ಷೇತ್ರವನ್ನು ಪ್ರತಿನಿಧಿಸುವ ಈ ಯುವ ಶಾಸಕ ವಿಧಾನಸಭೆಯ ಸದಸ್ಯರ ಸಮ್ಮುಖದಲ್ಲಿ “ಭಗವದ್ಗೀತೆ ಆಸ್ ಇಟ್ ಈಸ್” ಗ್ರಂಥವನ್ನು ಎತ್ತಿ ಪ್ರಮಾಣ ವಚನ ಸ್ವೀಕರಿಸಿದರು.

Advertisement

ಹರೇ ಕೃಷ್ಣ ಸಮುದಾಯದೊಂದಿಗೆ ಸಂಪರ್ಕ ಹೊಂದಿರುವ ಕ್ಯಾಲೆಬ್, ತಮ್ಮ ಅಣ್ಣನ ಮೂಲಕ ಇಸ್ಕಾನ್ ಚಟುವಟಿಕೆಗಳಿಗೆ ಸೇರಿಕೊಂಡಿದ್ದರು. 2021ರಲ್ಲಿ ಮೊಂಬಾಸಾದಲ್ಲಿ ಆರಂಭವಾದ “ದಿ ಬೆಟರ್ ಯು ಕ್ಲಬ್” ಮೂಲಕ ವಿದ್ಯಾರ್ಥಿಗಳಲ್ಲಿ ವೈಷ್ಣವ ಸಂಸ್ಕೃತಿ ಪರಿಚಯಿಸಲು ಅವರು ಮುನ್ನಡೆ ವಹಿಸಿದ್ದು, ಕ್ಲಬ್ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಿದ್ದಾರೆ.

ಮೊಂಬಾಸಾ ಕೀನ್ಯಾ ಯುವ ಅಸೆಂಬ್ಲಿ ವ್ಯವಸ್ಥೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಯುವಕರಿಗೆ ರಾಜಕೀಯ ಜವಾಬ್ದಾರಿಯ ಅರಿವು ಮೂಡಿಸುವ ವೇದಿಕೆಯಾಗಿದೆ. ಹಿಂದೆ ಕೆನಡಾದ ಅನಿತಾ ಆನಂದ್ ಸೇರಿದಂತೆ ಹಲವು ಭಾರತೀಯ ಮೂಲದ ನಾಯಕರು ಗೀತೆಯೊಂದಿಗೆ ಪ್ರಮಾಣವಚನ ಸ್ವೀಕರಿಸಿದ್ದರು.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು