ಮಡಿಕೇರಿ: ಕೊಡಗಿನ ಬಿರುನಾಣಿಯಲ್ಲಿ ಕಳೆದ ಎರಡು ದಿನದ ಹಿಂದೆ ಹಿಂದೂ ಸಂಗಮ ಕಾರ್ಯಕ್ರಮಕ್ಕಾಗಿ ಕಟ್ಟಿದ್ದ ಬ್ಯಾನರ್ ಮತ್ತು ಬಂಟಿಂಗ್ಸ್‌ಗಳನ್ನು ಕಿರಾತಕರು ಕಿತ್ತೊಯ್ದಿದ್ದರು. ಇದೀಗ ಇಬ್ಬರ ಮೇಲೆ ಎಫ್ಐಆರ್ ದಾಖಲಾಗಿದೆ.
ಇದೇ ಸೋಮವಾರ ಹಿಂದೂ ಸಂಗಮ ಕಾರ್ಯಕ್ರಮದ ಸಿದ್ಧತೆಯಾಗಿ ಬಿರುನಾಣಿ ಪಟ್ಟಣದಿಂದ ಸುಮಾರು ಒಂದೂವರೆ ಕಿ.ಮೀ. ದೂರದಲ್ಲಿನ ಕೊಡವ ಸಮಾಜದ ತನಕ ಬಂಟಿಂಗ್ಸ್ ಹಾಗೂ ಪ್ಲೆಕ್ಸ್‌ಗಳನ್ನು ಆಯೋಜಕ ಸಮಿತಿ ಪ್ರಮುಖರು ಅಳವಡಿಸಿದ್ದರು.

ಇದನ್ನೂ ಓದಿ: 40ನೇ ವಯಸ್ಸಿನಲ್ಲಿ ಎರಡನೇ ಮದುವೆಯಾದ ಗಬ್ಬರ್ ಶಿಖರ್ ಧವನ್
ಶುಕ್ರವಾರ ತಡರಾತ್ರಿ 12 ಗಂಟೆ ಸುಮಾರಿಗೆ ವಾಹನದಲ್ಲಿ ಆಗಮಿಸಿದ್ದ ಇಬ್ಬರು ಇದನ್ನು ತೆರವು ಮಾಡಿ ಅಪಹರಿಸಿದ ಘಟನೆ ನಡೆದಿದೆ. ಶನಿವಾರ ಬೆಳಿಗ್ಗೆ ಈ ವಿಚಾರ ಬೆಳಕಿಗೆ ಬಂದಿದ್ದು, ಹಿಂದೂ ಬೆಂಬಲಿಗರು ಜಮಾಯಿಸಿ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಕೃತ್ಯ ನಡೆಸಿದವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ. ಬಿರುನಾಣಿ ಪಟ್ಟಣದಲ್ಲಿನ ಸಿಸಿಟಿವಿ ದೃಶ್ಯದಂತೆ ಇಬ್ಬರು ಈ ಕೃತ್ಯ ನಡೆಸಿರುವುದು ಬಯಲಾಗಿದೆ.
ಇದರಂತೆ ಆಯೋಜಕ ಸಮಿತಿ ಮೂಲಕ ಶ್ರೀಮಂಗಲ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಸಂಚಾಲಕ ಅಣ್ಣಳಮಾಡ ರಾಯ್ ಚಿಣ್ಣಪ್ಪ ಅವರು ನೀಡಿರುವ ದೂರಿನಂತೆ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪ್ರೀತಂ ಹಾಗೂ ಕುಪ್ಪಣಮಾಡ ರಾಬಿನ್ ಎಂಬಿಬ್ಬರು ಈ ಕೃತ್ಯವೆಸಗಿರುವ ಬಗ್ಗೆ ಪುಕಾರಾಗಿದ್ದು, ಪ್ರಕರಣ ದಾಖಲಾಗಿದೆ. ಇಬ್ಬರ ಬಂಧನಕ್ಕೆ ಆಯೋಜಕ ಸಮಿತಿ ಒತ್ತಾಯಿಸಿದೆ.
ಹಲವಾರು ಮಂದಿ ಖಂಡಿಸಿದ್ದು. ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಎಲ್ಲೆಡೆ ಸಾಮರಸ್ಯದಿಂದ ಕಾರ್ಯಕ್ರಮ ಜರುಗುತ್ತಿರುವ ವೇಳೆ ಗ್ರಾಮ ವ್ಯಾಪ್ತಿಯಲ್ಲಿ ಶಾಂತಿ ಕದಡುವ ಪ್ರಯತ್ನ ಇದಾಗಿದೆ ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಸ್ಥಳೀಯರು ಆಗಿರುವ ನೆಲ್ಲೀರ ಚಲನ್ ಖಂಡನೆ ವ್ಯಕ್ತಪಡಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಶ್ರೀಮಂಗಲ ಪೊಲೀಸರು ತನಿಖೆಯೊಂದಿಗೆ ಆರೋಪಿಗಳ ಬಂಧನಕ್ಕೆ ಕ್ರಮವಹಿಸಿದ್ದಾರೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

