ಅಡಿಲೇಡ್: ಭಾರತ ವನಿತೆಯರು ಮತ್ತು ಆಸ್ಟ್ರೇಲಿಯಾ ವನಿತೆಯರ ತಂಡದ ನಡುವೆ ನಡೆದ ಅಂತಿಮ ಟಿ-20 ಪಂದ್ಯವನ್ನು ಗೆದ್ದು ಭಾರತ ಸರಣಿ ಕೈವಶ ಮಾಡಿಕೊಂಡಿದೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿ ಇರುವ ಮಹಿಳಾ ತಂಡ ಮೊದಲ ಪಂದ್ಯ ಗೆದ್ದು ಮುನ್ನಡೆ ಸಾಧಿಸಿತ್ತು. ಎರಡನೇ ಪಂದ್ಯ ಗೆದ್ದ ಆಸ್ಟ್ರೇಲಿಯಾ ಸಮಬಲ ಮಾಡಿಕೊಂಡಿತ್ತು. ಕೊನೆಯ ಪಂದ್ಯ ದಲ್ಲಿ ಸ್ಮೃತಿ ಮಂದಾನರ ಭರ್ಜರಿ ಬ್ಯಾಟಿಂಗ್ ಮತ್ತು ಜೆಮಿಮಾ ಅವರ ಅರ್ಧ ಶತಕದ ನೆರವಿಂದ ಪಂದ್ಯ ಗೆದ್ದು ಸರಣಿ ತಮ್ಮದಾಗಿಸಿಕೊಂಡಿತು.

ಇದನ್ನೂ ಓದಿ: ಕೊಡಗು: ಹಿಂದೂ ಸಂಗಮ ಬ್ಯಾನರ್, ಬಂಟಿಂಗ್ಸ್ ಕಿತ್ತೊಯ್ದ ಪ್ರಕರಣ, ಎಫ್ಐಆರ್ ದಾಖಲು
ಇಲ್ಲಿನ ಅಡಿಲೇಡ್ ಓವಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು.

ತಂಡದ ಪರ ಸ್ಮೃತಿ ಮಂದಾನ 86, ಜೆಮಿಮಾ ರೋಡ್ರಿಗಸ್ 59, ರಿಚಾ ಘೋಷ್ 18 ರನ್ ಗಳಸಿದರು. ಆಸ್ಟ್ರೇಲಿಯಾ ಪರ ಅನ್ನಬೆಲ್ ಸುಧರ್‌ಲ್ಯಾಂಡ್ 2, ಸೋಫಿ ಮೆಲಿನಿಕ್ಸ್ ಮತ್ತು ಕಿಮ್ ಗಾರ್ತ್ ತಲಾ ಒಂದು ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 9 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಲಷ್ಟೇ ಶಕ್ತವಾಯಿತು. ತಂಡದ ಪರ ಆಶ್ಲೆಗ್ ಗಾರ್ಡನರ್ 57, ಫೋಬಿ ಲಿಚ್‌ಫೀಲ್ಡ್ 26 ರನ್ ಗಳಿಸಿದರು. ಭಾರತ ಪರ ಶ್ರೇಯಾಂಕ ಪಾಟೀಲ್ ಮತ್ತು ಶ್ರೀ ಚರಣಿ ತಲಾ 3, ಅರುಂಧತಿ ರೆಡ್ಡಿ 2, ರೇಣುಕಾ ಸಿಂಗ್ ಠಾಕೂರ್ ಒಂದು ವಿಕೆಟ್ ಪಡೆದರು.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

