ವಾರಣಾಸಿ: ಪವಿತ್ರ ಕಾಶಿ ನಗರಿಯಲ್ಲಿ ನಡೆದಿದೆ ಎನ್ನಲಾದ ಘಟನೆಯೊಂದರ ವಿಡಿಯೋ ಈಗ ಇಂಟರ್ನೆಟ್ನಲ್ಲಿ ಸಂಚಲನ ಮೂಡಿಸಿದೆ. ಅಘೋರಿ ಸಾಧುವೊಬ್ಬರ ಜೊತೆ ಕುಳಿತು ಚಿಲ್ಲಮ್ (ಮಾದಕ ದ್ರವ್ಯ ಸೇವನೆಗೆ ಬಳಸುವ ಸಾಧನ) ಸೇದಿದ ವಿದೇಶಿ ಮಹಿಳೆಯೊಬ್ಬರು, ನಂತರ ಆ ಸಾಧುವಿಗೆ ಮುತ್ತು ನೀಡಿರುವ ದೃಶ್ಯಗಳು ಕಂಡುಬಂದಿವೆ.
ವೈರಲ್ ಆಗಿರುವ ವಿಡಿಯೋದಲ್ಲಿ ಅಘೋರಿ ಸಾಧು ಮತ್ತು ವಿದೇಶಿ ಮಹಿಳೆಯೊಬ್ಬರು ಅಕ್ಕಪಕ್ಕದಲ್ಲೇ ಕುಳಿತಿದ್ದಾರೆ. ಮಹಿಳೆ ಅಘೋರಿಯೊಂದಿಗೆ ಚಿಲ್ಲಮ್ ಸೇದುತ್ತಾ ಕುಶಲಬರಿತವಾಗಿ ಮಾತನಾಡುತ್ತಿರುವುದು ಕಂಡುಬರುತ್ತದೆ.ಚಿಲ್ಲಮ್ ಸೇದಿದ ನಂತರ ಆ ಮಹಿಳೆ ಹಠಾತ್ತನೆ ಅಘೋರಿಯ ಹತ್ತಿರ ಬಂದು ಚುಂಬಿಸಿದ್ದಾರೆ. ಇದಾದ ಬೆನ್ನಲ್ಲೇ ಆಕೆ ವಿಚಿತ್ರವಾಗಿ ಕೂಗಾಡುತ್ತಾ, ಅಸಾಮಾನ್ಯ ರೀತಿಯಲ್ಲಿ ವರ್ತಿಸುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಇದನ್ನೂ ಓದಿ: ಕಿಮ್ ಜಾಂಗ್ ಉನ್ಗೆ ಶೇ. 99.93ರಷ್ಟು ಮತ! ಉತ್ತರ ಕೊರಿಯಾ ಚುನಾವಣಾ ಫಲಿತಾಂಶ ಕಂಡು ಬೆಚ್ಚಿಬಿದ್ದ ಜಗತ್ತು!
ಇಲ್ಲಿದೆ ನೋಡಿ ವಿಡಿಯೋ:
View this post on Instagram
ಈ ವಿಡಿಯೋ ಧಾರ್ಮಿಕ ಕೇಂದ್ರವಾದ ವಾರಣಾಸಿಯಲ್ಲಿ ನಡೆದಿದೆ ಎನ್ನಲಾಗುತ್ತಿದ್ದು, ಅನೇಕರು ಇದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಅನಾಚಾರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪವಿತ್ರ ತಾಣಗಳಲ್ಲಿ ಇಂತಹ ವರ್ತನೆಗಳನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಈ ವಿಡಿಯೋ ಯಾವಾಗ ಚಿತ್ರೀಕರಿಸಲಾಗಿದೆ ಮತ್ತು ಘಟನೆ ನಡೆದ ನಿಖರ ಸ್ಥಳ ಯಾವುದು ಎಂಬ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಈ ಬಗ್ಗೆ ಪೊಲೀಸರ ತನಿಖೆ ನಿರೀಕ್ಷಿಸಲಾಗಿದೆ.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

