Breaking News

ಪುತ್ತಿಲ ಪರಿವಾರ ಕೊಡಿಪ್ಪಾಡಿ-ಕುಳ ಘಟಕದಿಂದ ಉಚಿತ ವೈದ್ಯಕೀಯ ತಪಾಸಣೆ, ರಕ್ತದಾನ ಶಿಬಿರ: ಅರುಣ್ ಕುಮಾರ್ ಪುತ್ತಿಲರಿಗೆ ಸನ್ಮಾನ

ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಕೊಡಿಪ್ಪಾಡಿ ಹಾಗೂ ಕುಳ ಘಟಕ ಮತ್ತು ರೋಟರಿ ಕ್ಲಬ್ ಪುತ್ತೂರು ಇವರ ಆಶ್ರಯದಲ್ಲಿ, ಶ್ರೀ ಸತ್ಯಸಾಯಿ ಸೇವಾ ಸಮಿತಿ, ಈಶ್ವರಾಂಭ ಟ್ರಸ್ಟ್, ಜಸ್ಟಿಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ ಹಾಗೂ ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ಸಹಯೋಗದಲ್ಲಿ ಆಯೋಜಿಸಲಾದ ಉಚಿತ ವೈದ್ಯಕೀಯ ತಪಾಸಣೆ ಮತ್ತು ರಕ್ತದಾನ ಶಿಬಿರವು ಆ.9ರಂದು ಓಜಾಲದ ದ.ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮವನ್ನು ಶ್ರೀ ವಿಷ್ಣುಮೂರ್ತಿ ಕೆದಿಲಾಯ ಉದ್ಘಾಟಿಸಿದರು. ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಅಧ್ಯಕ್ಷತೆ ವಹಿಸಿದ್ದರು.

ಇದನ್ನೂ ಓದಿ,:ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಕೊಡಿಪ್ಪಾಡಿ-ಕುಳ ಘಟಕದ ವತಿಯಿಂದ ಆ.9ರಂದು ಉಚಿತ ವೈದ್ಯಕೀಯ ತಪಾಸಣೆ, ರಕ್ತದಾನ ಶಿಬಿರ

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ರೋ. ರವಿಕುಮಾರ್ ರೈ ಮಠ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಪುತ್ತೂರು ಅಧ್ಯಕ್ಷ ಶ್ರೀರಾಮ ಭಟ್ ಪಾತಾಳ, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಗಣೇಶ್ ಪಾಂಡೇಲು, ವಾಸುಕಿ ಸುಬ್ರಹ್ಮಣ್ಯ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಮಿಥುನ್ ಓಜಾಲ, ಶಿಬಿರದ ಪ್ರಭಾರಿಗಳಾದ ಸಮುದಾಯ ದಂತ ಆರೋಗ್ಯ ವಿಭಾಗದ ಏನಪೋಯ ದಂತ ಕಾಲೇಜು ಮತ್ತು ದೇರಳಕಟ್ಟೆ ಆಸ್ಪತ್ರೆಯ ಪ್ರತಿನಿಧಿಗಳು, ಟ್ರಸ್ಟ್‌ನ ಕೊಡಿಪ್ಪಾಡಿ ಘಟಕದ ಪ್ರಕಾಶ್ ಬೈರಂಗಡಿ ಹಾಗೂ ಕುಳ ಘಟಕದ ರಾಜೇಶ್ ಭಟ್ ಕುಳ ಉಪಸ್ಥಿತರಿದ್ದರು.

ಚಂದ್ರಶೇಖರ ಹನಿಯೂರು ಸ್ವಾಗತಿಸಿದರು. ರಾಧಿಕಾ ರಾಜೇಶ್ ಭಟ್ ಕುಳ ಕಾರ್ಯಕ್ರಮ ನಿರೂಪಣೆ ನಡೆಸಿದರೆ, ಮುರಳೀಧರ ಓಜಾಲ ವಂದನಾರ್ಪಣೆ ಸಲ್ಲಿಸಿದರು. ಜನ್ಯಶ್ರೀ, ಯಶ್ವಿನ್ ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕದ ಪ್ರತಿಷ್ಠಿತ ವಾಹಿನಿಯೊಂದರಿಂದ ಪ್ರದಾನವಾಗುವ ‘ಜನ ಮೆಚ್ಚಿದ ಜನನಾಯಕ’ ಪ್ರಶಸ್ತಿ ಹಾಗೂ ‘ಪಾತಾಳ ಪ್ರಶಸ್ತಿ’ಗೆ ಭಾಜನರಾದ ಅರುಣ್ ಕುಮಾರ್ ಪುತ್ತಿಲ ಅವರನ್ನು ಘಟಕದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಫಲಾನುಭವಿಗಳು:

ರಕ್ತದಾನ- 47

ವೈದ್ಯಕೀಯ – 120

ದಂತ ಚಿಕಿತ್ಸೆ – 41

ಕಣ್ಣಿನ ತಪಾಸಣೆ – 76

ಕನ್ನಡಕ ವಿತರಣೆ – 54

ಸಾಮಾನ್ಯ ತಪಾಸಣೆ (ರಕ್ತದೊತ್ತಡ/ಸಕ್ಕರೆ ಕಾಯಿಲೆ) – 63

ಥೈರಾಯ್ಡ್ – 38

ಇಸಿಜಿ – 13

ಅಸ್ಥಿರೋಗ – 17

ಚರ್ಮರೋಗ – 7

ಕಿವಿ, ಮೂಗು, ಗಂಟಲು – 15

ಗ್ರೀನ್ ಕಾರ್ಡ್ ವಿತರಣೆ – 17

ರೆಫರೆನ್ಸ್ ಕಾರ್ಡ್ – 15

ಲಿಕ್ವಿಡ್ ಲವ್ ನೋಂದಣಿ – 54

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *