Breaking News

ಲಿಫ್ಟ್ ಬಟನ್ ಪ್ಯಾನೆಲ್ ಮೇಲೆಯೇ ಉಚ್ಚೆ ಹೊಯ್ದ ಯುವಕ!: ಸಿಸಿಟಿವಿ ಕ್ಯಾಮೆರಾದಲ್ಲಿ ಸರೆ – ಘಾಜಿಯಾಬಾದ್ ಅಪಾರ್ಟ್‌ಮೆಂಟ್‌ನಲ್ಲಿ ವಿಕೃತ ಕೃತ್ಯ

ಘಾಜಿಯಾಬಾದ್: ಹೌಸಿಂಗ್ ಸೊಸೈಟಿಯೊಂದರ ಲಿಫ್ಟ್ ಒಳಗೆ ಯುವಕನೊಬ್ಬ ಅಪಸವ್ಯ ಮೆರೆದು, ಲಿಫ್ಟ್‌ನ ಬಟನ್ ಹಾಗೂ ಕಂಟ್ರೋಲ್ ಪ್ಯಾನೆಲ್ ಮೇಲೆಯೇ ಮೂತ್ರ ವಿಸರ್ಜನೆ ಮಾಡಿರುವ ಕಸಾಯಿ ಕೃತ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಉತ್ತರ ಪ್ರದೇಶದ ಘಾಜಿಯಾಬಾದ್‌ನ ಇಂದಿರಾಪುರಂನಲ್ಲಿರುವ ‘ಶಿಪ್ರಾ ಕೃಷ್ಣ ವಿಸ್ಟಾ’ ಅಪಾರ್ಟ್‌ಮೆಂಟ್‌ನ ‘F-2’ ಟವರ್‌ನಲ್ಲಿ ಈ ಅಸಹ್ಯಕರ ಘಟನೆ ನಡೆದಿದೆ.

ಅಪಾರ್ಟ್‌ಮೆಂಟ್‌ನ ಲಿಫ್ಟ್ ಒಳಗೆ ಅಳವಡಿಸಲಾಗಿದ್ದ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಇಡೀ ದೃಶ್ಯ ದಾಖಲಾಗಿದೆ. ಲಿಫ್ಟ್ ಏರಿದ ಯುವಕ, ಲಿಫ್ಟ್ ಚಲಿಸುತ್ತಿದ್ದಂತೆಯೇ ನೇರವಾಗಿ ಅದರ ಸ್ವಿಚ್ ಹಾಗೂ ಬಟನ್ ಪ್ಯಾನೆಲ್ ಇರುವ ದಿಕ್ಕಿಗೆ ಮೂತ್ರ ವಿಸರ್ಜನೆ ಮಾಡಲು ಪ್ರಾರಂಭಿಸಿದ್ದಾನೆ.


ಲಿಫ್ಟ್ ಒಂದು ಮಹಡಿಯಲ್ಲಿ ನಿಂತು ಬಾಗಿಲು ತೆರೆದಾಗ, ಹೊರಗಿದ್ದ ಮತ್ತೊಬ್ಬ ನಿವಾಸಿ ಒಳಗೆ ಬರಲು ಮುಂದಾಗಿದ್ದಾರೆ. ಆದರೆ ಯುವಕ ಮಾಡುತ್ತಿದ್ದ ಅಸಹ್ಯ ಕೃತ್ಯವನ್ನು ಕಂಡು ದಿಗ್ಭ್ರಮೆಗೊಂಡು ತಕ್ಷಣವೇ ಹಿಂದೆ ಸರಿದಿದ್ದಾರೆ. ಈ ಘಟನೆಯ ನಂತರವೂ ಆ ಯುವಕ ಏನೂ ತಿಳಿಯದಂತೆ ತನ್ನ ಪ್ರಯಾಣ ಮುಂದುವರಿಸಿ ಬಳಿಕ ಲಿಫ್ಟ್‌ನಿಂದ ಹೊರನಡೆದಿದ್ದಾನೆ.

ಇದನ್ನೂ ಓದಿ: ದಿಗ್ಗಜ ನಟ ಅನಂತ್ ನಾಗ್‌ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಗರಿ

ಸಾಮಾನ್ಯವಾಗಿ ಸಾರ್ವಜನಿಕವಾಗಿ ಎಲ್ಲರೂ ಬಳಸುವ ಲಿಫ್ಟ್ ಬಟನ್‌ಗಳ ಮೇಲೆಯೇ ಮೂತ್ರ ವಿಸರ್ಜನೆ ಮಾಡಿರುವುದರಿಂದ ಅಪಾರ್ಟ್‌ಮೆಂಟ್‌ನ ನಿವಾಸಿಗಳು ತೀವ್ರ ಆತಂಕ ಹಾಗೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ವಿಕೃತ ನಡವಳಿಕೆಯಿಂದ ಸಾಂಕ್ರಾಮಿಕ ರೋಗಗಳು ಹಾಗೂ ನೈರ್ಮಲ್ಯದ ಸಮಸ್ಯೆ ಎದುರಾಗುತ್ತದೆ ಎಂದು ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದು, ಸೊಸೈಟಿ ಆಡಳಿತ ಮಂಡಳಿ ಹಾಗೂ ಪೊಲೀಸರು ಆ ಯುವಕನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *